ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿರಂಜೀವಿ ಸರ್ಜಾ ಮೈಯಲ್ಲೆಲ್ಲಾ ಹಚ್ಚೆಮಾಯೆ (Chiranjeevi Sarja | Tatoo | Vayuputhra | Kishor Sarja)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಹಚ್ಚೆ (ಟ್ಯೋಟೂ) ಹಾಕಿಸಿಕೊಳ್ಳುವ ಬಳಕೆ ಕನ್ನಡದಲ್ಲಿ ಕಡಿಮೆ. ಟ್ಯಾಟೊ ಪ್ರದರ್ಶನವನ್ನೇ ಚಿತ್ರದ ಪ್ರಮುಖ ಭಾಗವಾಗಿಸಿಕೊಂಡ ಚಿತ್ರಗಳು ಇದುವರೆಗೂ ಕನ್ನಡದಲ್ಲಿ ಬಂದಿರಲಿಕ್ಕಿಲ್ಲ. ಆದರೆ ಇದೀಗ ಚಿರಂಜೀವಿ ಸರ್ಜಾ ಈ ಒಂದು ಹೊಸ ರೂಪದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಎರಡು ಚಿತ್ರಗಳಲ್ಲಿ ನಟಿಸಿರುವ ಚಿರಂಜೀವಿ ಸರ್ಜಾ ಈ ಒಂದು ಹೊಸ ಅವತಾರದಲ್ಲಿ ಗೋಚರಿಸಿದ್ದಾರೆ.

ಮಾವ ಕಿಶೋರ್ ಸರ್ಜಾ ಅವರ ವಾಯುಪುತ್ರ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಚಿರಂಜೀವಿ ಸರ್ಜಾ, ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ್ದು, ಇದೀಗ ಟ್ಯಾಟೂ ಮೂಲಕ ಹೆಸರು ಮಾಡಲು ಹೊರಟಿದ್ದಾರೆ. ತಮಗೆ ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿಕೊಟ್ಟಿರುವ ತಮ್ಮ ಮಾವ ಕಿಶೋರ್ ಸರ್ಜಾ ಅವರ ಟ್ಯಾಟೂವನ್ನೇ ಇವರು ಬಲಗೈ ಮೇಲೆ ಹಾಕಿಸಿಕೊಂಡಿದ್ದಾರೆ. ಇನ್ನೊಂದು ಕೈ ಮೇಲೆ ಆಂಜನೇಯನ ಚಿತ್ರ ಹಾಕಿಸಿಕೊಂಡಿದ್ದಾರೆ. ಚಿರಂಜೀವಿ ಆಂಜನೇಯನ ಪರಮ ಭಕ್ತರಾಗಿದ್ದು, ಈ ಚಿತ್ರವನ್ನು ದೇವರ ಮೇಲಿನ ಪ್ರೀತಿಗೆ ಹಾಕಿಸಿಕೊಂಡಿದ್ದಾರೆ.

ದೇವರು ಬೆನ್ನ ಹಿಂದೆ ಇರಬೇಕು ಎನ್ನುವ ಸೆಂಟಿಮೆಂಟ್ ಇರುವುದರಿಂದ ಬೆನ್ನಿನ ಮೇಲೂ ಆಂಜನೇಯನ ಟ್ಯಾಟೊ ಹಾಕಿಸಿಕೊಂಡಿದ್ದಾರೆ. ಒಟ್ಟಾರೆ ಇವರ ಮೈ ತುಂಬಾ ಟ್ಯಾಟೊಗಳೇ ರಾರಾಜಿಸುತ್ತಿರುವುದು ವಿಶೇಷ.

ಈ ಹಿಂದೆ ಜಗ್ಗೇಶ್ ಕೂಡಾ ಟ್ಯಾಟೂ ಹಾಕಿಸಿಕೊಂಡಿದ್ದರು. ಜಗ್ಗೇಶ್ ತಮ್ಮ ತಾಯಿಯ ನೆನಪಿಗಾಗಿ ತಮ್ಮ ಅಮ್ಮನ ಚಿತ್ರವನ್ನೇ ಟ್ಯೂಟೂ ಹಾಕಿಸಿಕೊಂಡ ಜೊತೆಯಲ್ಲೇ ರಾಘವೇಂದ್ರನ ಪರಮ ಭಕ್ತನಾದ್ದರಿಂದ ರಾಘವೇಂದ್ರ ಸ್ವಾಮಿಯ ಟ್ಯಾಟೂವನ್ನೂ ಹಾಕಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿರಂಜೀವಿ ಸರ್ಜಾ, ಹಚ್ಚೆ, ಟ್ಯಾಟೂ, ವಾಯುಪುತ್ರ, ಕಿಶೋರ್ ಸರ್ಜಾ