ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬ್ಯುಸಿಯಾದ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ (Nidhi Subbayya | Yogaraj Bhat | Pancharangi | Digant)
ಸುದ್ದಿ/ಗಾಸಿಪ್
Bookmark and Share Feedback Print
 
PR
ಭಟ್ಟರ ಪಂಚರಂಗಿ ಚಿತ್ರದಲ್ಲಿ ನಟಿಸಲು ಒಪ್ಪಿದ್ದೇ ತಡ, ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಇಂದು ಕನ್ನಡದಲ್ಲಿ ತುಂಬಾ ಬ್ಯುಸಿ ಆಗಿರುವ ನಟಿಯಾಗಿ ಬದಲಾಗಿಬಿಟ್ಟಿದ್ದಾರೆ. ವೀರಬಾಹು ಚಿತ್ರದಲ್ಲಿ ದುನಿಯಾ ವಿಜಯ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ಪಂಚರಂಗಿಯಲ್ಲಿ ನಿರ್ದೇಶಕರ ಆಸೆಗೆ ತಕ್ಕಂತೆ ಪಾತ್ರಕ್ಕೆ ಉತ್ತಮವಾಗಿ ಜೀವ ತುಂಬುವಂತೆ ನಟಿಸಿದ್ದಾರಂತೆ. ಭಟ್ಟರ ಸಿನಿಮಾಗಳೇ ಹಾಗೆ. ಒಂಥರಾ ಮದುವೆ ಊಟ ಇದ್ದ ಹಾಗೆ. ಒಂದು ಒಳ್ಳೆ ಕಥೆ, ಹಾಡು, ಸಂಗೀತ, ಸಾಹಿತ್ಯ, ಕ್ಯಾಮರಾ ಕೈಚಳಕ, ಸಂಭಾಷಣೆ ಎಲ್ಲವೂ ಪಕ್ವವಾಗಿರುವ ಇರುತ್ತದೆ. ಮೆಲೋಡಿ ಹಾಡಿಗೆ ಕೊರತೆ ಇರುವುದಿಲ್ಲ. ಇಂಥದ್ದೊಂದು ಚಿತ್ರದಲ್ಲಿ ನಟಿಸುವುದು ತನಗೂ ಅದೃಷ್ಟ ನೀಡಿದೆ ಎನ್ನುತ್ತಾರೆ.

ಮುಂದಿನ ತಿಂಗಳು ಮೂರನೇ ತಾರೀಖು ಬಿಡುಗಡೆ ಆಗುವ ಈ ಚಿತ್ರದ ಬಗ್ಗೆ ನಿಧಿ ಅಪಾರ ಅಭಿಮಾನ ಇರಿಸಿಕೊಂಡಿದ್ದಾರೆ. ಮೂಡುಬಿದ್ರೆ ದೇವಸ್ಥಾನ ಕಟ್ಟೆ ಮೇಲೆ ದಿಗಂತ್ ಮಲಗಿ ಶೂಟ್ ಮಾಡುವ ಸಂದರ್ಭದಲ್ಲಿ ದಿಗಂತ್ ನಿಜವಾಗಿಯೂ ನಿದ್ದೆ ಹೋಗಿ ಬಿಟ್ಟಿದ್ದರಂತೆ. ಕೂತಲ್ಲೇ ನಿದ್ದೆ ಮಾಡುವ ರೂಢಿ ಅವರಿಗೆ ಇದೆ ಅನ್ನುವುದು ನನಗೆ ಈಗ ತಿಳಿಯಿತು ಅಂತ ನಗುತ್ತಾ ಹೇಳುತ್ತಾರೆ.

ಒಟ್ಟಾರೆ ಭಟ್ಟರ ಮೂಲಕ ಕನ್ನಡಕ್ಕೊಬ್ಬ ಉತ್ತಮ ನಟಿಯ ಕೊಡುಗೆ ಆಗುತ್ತಿದೆ. ಅದನ್ನು ಜನ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಬೇಕು. ಯಶ ಕಂಡಲ್ಲಿ ನಮ್ಮ ಕನ್ನಡ ಭಾಷೆಯ ಮತ್ತೊಬ್ಬ ಬೆಡಗಿಗೆ ಉತ್ತಮ ಅವಕಾಶ ಸೃಷ್ಟಿಯಾದಂತೆಯೇ ಸರಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಧಿ ಸುಬ್ಬಯ್ಯ, ಯೋಗರಾಜ್ ಭಟ್, ಪಂಚರಂಗಿ, ದಿಗಂತ್