ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕರಿಚಿರತೆ ಅವತಾರದಲ್ಲಿ ಶೀಘ್ರವೇ ಬರಲಿರುವ ವಿಜಯ್ (Kari Chirathe | Vijay | Sharmila Mandre)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ದುನಿಯಾ ವಿಜಯ್ ಅಭಿನಯದ ಮೂರ್ನಾಲ್ಕು ಚಿತ್ರಗಳ ಶೂಟಿಂಗ್ ಏಕಕಾಲದಲ್ಲಿ ನಡೆಯುತ್ತಿದ್ದು, ಇದರಲ್ಲಿ ಯಾವುದು ಮೊದಲು ತೆರೆಗೆ ಬರುತ್ತದೆ ಎನ್ನುವ ಜನರ ಕುತೂಹಲಕ್ಕೆ ಒಂದು ಉತ್ತರ ಸಿಕ್ಕಿದೆ. ಕರಿಚಿರತೆ ಸಂಪೂರ್ಣ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರಮಂದಿರಗಳಲ್ಲಿ ಶೀಘ್ರವೇ ತೆರೆ ಕಾಣಲಿದೆ.

ಆಕ್ಷನ್ ಕಿಂಗ್ ವಿಜಯ್ ಹಾಗೂ ಶರ್ಮಿಳಾ ಮಾಂಡ್ರೆ ಅಭಿನಯದ ಈ ಚಿತ್ರ ಸಾಹಸ ಹಾಗೂ ಮನರಂಜನೆಯ ಮಿಶ್ರಣ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಏನೇ ಇರಲಿ, ಇತ್ತೀಚೆಗೆ ವಿಜಯ್ ಅವರ ಚಿತ್ರಗಳು ನಿರ್ಮಾಪಕರಿಗೆ ಹೇಳಿಕೊಳ್ಳುವಂಥ ಸೋಲು ತರದಿದ್ದರೂ ನಿರೀಕ್ಷೆಯ ಮಟ್ಟದ ಯಶಸ್ಸು ಕಾಣುತ್ತಿಲ್ಲ ಎಂಬುದು ಅಷ್ಟೇ ನಿಜ.

ಗಜ, ರಾಮ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಅನುಭವ ಹೊಂದಿರುವ ಮಾದೇಶ್ ಈ ಚಿತ್ರದ ನಿರ್ದೇಶಕರು. ನಿರ್ಮಾಣವನ್ನು ಕೃಷ್ಣಯ್ಯ ಹಾಗೂ ಮೋಹನ್ ಎಂಬುವರು ವಹಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಜಯ್ ಎಂದೂ ಕಾಣದ ಮಾದರಿಯ ಅಪರೂಪದ ಅಭಿನಯ ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಸಾಧು ಕೋಕಿಲ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ಜೈಜಗದೀಶ್, ರಂಗಾಯಣ ರಘು, ಸಂಗೀತ, ಸುಧಾ ಬೆಳವಾಡಿ ಮತ್ತಿತರರು ಇದ್ದಾರೆ. ಸಾಕಷ್ಟು ನಿರೀಕ್ಷೆ ಹೊತ್ತಿರುವ ಚಿತ್ರ ಅತಿ ಶೀಘ್ರ ಪ್ರೇಕ್ಷಕರಿಗೆ ಲಭಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕರಿಚಿರತೆ, ವಿಜಯ್, ಶರ್ಮಿಳಾ ಮಾಂಡ್ರೆ