ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಕೃಷ್ಣನ್ ಲವ್ ಸ್ಟೋರಿ'ಯ ಶಶಾಂಕ್ ಕಣ್ಣು ಸುದೀಪ್ ಮ್ಯಾಲೆ! (Shashank | Sudeep | Krishnan Love Story | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
ಶಶಾಂಕ್ ಸಿಕ್ಸರ್ ಬಾರಿಸಿ, ಮೊಗ್ಗಿನ ಮನಸ್ಸನ್ನು ಅರಳಿಸಿ, ಮುಂದೆ ಕೃಷ್ಣನ್ ಲವ್ ಸ್ಟೋರಿಗೂ ಕ್ಲಾಪ್ ಮಾಡಿ ಈಗ ಹಿರಿಯ ನಟ ಸುದೀಪ್‌ಗೆ ಮಣೆ ಹಾಕಲು ಮುಂದಾಗಿದ್ದಾರೆ. ಈ ಮೂಲಕ ಗೆಲ್ಲುವ ಕುದುರೆ ಹಿಂದೆ ಕೊನೆಗೂ ಬಿದ್ದಿದ್ದಾರೆ.

ಮೂರು ಯಶಸ್ವಿ ಚಿತ್ರವನ್ನು ನೀಡಿದ ನಂತರ ಹೊಸಬರ ಬದಲು ಹಳಬರಿಗೆ ಮಣೆ ಹಾಕಲು ಮುಂದಾಗಿದ್ದಾರೆ ಶಶಾಂಕ್. ತಮ್ಮ ಈ ಮೂರು ಗೆಲುವಿನ ನಂತರವೇ ಇವರು ದೊಡ್ಡ ಸ್ಟಾರ್‌ಗೆ ಮನವಿ ಮಾಡಲು ಹೊರಟಿದ್ದಾರೆ. ಈ ಮೂಲಕ ಸುದೀಪ್ ಅವರನ್ನು ಹಾಕಿಕೊಂಡು ಚಿತ್ರ ಮಾಡಲಿದ್ದಾರೆ. ಸದ್ಯ ಇದಿನ್ನೂ ಮಾತುಕತೆ ಹಂತದಲ್ಲಿದೆ. ಮುಂದೆ ಓಕೆ ಆದರೆ ಚಿತ್ರ ಕೃಷ್ಣನ್ ಲವ್ ಸ್ಟೋರಿ ಭಾಗ 2ರ ನಂತರ ಸೆಟ್ಟೇರಲಿದೆ.

ಗೆದ್ದೆತ್ತಿನ ಬಾಲ ಹಿಡಿದು ಗೆಲ್ಲುವುದು ಸುಲಭದ ಮಾತು. ಆದರೆ, ಒಬ್ಬ ಮಾಮೂಲಿ ಸ್ಟಾರ್ ಬಳಸಿ, ಅಲ್ಲಿ ಗೆಲುವು ದಾಖಲಿಸುವುದು ಹಾಗೂ ತನ್ನನ್ನು ಮೂರು ಸಾರಿ ಪರೀಕ್ಷೆಗೆ ಒಡ್ಡಿಕೊಂಡ ನಂತರ ದೊಡ್ಡ ನಟರತ್ತ ತೆರಳುವ ಸಂಪ್ರದಾಯ ಇವರಿಗೊಬ್ಬರಿಗೆ ಮಾತ್ರ ಸಾಧ್ಯ. ಇದು ಅವರ ಸಾಮರ್ಥ್ಯದ ಸಂಕೇತ ಕೂಡ. ಆ ಮಟ್ಟಿಗೆ ಅವರ ಕೆಲಸ ನಿಜಕ್ಕೂ ಶ್ಲಾಘನೀಯ.

ಇವರ ಪ್ರಯತ್ನ ಫಲ ಕೊಡಲಿ ಅಂತ ಆಶಿಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಶಾಂಕ್, ಸುದೀಪ್, ಕೃಷ್ಣನ್ ಲವ್ ಸ್ಟೋರಿ, ಕನ್ನಡ ಸಿನಿಮಾ