ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ ಟೈಟಲ್ ವಿವಾದ: ಕೋರ್ಟ್ ಮೆಟ್ಟಿಲೇರಲು ದ್ವಾರ್ಕಿ ಸನ್ನದ್ಧ (Vishnuvardhana | Dwarakish | Bharathi | Sudeep)
ಸುದ್ದಿ/ಗಾಸಿಪ್
Bookmark and Share Feedback Print
 
PR
ವಿವಾದಕ್ಕೀಡಾಗಿದ್ದ ದ್ವಾರಕೀಶ್ ಅವರ 'ವಿಷ್ಣುವರ್ಧನ' ಹೆಸರಿನ ಚಿತ್ರದ ವಿವಾದ ಇದೀಗ ಮತ್ತೆ ತಲೆಯೆತ್ತಿದೆ. ಈಗಾಗಲೇ ಪ್ರೊಡಕ್ಷನ್ ನಂ 47 ಎಂಬ ತಾತ್ಕಾಲಿಕ ಹೆಸರಿನಡಿ ಚಿತ್ರೀಕರಣ ಆರಂಭಿಸಿದ್ದ ದ್ವಾರಕೀಶ್ ಇದೀಗ ವಿಷ್ಣುವರ್ಧನ ಹೆಸರನ್ನೇ ಪಡೆಯಲು ತಾನು ಕಾನೂನು ಮೊರೆ ಹೋಗುವುದಕ್ಕೂ ತಯಾರು ಎಂದಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಈ ಚಿತ್ರಕ್ಕೆ ವಿಷ್ಣುವರ್ಧನ ಹೆಸರು ಇಡಲು ಅನುಮತಿ ನೀಡುವುದಿಲ್ಲ ಎಂದು ಒಂದೆಡೆ ಖಡಾಖಂಡಿತವಾಗಿ ಮನುಡಿದಿದ್ದಾರೆ. ಇದಕ್ಕೆ ಮತ್ತೊಂದೆಡೆ ಪ್ರತಿಕ್ರಿಯಿಸಿರುವ ದ್ವರಕೀಶ್ ನನ್ನ ಈ ಚಿತ್ರ ಖಂಡಿತವಾಗಿಯೂ ವಿಷ್ಣುವರ್ಧನ ಹೆಸರಿನಡಿಯೇ ಬಿಡುಗಡೆ ಮಾಡುತ್ತೇನೆ. ಕಾದು ನೋಡಿ ಎಂದು ಸವಾಲು ಹಾಕಿದ್ದಾರೆ.

ಈ ಹಿಂದೆ ಸುದೀಪ್ ಅಭಿನಯದ ದ್ವಾರಕೀಶ್ ನಿರ್ಮಾಣದ ಚಿತ್ರಕ್ಕೆ ವಿಷ್ಣುವರ್ಧನ ಹೆಸರಿಡಲು ತೀರ್ಮಾನಿಸಿದ್ದಕ್ಕೆ ನೇರವಾಗಿಯೇ ಭಾರತೀ ವಿಷ್ಣುವರ್ಧನ್ ಆರೋಪಿಸಿದ್ದರು. ಈ ಆರೋಪವನ್ನು ಸ್ವತಃ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಎತ್ತಿ ಹಿಡಿದು ಭಾರತಿಯವರ ಪರ ನಿಂತಿತ್ತು.

ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು, ನಾಯಕಿಯಾಗಿ ರಾಮ್ ಚಿತ್ರದ ಖ್ಯಾತಿಯ ಪ್ರಿಯಾಮಣಿ ಕೂಡಾ ಆಯ್ಕೆಯಾಗಿದ್ದಾರೆ. ಪ್ರಿಯಾಮಣಿಯವರ ಫೋಟೋ ಶೂಟ್ ಕೂಡಾ ನಡೆದಿದೆ. ದ್ವಾರಕೀಶ್ ಅವರು ಚಿತ್ರೀಕರಣ ಮುಗಿಸಿ ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಹೊಂದಿದ್ದಾರೆ.

ಪ್ರೇಕ್ಷಕರೆಲ್ಲರೂ ನನಗೆ ಪ್ರೋತ್ಸಾಹ ನೀಡಬೇಕು. ನಾನು ವಿಷ್ಣುವರ್ಧನ ಹೆಸರನ್ನು ಖಂಡಿತವಾಗಿಯೂ ನಾನು ಬಿಡೋದಿಲ್ಲ. ವಾಣಿಜ್ಯ ಮಂಡಳಿ ಅನುಮತಿ ನೀಡದಿದ್ದರೆ, ಕಾನೂನು ಮೂಲಕವಾದರೂ ಈ ಹೆಸರನ್ನು ಪಡೆದೇ ತೀರುತ್ತೇನೆ. ನನಗೆ ಎಲ್ಲ ಚಿತ್ರರಸಿಕರೂ ಪ್ರೋತ್ಸಾಹ ನೀಡಿ ಎಂದು ದ್ವಾರಕೀಶ್ ಕೇಳಿಕೊಂಡಿದ್ದಾರೆ. ಆದರೆ ಈ ಎಲ್ಲ ವಿಚಾರಗಳಿಗೂ ಸುದೀಪ್ ಮೌನ ವಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ, ದ್ವಾರಕೀಶ್, ಸುದೀಪ್, ಭಾರತಿ ವಿಷ್ಣುವರ್ಧನ್