ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯೋಗರಾಜ ಭಟ್ಟರ ಮುಂದಿನ ಗುರಿ ಪುನೀತ್! (Yogaraj Bhat | Puneeth | Lagori | Pancharangi)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಪಂಚರಂಗಿಗೂ ಮೊದಲು ಪುನೀತ್ ರಾಜ್ ಕುಮಾರ್ ಹಾಕಿಕೊಂಡು ಲಗೋರಿ ಎಂಬ ಚಿತ್ರ ಮಾಡುವುದಾಗಿ ಹಿಂದೆ ಭಟ್ಟರು ಹೇಳಿದ್ದರು. ಆದರೆ ಅದ್ಯಾಕೋ ಆ ಸುದ್ದಿ ಅಲ್ಲಿಗೇ ಖತಂ ಆಯಿತು. ಆಮೇಲೆ ಭಟ್ಟರು ಲಗೋರಿ ಬಿಟ್ಟು ಪಂಚರಂಗಿ ಕೈಹಿಡಿದದ್ದು ಈಗ ಇತಿಹಾಸ. ಈಗ ಮತ್ತೆ ಭಟ್ಟರು ಪುನೀತ್ ಜೊತೆಗೂಡುವ ನಿರ್ಧಾರ ಮಾಡಿದ್ದಾರೆ.

ಸದ್ಯ ಭಟ್ಟರು ತಮ್ಮ ಗೆಳೆಯ ಸೂರಿ ನಿರ್ದೇಶನದ ಪುನಿತ್ ಅಭಿನಯದ ಜಾಕಿ ಚಿತ್ರಕ್ಕೆ ಬರೆದ ಹಾಡುಗಳೆಲ್ಲವೂ ಅತ್ಯಂತ ಜನಪ್ರಿಯವಾಗಿದ್ದು, ಪುನಿತ್ ಸಹ ಭಟ್ಟರನ್ನು ಹಾಡಿ ಹೊಗಳಿದ್ದಾರೆ. ಈ ಹೊಗಳಿಕೆಯ ಬೆನ್ನಲ್ಲೇ, ಇದೀಗ ಭಟ್ಟರ ಪಂಚರಂಗಿಯೂ ಗೆದ್ದಿದ್ದು, ಅದರ ಅಲೆಯಲ್ಲೇ ಪುನಿತ್ ಅವರನ್ನು ಹಾಕಿಕೊಂಡು ಒಂದು ಚಿತ್ರ ಮಾಡಲು ಭಟ್ಟರು ನಿರ್ಧರಿಸಿದ್ದಾರೆ.

ಹಾಗೆ ನೋಡಿದರೆ, ಎಲ್ಲಾ ಅಂದುಕೊಂಡಂತೆಯೇ ಆಗಿದ್ದರೆ ಭಟ್ಟರ ಮುಂಗಾರು ಮಳೆಯಲ್ಲೇ ಪುನೀತ್ ನಟಿಸಬೇಕಿತ್ತು. ಆದರೆ ಅದು ಅಗಲಿಲ್ಲ. ನಂತರ ಪುನೀತ್‌ಗಾಗಿ ಲಗೋರಿಯನ್ನು ಸಿದ್ಧಪಡಿಸಿದರು. ಅದೂ ಠುಸ್ ಪಟಾಕಿಯಾಯಿತು. ಇದೀಗ ಹೊಸ ಚಿತ್ರಕ್ಕೆ ಸ್ಕೆಚ್ ಹಾಕಿದ್ದಾರಂತೆ ಭಟ್ಟರು.
MOKSHA


ಚಿತ್ರದ ಬಗ್ಗೆ ಈಗೇನೂ ಕೇಳುವಂತಿಲ್ಲ. ಏಕೆಂದರೆ ಪುನಿತ್ ಅವರ ಜಾಕಿ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಹೋಂ ಬ್ಯಾನರ್ ಅಡಿ ಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಇದರ ನಂತರವೇ ಹೊಸ ಚಿತ್ರದ ಮಾತು ಎಂದು ಹೇಳಲಾಗುತ್ತಿದೆ. ಯುವಕರ ತಂಡ ಕಟ್ಟಿಕೊಂಡು ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಭಟ್ಟರಿಗೆ ಪುನೀತ್ ಜೊತೆ ಕೆಲಸ ಮಾಡುವ ಅನುಭವ ಅತ್ಯಂತ ಸಂತಸ ತಂದುಕೊಡಲಿದೆಯಂತೆ. ಇದನ್ನು ಖುದ್ದು ಭಟ್ಟರೇ ಹೇಳಿಕೊಂಡಿದ್ದಾರೆ.

ಇದಕ್ಕಾಗಿ ಪುನಿತ್‌ಗಾಗಿಯೇ ಹೊಸ ಸಬ್ಜೆಕ್ಟ್ ಆರಿಸಿಕೊಳ್ಳಲು ಸಹ ಭಟ್ಟರು ನಿರ್ಧರಿಸಿದ್ದಾರೆ. ಪುನೀತ್‌ಗಾಗಿಯೇ ಲಗೋರಿ ಸಿದ್ಧಪಡಿಸಿದ್ದೆ. ಆದರೆ ಅದು ಅಂದುಕೊಂಡ ರೀತಿ ಆಗದಿದ್ದಾಗ ಕೈಬಿಟ್ಟೆ ಎನ್ನುತ್ತಾರೆ. ಇದೀಗ ಹೊಸ ವಿಷಯಕ್ಕೆ ಹುಡುಕಾಟ ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಪಂಚರಂಗಿ ಯಶಸ್ಸಿನ ಅಲೆ, ಮನಸಾರೆ ಪ್ರಶಸ್ತಿಯ ಅಲೆಯಲ್ಲಿ ತೇಲುತ್ತಿರುವ ಭಟ್ಟರು ಪುನೀತ್ ಜತೆಗೂಡಿದರೆ ಇನ್ಯಾವ ಅಲೆ ಸೃಷ್ಟಿಸುತ್ತಾರೋ ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೋಗರಾಜ್ ಭಟ್, ಪುನೀತ್, ಲಗೋರಿ, ಪಂಚರಂಗಿ