ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ್ ಜೀವನಗಾಥೆಯ ಡಿವಿಡಿ: ಕೇವಲ 75 ರೂ (Vishnuvardhan | DVD | Sahasa Simha)
ಸುದ್ದಿ/ಗಾಸಿಪ್
Bookmark and Share Feedback Print
 
PR
ಪ್ರತಿಷ್ಠಿತ ಲಹರಿ ರೆಕಾರ್ಡಿಂಗ್ ಸಂಸ್ಥೆ ಇದೀಗ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಕುರಿತು ಡಿವಿಡಿ ಬಿಡುಗಡೆ ಮಾಡಿದೆ. ಕೇವಲ 75 ರೂಪಾಯಿಗಳಿಗೆ ವಿಷ್ಣು ಜೀವನಗಾಥೆ ಈ ಎರಡು ಡಿವಿಡಿಗಳಲ್ಲಿರುವುದು ವಿಶೇಷ.

ಲಹರಿ ವೇಲು ಮಾತನಾಡುತ್ತಾ, ಇದು ಒಂದು ವರ್ಷದ ಪ್ರಾಜೆಕ್ಟ್. ಇದು ವಿಷ್ಣುವರ್ಧನ್ ಅವರ 200ನೇ ಚಿತ್ರ ಆಪ್ತರಕ್ಷಕದ ಬಿಡುಗಡೆಯ ಸಂದರ್ಭವೇ ಬರಬೇಕಿತ್ತು. ಅದಕ್ಕಾಗಿ ಎಲ್ಲ ತಯಾರಿ ನಡೆಸಿದ್ದೆವು. ಆದರೆ, ಆಪ್ತರಕ್ಷಕದ ಬಿಡುಗಡೆಗೆ ಮುನ್ನವೇ ದುರಾದೃಷ್ಟವಶಾತ್ ಅವರು ಸಾವಿಗೀಡಾದರು. ಹೀಗಾಗಿ ಡಿವಿಡಿ ಬಿಡುಗಡೆಯಾಗುವುದು ತಡವಾಯಿತು ಎಂಗದರು.

ಕೇವಲ 75 ರೂಪಾಯಿಗಳ ಬೆಲೆಯ ಎರಡು ಡಿವಿಡಿಗಳಿರುವ ಕವರ್ ಮೇಲೆ ಸಿಂಹ 200 ಎಂದು ಬರೆದಿದ್ದು ಇದು ಇಡೀ ವಿಷ್ಣುವರ್ಧನ್ ಅವರ ಜೀವನ ಚರಿತ್ರೆಯನ್ನು ಒಳಗೊಂಡಿದೆ. ಅವರ ಜೀವನ ಪ್ರಮುಖ ಘಟನೆಗಳು, ಅವರು ಭಾಗವಹಿಸಿದ ಪ್ರಮುಖ ಸಭೆ ಸಮಾರಂಭಗಳ ವಿವರ ಈ ಡಿವಿಡಿಯಲ್ಲಿದೆ.

ಈ ಡಿವಿಡಿಯಲ್ಲಿ ವಿಷ್ಣು ಅವರ ಜೀವನ ಸಾಧನೆಯನ್ನು ಎಸ್ಎಲ್ಎನ್ ಸ್ವಾಮಿ ಅವರು ನಿರ್ದೇಶಿಸಿ ಧ್ವನಿ ನೀಡಿದ್ದಾರೆ. ವಿಷ್ಣು ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಈ ಡಿವಿಡಿಯನ್ನು ಬಿಡುಗಡೆಗೊಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಡಿವಿಡಿ, ಸಾಹಸಸಿಂಹ, ಲಹರಿ