ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ಮತ್ತೆ 'ವಿಗ್ನ'ದೊಂದಿಗೆ ಬರುತ್ತಿದ್ದಾರೆ ಶಶಿಕುಮಾರ್ (Shashikumar | Vigna | Reddy vs Gowda | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ಹೊಸದೊಂದು ಪ್ರಾಜೆಕ್ಟಿಗೆ ಕೈ ಹಾಕಿದ್ದಾರೆ.

ಇದು ರಾಜಕೀಯದಲ್ಲೋ, ಚಿತ್ರರಂಗದಲ್ಲೋ ಅಂತ ಕೇಳುವವರಿಗೆ ಸಿಗುವ ಉತ್ತರ ಚಿತ್ರ ಬದುಕು. ಒಂದು ಕಾಲದಲ್ಲಿ ಹೆಂಗಳೆಯರ ಮನಗೆದ್ದು, ಚಿತ್ರರಂಗದಲ್ಲಿ ಬಹು ಜನಪ್ರಿಯ ನಾಯಕರಾಗಿದ್ದ ಇವರು ತನ್ಮಧ್ಯೆ ರಾಜಕೀಯ ಪ್ರವೇಶಿಸಿ ಚಿತ್ರ ಬದುಕನ್ನು ಮರೆತು ಬಿಟ್ಟಿದ್ದರು.

ನಂತರ ಆಗಾಗ ಕೆಲವು ಚಿತ್ರಗಳಲ್ಲಿ ನಟಿಸಿ ಹೋಗಿದ್ದುಂಟು. ಅದೇ ರೀತಿ ಇದೀಗ ಮರಳಿ ಬರುತ್ತಿದ್ದಾರೆ.

ಇದಕ್ಕೆ ಇತ್ತೀಚಿನ ಸಾಕ್ಷಿ 'ವಿಗ್ನ'. ಇದರಲ್ಲಿ ಅವರು ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಸ್ಟೈಲಿ ಲುಕ್ ಜತೆ ಉತ್ತಮ ಚಾರ್ಮ್ ಕೂಡಾ ಪ್ರದರ್ಶಿಸಲು ಅವಕಾಶವಿರುವ ಪಾತ್ರವಿದು. ಹೊಸ ಹುಡುಗರ ಜತೆ ಇವರು ನಟಿಸುತ್ತಿದ್ದು, ಸಾಕಷ್ಟು ನಿರೀಕ್ಷೆಯನ್ನು ಇರಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಆದಿ ಲೋಕೇಶ್ ಕೂಡಾ ನಟಿಸುತ್ತಿದ್ದಾರೆ. ನಿರ್ದೇಶಕ ಸುನಿಲ್. ಕಮರ್ಷಿಯಲ್ ಸಿನಿಮಾ, ಇದರಲ್ಲಿ ಸೆಂಟಿಮೆಂಟು, ಸಸ್ಪೆನ್ಸ್ ಇರುವುದಿಲ್ಲ ಎನ್ನುವುದು ನಿರ್ದೇಶಕರ ಮಾತು.

ಇನ್ನು 'ರೆಡ್ಡಿ ವರ್ಸ್ಸ್ ಗೌಡ' ಚಿತ್ರದಲ್ಲೂ ವಿಭಿನ್ನ ಪಾತ್ರ ಪೋಷಣೆ ಮಾಡಿದ್ದಾರಂತೆ. ಹಿರಿಯ ಕಲಾವಿದ ಎನ್ನುವ ಹಮ್ಮು-ಬಿಮ್ಮು ಇವರಲ್ಲಿ ಗೋಚರಿಸುತ್ತಿಲ್ಲ. ಹಿರಿಯ ಕಲಾವಿದ ಎನ್ನುವ ಕೊಬ್ಬು ಸಹ ಗೋಚರಿಸುತ್ತಿಲ್ಲ. ಸೀದಾ ಸಾದಾ ಹುಡುಗರ ತರ ನಡೆದುಕೊಳ್ಳುತ್ತಿದ್ದಾರೆ. ಸುದೀರ್ಘ ಅವಧಿಯ ಅಂತರದ ನಂತರ ಅನಂತ್‌ನಾಗ್ ಜತೆ ಇವರು ನಟಿಸುತ್ತಿದ್ದಾರೆ.

ವಿಶೇಷ ಅಂದರೆ ಇವರು ತಮ್ಮ ಇಮೇಜಿಗೆ ತಕ್ಕಂತೆ ಕೆಲಸ ಮಾಡಿಕೊಂಡು ಹೋಗ್ತಾರೆ. ಇವರ ಇನ್ನೊಂದು ಇನಿಂಗ್ಸ್ ಇದೀಗ ಆರಂಭವಾಗಿದ್ದು, ಯಶಸ್ವಿಯಾಗತ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಶಿಕುಮಾರ್, ವಿಗ್ನ, ರೆಡ್ಡಿ ವರ್ಸಸ್ ಗೌಡ, ಕನ್ನಡ ಸಿನಿಮಾ