ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮದುಮಗನಾದ ರಂಗನಾಥ್ ಭಾರದ್ವಾಜ್‌ರಿಂದ ಬೊಂಬೆಯಾಟ (Bombeyata | Ranganath Bhradwaj | Flora Shaini)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಅಂತೂ ಕೊನೆಗೂ ಖ್ಯಾತ ಟಿವಿ ವಾರ್ತಾ ವಾಚಕ ರಂಗನಾಥ್ ಭಾರದ್ವಾಜ್ ಕನಸು ಈಡೇರಿದೆ. ಚಿತ್ರರಂಗಕ್ಕೆ ಬರುವ ಬಹುವರ್ಷದ ಕನಸು ನನಸಾಗುವತ್ತ ಹೆಜ್ಜೆ ಇಟ್ಟಿದೆ. ಇವರ ಚಿತ್ರದ ಮುಹೂರ್ತ ಪೂರ್ಣಗೊಂಡಿದ್ದು, ಶೂಟಿಂಗ್ ಸಹ ಆರಂಭವಾಗಿದೆ. ಈ ಮೂಲಕ ಕೆಲವೇ ತಿಂಗಳಲ್ಲಿ ಚಿತ್ರ ಸಿದ್ಧವಾಗಿ ತೆರೆಗೆ ಬರಲು ಸಹ ಸಿದ್ಧವಾಗಲಿದೆ ಎನ್ನಲಾಗುತ್ತಿದೆ. ಬೊಂಬೆಯಾಟ ಹೆಸರಿನ ಈ ಚಿತ್ರ ಸೆಟ್ಟೇರಿದ್ದು, ಇದರಲ್ಲಿ ನಾಯಕರಾಗಿ ರಂಗನಾಥ್ ನಟಿಸುತ್ತಿದ್ದಾರೆ.

ಚಿತ್ರವನ್ನು ಮ್ಯಾಥ್ಯೂ ರಾಜನ್ ನಿರ್ದೇಶಿಸುತ್ತಿದ್ದು, ಮದುವೆ ಗಂಡಿನ ರೂಪದಲ್ಲಿದ್ದ ರಂಗನಾಥ್ ಭಾರದ್ವಾಜ್ ಪ್ರಥಮ ಕ್ಲಾಪ್‌ಗೆ ಪೋಸ್ ನೀಡಿದರು. ಮುಹೂರ್ತವನ್ನು ಮದುವೆ ಮನೆಯ ದೃಶ್ಯ ಸೆರೆ ಹಿಡಿಯುವ ಮೂಲಕ ನಡೆಸಲಾಯಿತು. ಬಿಳಿ ಪಂಚೆ, ಶರ್ಟ್, ಪೇಟ ತೊಟ್ಟಿದ್ದ ಭಾರದ್ವಾಜ್ ಥೇಟ್ ಮದುವೆ ಗಂಡಿನಂತೆ ಕಾಣಿಸುತ್ತಿದ್ದರು.

ಚಿತ್ರಕ್ಕೆ ಫ್ಲೋರಾ ಶೈನಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಂಗನಾಥ್ ವೈದ್ಯ ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜವಾಬ್ದಾರಿಯುತ ತಂದೆಗೆ ಬೇಜವಾಬ್ದಾರಿಯುತ ಮಗನಾಗಿ ಕಾಣಿಸುವ ಪಾತ್ರ ಇವರದ್ದು. ಮಗನ ಬೇಜವಾಬ್ದಾರಿತನಕ್ಕೆ ಮದುವೆಯೇ ಮದ್ದು, ವಿವಾಹ ಮಾಡಿದರೆ ಮಗ ಸರಿದಾರಿಗೆ ಬರುತ್ತಾನೆ ಅಂತ ಭಾವಿಸುವ ತಂದೆ ವಿವಾಹಕ್ಕೆ ಅಣಿಮಾಡಿ ಮದುವೆ ಮಾಡಿಸುತ್ತಾರೆ. ಈ ದೃಶ್ಯವನ್ನು ಸೆರೆ ಹಿಡಿಯುವ ಕಾರ್ಯ ಅಲ್ಲಿ ನಡೆಯಿತು.

ತಂತ್ರಗಳು ವಿಫಲವಾಗುತ್ತವೆ ಎನ್ನುವುದನ್ನು ತೋರಿಸುವುದೇ ಈ ಚಿತ್ರದ ಉದ್ದೇಶವಂತೆ. ಅದನ್ನು ಯಶಸ್ವಿಯಾಗಿ ತೋರಿಸುತ್ತೇವೆ ಎನ್ನುವ ಭರವಸೆಯ ಮಾತನ್ನು ಮ್ಯಾಥ್ಯೂ ರಾಜನ್ ಆಡುತ್ತಾರೆ. ಇವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಿದೆ.

ಇನ್ನಷ್ಟು ಫೋಟೋಗಳಿಗೆ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೊಂಬೆಯಾಟ, ರಂಗನಾಥ್ ಭಾರದ್ವಾಜ್, ಫ್ಲೋರಾ ಶೈನಿ