ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಡೆಡ್ಲಿ ಸೋತರೂ, ಆದಿತ್ಯ ಗೆದ್ದು ಬಿಟ್ರಪ್ಪೋ! (Deadly Soma | Adithya | Shikari)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಚಿತ್ರ ಗೆದ್ದರೆ ಕೆಲವೊಮ್ಮೆ ನಟರು ಸೋಲುತ್ತಾರೆ. ಇನ್ನು ಕೆಲವೊಮ್ಮೆ ಚಿತ್ರ ಸೋಲುತ್ತದೆ ಆದರೆ ನಾಯಕು ಗೆದ್ದು ಬಿಡುತ್ತಾರೆ. ಅದೇ ಕಥೆ ಈಗ ಆದಿತ್ಯ ಅವರದ್ದು.
ಇವರು ಅಭಿನಯಿಸಿದ ಡೆಡ್ಲಿ-2 ಚಿತ್ರ ಪ್ಲಾಪ್ ಅಗಿದೆ. ಆದಾಯ ಗಳಿಸಿಕೊಡುವಲ್ಲಿ ವಿಫಲವಾಗಿದೆ. ಹಾಗಂತ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ಆದಿತ್ಯ ಸತತ ನಾಲ್ಕು ವರ್ಷಗಳ ಸೋಲಿನ ನಂತರ ಗೆಲುವಿನ ನಗೆ ಬೀರಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಇವರಿಗೆ ಚಿತ್ರದ ಅಭಿನಯ ಗೆಲುವು ತಂದುಕೊಟ್ಟಿದೆ.

ವಿಭಿನ್ನ ಮ್ಯಾನರಿಸಂ ಉಳ್ಳ ಈ ಚಿತ್ರದಿಂದ ಆದಿತ್ಯ ಹೆಸರು ಎತ್ತರಕ್ಕೆ ಏರಿದೆ. ಇದರ ಫಲವೇ ಸದ್ಯ ಇವರ ಮುಂದೆ ನಾಲ್ಕು ಚಿತ್ರಗಳು ಇವೆ. ನಾಲ್ಕನ್ನು ಇವರು ಒಪ್ಪಿಕೊಂಡಿದ್ದು ಅದ್ಯಾಗೆ ಮುಗಿಸಿಕೊಡುತ್ತಾರೋ ದೇವರೇ ಬಲ್ಲ.

ರವಿ ಶ್ರೀವತ್ಸ ಅವರ ನಿರ್ದೇಶನದ ಡೆಡ್ಲಿ ಚಿತ್ರದಲ್ಲಿ ಇವರ ಅಭಿನಯ ಗೆದ್ದ ಹಿನ್ನೆಲೆಯಲ್ಲಿ ರವಿ ಶ್ರೀವತ್ಸ ಅವರೇ ತಮ್ಮ ಇನ್ನೊಂದು ಚಿತ್ರಕ್ಕೆ ಆದಿತ್ಯ ಅವರನ್ನು ಹಾಕಿಕೊಂಡಿದ್ದಾರೆ. ಇದಲ್ಲದೇ ಸುನೀಲ್ ಕುಮಾರ್ ಸಿಂಗ್ ಅವರ ಚಿತ್ರವೊಂದಕ್ಕೆ ಆದಿತ್ಯ ಒಪ್ಪಿದ್ದಾರೆ. ಹುಲಿ ಚಿತ್ರದ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಚಿತ್ರಕ್ಕೂ ಸೈ ಹಾಕಿದ್ದಾರೆ. ಡಿಫರೆಂಟ್ ಡ್ಯಾನಿ ಕೇಳಿದ್ದಕ್ಕೂ ಇಲ್ಲ ಎಂದಿಲ್ಲ. ಹೀಗಾಗಿ ಒಟ್ಟು ನಾಲ್ಕು ಚಿತ್ರಕ್ಕೆ ಇವರು ಒಪ್ಪಿದ್ದಾರೆ. ಜೊತೆಗೆ ಈಗಾಗಲೇ ಅಭಯ ಸಿಂಹರ ಮಮ್ಮುಟ್ಟಿ ಅಭಿನಯದ ಚಿತ್ರ ಶಿಕಾರಿಯಲ್ಲೂ ಆದಿತ್ಯ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಒಟ್ಟಾರೆ ಸದ್ಯ ಮತ್ತೆ ಬ್ಯುಸಿ ಆಗಿ ಕೆಲಸ ಮಾಡುತ್ತಿದ್ದಾರೆ ಆದಿ. ಆದರೆ, ಇವೆಲ್ಲವುಗಳ ಪೈಕಿ ಯಾವುದು ಆದಿಗೆ ಅದೃಷ್ಟ ತರುತ್ತವೆಯೋ ಗೊತ್ತಿಲ್ಲ. ಸದ್ಯಕ್ಕಂತೂ ಗೆಲುವಿನ ನಗೆಯಲ್ಲಿದ್ದಾರೆ ಆದಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡೆಡ್ಲಿ ಸೋಮ, ಆದಿತ್ಯ, ಶಿಕಾರಿ