ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೋಮಲ್, ಭಾವನಾರ ವಾರೆವ್ಹಾ ಐಟಂ ಸಾಂಗ್! (Komal | Bhavana Rao | Warewah)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಗರದ ರಾಕ್‌ಲೈನ್ ಸ್ಟುಡಿಯೋದಲ್ಲಿ ವಾರೆ ವ್ಹಾ ಚಿತ್ರದ ಐಟಂ ಹಾಡಿನ ಶೂಟಿಂಗ್ ನಡೆಯುತ್ತಿದೆ. ಕೋಮಲ್ ಈ ಹಾಡಿನಲ್ಲಿ ಸಾಕಷ್ಟು ತಲ್ಲೀನರಾಗಿದ್ದು ಫುಲ್ ಡಾನ್ಸಿಂಗ್ ಮೂಡಿನಲ್ಲಿ ಗೋಚರಿಸಿದರು. ಅಲ್ಲೊಂದು ಜಾಲೀಬಾರ್, ಗುಂಡು ತುಂಡು, ಐಟಂ ಡಾನ್ಸರ್ ಎಲ್ಲವೂ ರೆಡಿಯಾಗಿತ್ತು. ಗಮ್ಮತ್ತಾಗಿ ಕೋಮಲ್ ತಮ್ಮ ತಂಡದೊಂದಿಗೆ ಹೆಜ್ಜೆ ಹಾಕಿದರು.

ಇತ್ತೀಚೆಗೆ ಪ್ರತಿಯೊಂದು ಚಿತ್ರದಲ್ಲೂ ಐಟಂ ಸಾಂಗ್ ಸಾಮಾನ್ಯ ಅನ್ನುವಂತೆ ಆಗಿದ್ದು, ಈ ಚಿತ್ರಕ್ಕೂ ಅದರ ಬಳಕೆ ಆಗಿದ್ದು ಅಚ್ಚರಿ ಏನಲ್ಲ. ಚಿತ್ರವನ್ನು ವಿಜಯಲಕ್ಷ್ಮಿ ಸಿಂಗ್ ನಿರ್ದೇಶಿಸಿದ್ದಾರೆ. ಇದು ಅವರ ಮೂರನೇ ನಿರ್ದೇಶನದ ಚಿತ್ರ. ಪತಿ ಜೈಜಗದೀಶ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೋಮಲ್‌ಗೆ ಇದು 19ನೆಯದು.

ಅಂದಹಾಗೆ, ಈ ಚಿತ್ರದ್ಲಲಿ ಕೋಮಲ್ ಮುಖ್ಯ ಪಾತ್ರದಲ್ಲಿದ್ದು, ಇವರು ನಾಯಕರಾಗಿ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಹಿಂದೆ ಮಿ. ಗರಗಸ ಚಿತ್ರದಲ್ಲೂ ನಾಯಕರಾಗಿದ್ದು. ಆದರೆ ಇದು ಅವರ ಪಾಲಿಗೆ ಒಂದು ವಿಭಿನ್ನ ಚಿತ್ರವಾಗಿದೆ. ಸಾಕಷ್ಟು ನಿರೀಕ್ಷೆಯನ್ನೂ ಇರಿಸಿಕೊಂಡಿದ್ದಾರೆ. ಹಾಸ್ಯಕ್ಕೆ ಇಲ್ಲಿ ಕೊರತೆ ಇಲ್ಲ ಎನ್ನುತ್ತಾರೆ.

ಚಿತ್ರದಲ್ಲಿ ಗಾಳಿಪಟ ಚಿತ್ರದಲ್ಲಿ ನಧೀಂ ಧೀಂ ತನ... ಎಂದು ಕುಣಿದ ಭಾವನಾ ರಾವ್ ಈ ಚಿತ್ರದಲ್ಲಿ ಕೋಮಲ್‌ಗೆ ನಾಯಕಿಯಾಗಿದ್ದಾರೆ. ಕೋಮಲ್‌ಗೆ ಶುಭವಾಗಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೋಮಲ್, ಭಾವನಾ ರಾವ್, ವಾರೆ ವ್ಹಾ