ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಾನು ನನ್ನ ಕನಸನ್ನು ಹಿಂದಿಗೆ ರಿಮೇಕಿಸುತ್ತಿರುವ ಪ್ರಕಾಶ್ ರೈ (Prakash Raj | Nanu Nanna Kanasu | Abhiyum Nanum)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡ ಮಣ್ಣಿನ ಮಗ ಪ್ರಕಾಶ್ ರೈ ತಮಿಳು ತೆಲುಗು ಚಿತ್ರರಂಗದಲ್ಲಿ ಭಾರೀ ಹೆಸರು ಮಾಡಿರುವುದು ಗೊತ್ತೇ ಇದೆ. ರಾಷ್ಟ್ರಮಟ್ಟದಲ್ಲಿಯೂ ತನ್ನ ಸಾಧನೆಯ ಮೂಲಕ ಹೆಸರು ಪಡೆದ ಈ ನಟ ಇದೀಗ ಹೊಸ ಕನಸು ಕಾಣುತ್ತಿದ್ದಾರೆ. ಇತ್ತೀಚೆಗೆ ನೃತ್ಯ ನಿರ್ದೇಶಕಿ ಪೋನಿ ವರ್ಮಾರನ್ನು ಎರಡನೇ ಮದುವೆಯಾಗಿರುವ ಪ್ರಕಾಶ್ ರೈ ಇದೀಗ ಕನಸು ಕಾಣುತ್ತಿರುವುದು ಕನ್ನಡದಲ್ಲಲ್ಲ, ಹಿಂದಿಯಲ್ಲಿ!

ಹೌದು. ತಮಿಳು, ತೆಲುಗು ಹಾಗೂ ಕನ್ನಡ ಚಿತ್ರರಂಗದಲ್ಲಿ ಅಪಾರ ಹೆಸರು ಮಾಡಿರುವ ಪ್ರಕಾಶ್ ರೈ ಈಗಾಗಲೇ ತಮ್ಮ ಚಿತ್ರಗಳ ಮೂಲಕ ಜನಮನ ಸೂರೆಗೊಂಡಿದ್ದಾರೆ. ತಮಿಳು, ತೆಲುಗು, ಕನ್ನಡದಲ್ಲಿ ನಾನು ನನ್ನ ಕನಸು ಚಿತ್ರ ನಿರ್ಮಿಸಿ ಗೆದ್ದಿದ್ದಾರೆ. ಇದೀಗ ಇದೇ ಚಿತ್ರವನ್ನು ಹಿಂದಿಯಲ್ಲಿ ನಿರ್ಮಿಸಿ ನಟಿಸುವ ಕನಸು ಪ್ರಕಾಶ್ ರೈ ಅವರದ್ದು.

ಕನ್ನಡದಲ್ಲಿ ನಾನು ನನ್ನ ಕನಸು, ತಮಿಳಿನಲ್ಲಿ ಅಭಿಯುಂ ನಾನುಂ ಹಾಗೂ ತೆಲುಗಿನಲ್ಲಿ ಆಕಾಶಮಂತ ಚಿತ್ರಗಳು ಯಶ ಕಂಡ ಹಿನ್ನೆಲೆಯಲ್ಲಿ ಚಿತ್ರವನ್ನು ಹಿಂದಿಗೂ ಈ ಸದಭಿರುಚಿಯ ಚಿತ್ರವನ್ನು ಕೊಂಡೊಯ್ಯಲು ಮುಂದಾಗಿದ್ದಾರೆ. ಇಲ್ಲಿಯೂ ಚಿತ್ರ ನಿರ್ದೇಶಿಸುವ ಜತೆಗೆ ನಟಿಸುತ್ತಿದ್ದಾರೆ. ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪ್ರಕಾಶ್ ರೈ, ನಾನು ನನ್ನ ಕನಸು, ಅಭಿಯುಂ ನಾನುಂ