ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೇಳುಗರ ಕಿವಿ ತಂಪು ಮಾಡುತ್ತಿರುವ ಕಾಲ್ಗೆಜ್ಜೆ (Kalgejje | Roopika | Shridhar | Vishwas)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಇದೀಗ ಗಾಂಧಿನಗರದ ತುಂಬಾ ಎಲ್ಲಿ ನೋಡಿದರೂ ಕಾಲ್ಗೆಜ್ಜೆ ಸದ್ದೇ ಕೇಳುತ್ತಿದೆ. ಏಕೆಂದರೆ ಇದರ ಹಾಡು ಜನರನ್ನು ಅಷ್ಟೊಂದು ಮರಳು ಮಾಡಿದೆ. ನಟಿ ರೂಪಿಕಾ, ನಟ ಶ್ರೀಧರ್, ಯುವ ನಟ ವಿಶ್ವಾಸ್ ಅಭಿನಯದ ಈ ಚಿತ್ರ ಸಂಗೀತ ಹಾಗೂ ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡ ಕಥೆಯನ್ನು ಹೊಂದಿರುವುದೂ ಕೂಡಾ ಇದಕ್ಕೆ ಕಾರಣ.

ಹೌದು. ಬ್ರೈಟ್ ಎಂಟರ್‌ಟೈನ್‌ಮೆಂಟ್ ಹೊರತಂದಿರುವ ಸಂಗೀತ ಪ್ರಧಾನ ಚಿತ್ರ ಇದಾಗಿದೆ. ಇದಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕೆ. ಕಲ್ಯಾಣ್, ಹಂಸಲೇಖ ಹಾಗೂ ನಿರ್ದೇಶಕ ಎಸ್. ಮಹೇಂದರ್ ಹಾಡುಗಳನ್ನು ಬರೆದಿದ್ದಾರೆ. ಹೀಗಿದ್ದ ಮೇಲೆ ಇದೊಂದು ಸಂಗೀತದ ಸುಗ್ಗಿಯನ್ನೇ ನೀಡುವ ಚಿತ್ರವಾಗಿದೆ ಎನ್ನುವುದರಲ್ಲಿ ಯಾವುದೇ ಅಚ್ಚರಿ ಇಲ್ಲ. ಚಿತ್ರದ ಹಾಡನ್ನು ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ಸಂಗೀತ ನಿರ್ದೇಶಕ ಗಂಧರ್ವ ಹಾಗೂ ಚಿತ್ರದ ನಿರ್ದೇಶಕ ಎ. ಬಂಗಾರು ವೀಕ್ಷಿಸಿ ಪುಳಕಿತರಾಗಿದ್ದಾರಂತೆ.

ಒಟ್ಟಾರೆ ಗೀತ ರಚನೆಕಾರರೆಲ್ಲಾ ಈ ಹಾಡನ್ನು ಮೆಚ್ಚಿಕೊಂಡಿದ್ದು, ಎದೆತುಂಬಿ ಹೊಗಳಿದ್ದಾರೆ. ಇವರ ಯತ್ನಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಲಭಿಸಿರುವುದು ಇನ್ನಷ್ಟು ಗೀತರಚನೆಗೆ ಉತ್ತೇಜನ ನೀಡಿದಂತೆ ಆಗಿದೆ. ಏನೇ ಇರಲಿ, ಹಾಡುಗಳ ಪ್ರಭಾವದಿಂದ ಈ ಚಿತ್ರ ಗೆಲ್ಲುತ್ತದಾ ಅಂತ ಕಾದು ನೋಡಬೇಕಿದೆ.

ಇನ್ನಷ್ಟು ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಲ್ಗೆಜ್ಜೆ, ರೂಪಿಕಾ, ಶ್ರೀಧರ್, ವಿಶ್ವಾಸ್