ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ದರ್ಶನ್‌ರ ಶೌರ್ಯ ಮೆಚ್ಚಿದ ಅಭಿಮಾನಿಗಳು (Darshan | Shourya | Sadhu Kokila)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಈ ವಾರ ಬಿಡುಗಡೆಯಾದ ಏಕೈಕ ಚಿತ್ರ ಶೌರ್ಯಕ್ಕೆ ಜನ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾದ ಚಿತ್ರಕ್ಕೆ ದರ್ಶನ್‌ರ ಯುವ ಅಭಿಮಾನಿಗಳ ಸಾಥ್ ಸಿಕ್ಕಿದ್ದು, ಚಿತ್ರತಂಡದ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ಇಂದಿಗೂ ಪಡ್ಡೆ ಹುಡುಗರ ನಂಬಿಕೆಯ ನಟ ಎನಿಸಿಕೊಂಡಿರುವ ದರ್ಶನ್ ಎಂದಿನಂತೆ ಈ ಚಿತ್ರದಲ್ಲಿಯೂ ಹೊಡಿ, ಬಡಿ ಪಾತ್ರವನ್ನು ಮುಂದುವರಿಸಿದ್ದು ಇದು ಮತ್ತೊಮ್ಮೆ ಒಂದು ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ತೆರೆಕಂಡ ಚಿತ್ರವನ್ನು ಸಂತೋಷ್ ಚಿತ್ರಮಂದಿರದಲ್ಲಿ ವೀಕ್ಷಿಸಿದ ಅಭಿಮಾನಿಗಳ ಉತ್ಸಾಹ, ಚೀರಾಟ, ಕೂಗಾಟ, ಅಭಿಮಾನದ ಮಾತುಗಳೇ ಮೇಳೈಸಿತ್ತು.

ಚಿತ್ರ ನೋಡಿದ ಅಭಿಮಾನಿಗಳು ಸಾಧು ಕೋಕಿಲ ಹಾಗೂ ದರ್ಶನ್‌ರನ್ನು ಕೊಂಡಾಡಿದರು. ಒಟ್ಟಾರೆ ಈ ಒಂದು ಚಿತ್ರ ಸಾಕಷ್ಟು ಆಕ್ಷನ್ ಜತೆ ಅತ್ಯುತ್ತಮ ಸಾಂಸಾರಿಕ ಅಂಶವನ್ನು ಒಳಗೊಂಡಿದ್ದು, ಒಂದೆರಡು ದಿನದ ನಂತರ ಸಾಂಸಾರಿಕ ಚಿತ್ರ ವೀಕ್ಷಿಸುವವರೂ ಕುಟುಂಬ ಸಮೇತರಾಗಿ ಇತ್ತ ಬರುತ್ತಾರೆ ಎನ್ನುವ ವಿಶ್ವಾಸವನ್ನು ನಿರ್ದೇಶಕ ಸಾಧು ವ್ಯಕ್ತಪಡಿಸಿದರು.

ತುಂಬಾ ದಿನಗಳ ನಂತರ ಇದೀಗ ಮೇಲೆ ದರ್ಶನ್ ಚಿತ್ರ ತೆರೆಗೆ ಬರುತ್ತಿದೆ. ಇದನ್ನು ನೋಡಿ ಜನ ಖುಷಿ ಪಟ್ಟಿದ್ದಾರೆ. ಭರ್ಜರಿ ಓಪನಿಂಗ್ ನೀಡಿರುವ ಚಿತ್ರ ಪ್ರೇಮಿಗಳಿಗೆ ಧನ್ಯವಾದ ಅಂತ ಸಹ ಸಾಧು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಹಾಂ ಅಂದ ಹಾಗೆ, ಇದು ತೆಲುಗಿನ ಶೌರ್ಯಂ ಚಿತ್ರದ ರಿಮೇಕ್ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ವಾ!
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದರ್ಶನ್, ಶೌರ್ಯ, ಸಾಧು ಕೋಕಿಲ