ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರೇಕ್ಷಕರಿಗೆ 'ಆಪ್ತ'ರಾಗಲಿದ್ದಾರೆ ಮಳೆ ಹುಡುಗಿ ಪೂಜಾ ಗಾಂಧಿ (Pooja Gandhi | Apta | Sanjeev Kumar | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
PR
ಆಪ್ತ ಚಿತ್ರ ಜನರಿಗೆ ಇನ್ನಷ್ಟು ಆಪ್ತವಾಗುತ್ತಿದೆ. ಹೌದು, ಯಶಸ್ವಿನಿ ಎಂಟರ್‌ಪ್ರೈಸಸ್ ಲಾಂಛನದ ಅಡಿ ಸಂಜೀವ್ ಕುಮಾರ್ ಮೆಗೋಟಿ ತೆರೆಗೆ ತರುತ್ತಿರುವ ಈ ಚಿತ್ರ ಬಹಳಷ್ಟು ಕುತೂಹಲಗಳನ್ನು ತನ್ನೊಳಗೆ ಹುದುಗಿಸಿಕೊಂಡಿದ್ದು, ಜನರಲ್ಲಿ ಸಾಕಷ್ಟು ಕಾತರವನ್ನು ಸೃಷ್ಟಿಸಿದೆ. ಸದ್ಯ ಚಿತ್ರದ ರೀ ರೆಕಾರ್ಡಿಂಗ್ ಕಾರ್ಯ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಲ್ಯಾಬಿನಲ್ಲಿ ಸಾಂಗವಾಗಿ ನಡೆದಿದೆ.

ಚಿತ್ರಕ್ಕೆ ಕಥೆ, ಚಿತ್ರಕತೆ ಹಾಗೂ ನಿರ್ದೇಶನವನ್ನು ಖುದ್ದು ಸಂಜೀವ್ ಅವರೇ ನಿಭಾಯಿಸಿದ್ದು, ಹತ್ತಾರು ಕೆಲಸವನ್ನು ಏಕಕಾಲದಲ್ಲೆ ಮಾಡಿ ಗೆದ್ದಿದ್ದಾರೆ. ಚಿತ್ರ ಒಂದು ಹಂತವನ್ನು ತಲುಪಿಸಿರುವ ಇವರು ಬಿಡುಗಡೆ ಮಾಡಿ ಗೆಲ್ಲಿಸುವುದು ಮಾತ್ರ ಬಾಕಿ ಇದೆ. ಈ ಸಾಹಸಿಯ ಕೆಲಸವನ್ನು ತೆರೆಯ ಮೇಲೆ ಜನ ಮೆಚ್ಚುವರಾ ಅನ್ನುವುದಕ್ಕೆ ಕೆಲ ದಿನ ಮಾತ್ರ ಕಾಯಬೇಕಿದೆ.

ಇವರು ಈ ಹಿಂದೆ ಪೂಜಾ ಗಾಂಧಿ ಅಭಿನಯದ ವಿಭಿನ್ನ ಚಿತ್ರ 'ಅನು'ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಾಕಷ್ಟು ಹೊಸತನವನ್ನು ಜನರಿಗೆ ನೀಡುವ ತುಡಿತದಲ್ಲಿರುವ ಇವರು ಕೆಲವಷ್ಟನ್ನು ಈ ಚಿತ್ರದಲ್ಲಿ ಮಾಡಿದ್ದಾಗಿ ಹೇಳಿದ್ದಾರೆ.

ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ಈ ಚಿತ್ರದ ಒಬ್ಬ ನಾಯಕಿ. ಚಿತ್ರದಲ್ಲಿ ಐದು ಪ್ರತ್ಯೇಕ ಗುಣ ಹೊಂದಿದ ಐವರು ನಾಯಕಿಯರು ಇದ್ದಾರಂತೆ. ಈ ಐವರು ಅನುಮಾನಾಸ್ಪದವಾಗಿ ಕಾಣೆಯಾಗಿ ಬಿಡುತ್ತಾರೆ. ಇದರಿಂದ ನಾಯಕಿ ಪೂಜಾಗೆ ಯಾವ ರೀತಿಯ ಸಮಸ್ಯೆ, ತೊಂದರೆ ಎದುರಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆಯಂತೆ.

ಇದನ್ನು ಅವರು ಹೇಗೆ ನಿಭಾಯಿಸುತ್ತಾರೆ ಅನ್ನುವುದೇ ಚಿತ್ರದ ಮೂಲ ಕಥಾ ಹಂದರ. ಚಿತ್ರ ಬಿಡುಗಡೆ ಅತ್ಯಂತ ಸನಿಹದಲ್ಲಿದ್ದು, ಕಾತರದಿಂದ ಕಾಯುವುದು ಮಾತ್ರ ಸದ್ಯಕ್ಕಿರುವ ಮಾರ್ಗ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪೂಜಾ ಗಾಂಧಿ, ಆಪ್ತ, ಸಂಜೀವ್ ಕುಮಾರ್, ಕನ್ನಡ ಸಿನಿಮಾ, ಅನು