ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಯೋಗಿಯ ಯಕ್ಷ ಮೋಡಿ ಮಾಡುತ್ತಾನೋ? (Yogish | Yaksha | Ramesh Bhagawat)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಯಕ್ಷ ಚಿತ್ರದ ಬಗ್ಗೆ ನಿಮಗೆಲ್ಲಾ ಗೊತ್ತು. ಲೂಸ್ ಮಾದ ಅಲಿಯಾಸ್ ಯೋಗೀಶ್ ಅವರು ಹೋಂ ಬ್ಯಾನರ್ ಅಡಿ ನಟಿಸುತ್ತಿರುವ ಚಿತ್ರ. ತಂದೆಯೇ ನಿರ್ಮಿಸಿದ ಈ ಚಿತ್ರದಲ್ಲಿ ತಾಯಿ, ಅಣ್ಣ ಕೂಡಾ ನಟಿಸುತ್ತಿದ್ದು, ಹೇಗಾದರೂ ಚಿತ್ರ ಗೆಲ್ಲಲೇಬೇಕೆಂದು ಪಣತೊಟ್ಟಿದ್ದಾರೆ.

ಇನ್ನೊಂದು ವಿಶೇಷ ಅಂದರೆ ಇದು ರಮೇಶ್ ಭಾಗವತ್ ನಿರ್ದೇಶನದ ಚಿತ್ರ. ಇವರು ಸಹ ಒಬ್ಬ ಹೊಸ ನಿರ್ದೇಶಕರು ಎಂದು ಅಂದುಕೊಂಡರೆ ತಪ್ಪಾಗುತ್ತದೆ. ಸ್ವಂತ ಪರಿಶ್ರಮದಿಂದ 12 ವರ್ಷ ಗಾಂಧಿನಗರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನಂತರವೇ ಅವರಿಗೆ ಇದೀಗ ಪೂರ್ಣ ನಿರ್ದೇಶಕ ಪಟ್ಟ ಲಭಿಸಿದೆ.

ನಾಲ್ಕು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಇವರು ಈ ಚಿತ್ರಕ್ಕಾಗಿ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡಿದ್ದಾರೆ. ಚಿತ್ರವನ್ನು ಗೆಲ್ಲಿಸಿಕೊಡುತ್ತೇನೆ ಎನ್ನುವ ಆತ್ಮವಿಶ್ವಾಸ ಅವರಲ್ಲಿದೆಯಂತೆ. ಇವರ ನಿಷ್ಠೆ ಹಾಗೂ ಪ್ರಾಮಾಣಿಕತೆಯ ಕೆಲಸವೇ ಚಿತ್ರಕ್ಕೆ ಶ್ರೀರಕ್ಷೆಯಾಗಿದೆ ಎನ್ನಲಾಗುತ್ತಿದೆ.

12 ವರ್ಷ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಬಂದು ಸೇರಿದ ರಮೇಶ್, ವಿ. ಮನೋಹರ್ ಸೇರಿದಂತೆ ಹಲವು ನಿರ್ದೇಶಕರ ಕೈಕೆಳಗೆ ಕೆಲಸ ಮಾಡಿ ಪಳಗಿದ್ದಾರೆ. ಇದೀಗ ನಾಲ್ಕು ಕೋಟಿ ಮೊತ್ತದ ಚಿತ್ರ ಸಿದ್ಧಪಡಿಸಿದ್ದಾರೆ. ಸಿದ್ಧರಾಜು ಇವರ ಕಥೆ ಒಪ್ಪಿ ಚಿತ್ರ ಮಾಡಲು ನಿರ್ಧರಿಸಿದ್ದು, ಬಹುದಿನದಿಂದ ಮೂಲೆಗೆ ಸೇರಿದ್ದ ಯಕ್ಷ ಕಥೆ ಇದೀಗ ಚಿತ್ರವಾಗುತ್ತಿದೆ. ಇದೊಂದು ಸಂತೋಷದ ಜತೆ ತಾವು ಸ್ವತಂತ್ರ ನಿರ್ದೇಶಕರಾಗಿ ಚಿತ್ರದ ಕೆಲಸದಲ್ಲಿ ತೊಡಗಿರುವುದು ರಮೇಶ್ ಅವರಿಗೆ ಸಂತಸ ನೀಡಿದೆ. ಚಿತ್ರಕ್ಕಾಗಿ ಸಾಕಷ್ಟು ಶ್ರಮಿಸಿದ್ದೇನೆ. ಹೇಗಿದೆ, ಏನಿದೆ ಎನ್ನುವುದನ್ನು ತೆರೆಯ ಮೇಲೆ ನೋಡಿ ಆನಂದಿಸಿ ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯೋಗೀಶ್, ಯಕ್ಷ, ರಮೇಶ್ ಭಾಗವತ್