ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಜನಿ- ಐಶ್ ಎಂದಿರನ್‌ ಎದುರು ಕನ್ನಡದ ಗುಬ್ಬಿ! (Rajanikanth | Aishwarya Rai | Endiran | Gubbi)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಏಷ್ಯಾದಲ್ಲೇ ಅತೀ ಹೆಚ್ಚು ಬಜೆಟ್ಟಿಚಿತ್ರಗಳಲ್ಲೊಂದಾದ ರಜನಿಕಾಂತ್ ಹಾಗೂ ಐಶ್ವರ್ಯಾ ರೈ ಅಭಿನಯದ ಎಂದಿರನ್ ಚಿತ್ರ ಇದೇ ಸೆ.24ರಂದು ದೇಶಾದ್ಯಂತ ಬಿಡುಗಡೆಯಾಗುವುದು ಗೊತ್ತೇ ಇದೆ. ಕರ್ನಾಟಕದಲ್ಲೂ ರಜನಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿರುವಾಗ ಬೆಂಗಳೂರಲ್ಲೂ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವಲ್ಲಿ ಸಂಶಯವಿಲ್ಲ. ಇಂಥ ಸಂದರ್ಭ ಎಂದಿರನ್‌ಗೆ ಸ್ಪರ್ಧೆ ನೀಡಲು ಕನ್ನಡದ ಗುಬ್ಬಿ ಚಿತ್ರ ಸಜ್ಜಾಗಿದೆ!

ಹೌದು. ಅಣಜಿ ನಾಗರಾಜ್ ನಿರ್ಮಾಣದ ಈ ಚಿತ್ರ ಬಹು ದಿನದ ಹಿಂದೆಯೇ ತೆರೆಗೆ ಬರಬೇಕಿತ್ತು. ಆದರೆ ಕೊಂಚ ತಡವಾಗಿ ಆದರೂ ಈಗ ಬರುತ್ತಿದೆ. ಅದರಲ್ಲೂ ಎಂದಿರನ್ ಜೊತೆಯೇ ಬಿಡುಗಡೆ ಆಗುತ್ತಿರುವುದು ಇನ್ನೊಂದು ವಿಶೇಷ. ಅದರಿಂದಲೇ ಈ ಚಿತ್ರ ಎಂದಿರನ್‌ಗೆ ಕನ್ನಡದ ಸ್ಪರ್ಧಿ!

ಅಣಜಿ ನಾಗರಾಜ್ ಹಾಗೂ ಚಿತ್ರತಂಡದ ಒಂದೂವರೆ ವರ್ಷದ ಪ್ರಯತ್ನ ಮುಂದಿನ ವಾರ ಫಲ ಕೊಡುತ್ತಿದೆ. ವಿಜಯ್ ಎಂಬ ಹೊಸ ನಿರ್ದೇಶಕರ ಚೊಚ್ಚಲ ನಿರ್ದೇಶನದ ಈ ಚಿತ್ರ ಪ್ರೀತಿ ಪ್ರಧಾನವಾದುದು. ಚಿತ್ರದಲ್ಲಿ ಸೆಂಟಿಮೆಂಟ್‌ಗೆ ಕೊರತೆ ಇಲ್ಲ ಅನ್ನಬಹುದು. ಪಟ್ರೆ ಲವ್ಸ್ ಪದ್ಮ ಚಿತ್ರದ ನಾಯಕ ಅಜಿತ್ ಇದರ ನಾಯಕ. ಇದು ಪಟ್ರೆ ಎಂಡ್ ಫ್ರೆಂಡ್ಸ್ ತಂಡದವರೇ ಇದರಲ್ಲೂ ಇದ್ದಾರೆ. ನಾಯಕಿಯಾಗಿ ರೀಮಾ ವೋರಾ ಬರುತ್ತಿದ್ದಾರೆ.

ಹೊಸಬರ ಚಿತ್ರ ಇದಾಗಿದ್ದು, ಇತ್ತೀಚೆಗೆ ಹೊಸಬರೇ ಹೆಚ್ಚಾಗಿ ವೈಭವಿಸುತ್ತಿದ್ದು, ಈ ಚಿತ್ರವೂ ಕೆಲವರಿಗೆ ಬ್ರೇಕ್ ನೀಡುವುದಾ ಅಂತ ಕಾದು ನೋಡಬೇಕಿದೆ. ಗುಬ್ಬಿ ಚಿತ್ರ ಸದ್ಯ ಬಿಡುಗಡೆಯೇ ಆಗಿಲ್ಲ. ಈಗಲೇ ಎರಡನೇ ಭಾಗದ ಬಗ್ಗೆಯೂ ನಿರ್ಮಾಪಕರು ಯೋಚಿಸಿದ್ದಾರೆ. ಅದರ ಕಥೆಯೂ ಸಜ್ಜಾಗಿದೆಯಂತೆ. ಈ ಚಿತ್ರವನ್ನು ಜನ ಎಷ್ಟು ಸ್ವೀಕರಿಸುತ್ತಾರೆ ಎನ್ನುವುದರ ಮೇಲೆ ಅದು ನಿರ್ಧಾರವಾಗಲಿದೆ.

ಗುಬ್ಬಿ ಮೊದಲ ಭಾಗ ಯಶಸ್ವಿಯಾಗುತ್ತದೆ ಎನ್ನುವ ವಿಶ್ವಾಸ ನಿರ್ಮಾಪಕರಿಗೆ ಇದೆಯಂತೆ. ಎಂದಿರನ್ ಬಿಡುಗಡೆಯಾದರೂ ನಮಗದರ ಚಿಂತೆಯೇ ಇಲ್ಲ. ಗುಬ್ಬಿ ಗೆದ್ದೇ ಗೆಲ್ಲುತ್ತದೆ ಎಂದಿದ್ದಾರೆ ನಿರ್ಮಾಪಕರು. ಎಂದಿರನ್ ಎಂಬ ದೈತ್ಯ ರಕ್ಕಸನೆದುರು ಇದು ಗುಬ್ಬಚ್ಚಿಯಾಗದಿದ್ದರೆ ಸಾಕು!

ಎಂದಿರನ್ ಚಿತ್ರದ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ...

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಜನೀಕಾಂತ್, ಐಶ್ವರ್ಯಾ ರೈ, ಎಂದಿರನ್, ಗುಬ್ಬಿ, ಪಟ್ರೆ ಅಜಿತ್