ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗುರುಪ್ರಸಾದ್ 'ಡೈರೆಕ್ಟರ್ ಸ್ಪೆಷಲ್'ಗೆ ತಬಲಾ ನಾಣಿ ನಾಯಕ (Guruprasad | Jugalbandi | Eddelu Manjunatha | Tabala Naani)
ಸುದ್ದಿ/ಗಾಸಿಪ್
Bookmark and Share Feedback Print
 
ಒಬ್ಬೊಬ್ಬರೇ ಹಾಸ್ಯ ಕಲಾವಿದರು ನಾಯಕರಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ಮೊನ್ನೆ ಮೊನ್ನೆ ಕೋಮಲ್ ನಾಯಕರಾದ ಸುದ್ದಿಯನ್ನು ಕೇಳಿದ್ದೆವು. ಇದೀಗ ಜನಪ್ರಿಯ ಹಾಸ್ಯ ಕಲಾವಿದ ಹಾಗೂ ರಂಗಭೂಮಿ ನಟ ತಬಲಾ ನಾಣಿಯ ಸರದಿ.

ಮಠ, ಎದ್ದೇಳು ಮಂಜುನಾಥ ಸೇರಿದಂತೆ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ, ಸುವರ್ಣ ವಾಹಿನಿ 'ಸಿಂಗ್ರಿ ರೌಂಡ್ಸ್‌'ನ ಸಿಂಗ್ರಿಗೆ ದನಿಯಾಗಿರುವ ತಬಲಾ ನಾಣಿ ಚಿತ್ರವೊಂದರ ನಾಯಕ. ನಿರ್ದೇಶಕರೇನು ಕಡಿಮೆಯವರಲ್ಲ. ನಮ್ಮ ಗುರುಪ್ರಸಾದ್ ಅವರು.

ಈಗಾಗಲೇ ಎದ್ದೇಳು ಮಂಜುನಾಥ ಹಾಗೂ ಮಠ ಚಿತ್ರಗಳನ್ನು ನಿರ್ದೇಶಿಸಿ ಕಡಿಮೆ ಅವಧಿಯಲ್ಲೇ ಒಳ್ಳೆ ಹೆಸರು ಮಾಡಿದವರು. ಇವರ ಹೊಸ ಚಿತ್ರ 'ಡೈರೆಕ್ಟರ್ ಸ್ಪೆಷಲ್'ಗೆ ಕೋಮಲ್ ನಾಯಕರಾಗಬೇಕಿತ್ತು. ಆದರೆ ಅವರು ಹಿಂದೆ ಸರಿದಿದ್ದರಿಂದ ಇದೀಗ ಅದೃಷ್ಟ ನಾಣಿ ಪಾಲಾಗಿದೆ.

ಇದನ್ನು ಘೋಷಿಸಿರುವುದು ಖುದ್ದು ಗುರುಪ್ರಸಾದ್ ಆಗಿರುವುದರಿಂದ ನಂಬಲೇಬೇಕಾದ ಸುದ್ದಿಯಿದು. ಈ ರೂಪದಲ್ಲಿ ನಾಣಿ ಪೋಷಕ ಪಾತ್ರದಿಂದ ನಾಯಕರಾಗಿ ಪ್ರಮೋಶನ್ ಪಡೆದಿದ್ದಾರೆ. ಇದೊಂದು ಛಾಲೆಂಜ್ ಕೈಗೆತ್ತಿಕೊಂಡಿರುವ ಗುರು ಒಂದು ಅಸಾಧಾರಣ ಸಾಧನೆಗೆ ಮುಂದಾಗಿದ್ದಾರೆ.

ಚಿತ್ರಕ್ಕೆ 'ಜುಗಲ್ಬಂದಿ' ಎಂದು ಹೆಸರಿಡಲಾಗಿದೆ. ಇಲ್ಲಿ ಕೂಡ ಡೈಲಾಗೇ ಪರಮಾತ್ಮ ಎಂದು ಮತ್ತೆ ಹೇಳುವ ಅಗತ್ಯವಿಲ್ಲ. ನಾಣಿ ನಿಜಕ್ಕೂ ಅಪ್ರತಿಮ ಕಲಾವಿದ. ಜತೆಗೆ ಉತ್ತಮ ನಾಟಕಕಾರನೂ ಹೌದು. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ನಟಿಸಿ, ವಿಶೇಷವಾಗಿ ಮಠ ಚಿತ್ರದಲ್ಲಿ ಕುಡುಕನ ಪಾತ್ರ ಮಾಡಿ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ನಾಣಿಯ ಬದುಕು ಈ ಚಿತ್ರದ ಮೂಲಕ ಹಸನಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗುರುಪ್ರಸಾದ್, ಜುಗಲ್ಬಂದಿ, ತಬಲಾ ನಾಣಿ, ಕೋಮಲ್, ಜಗ್ಗೇಶ್