ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಇದೇ 14ಕ್ಕೆ ಜಾಕಿ ಖದರ್; ವಿತರಣೆಯಲ್ಲೂ ದಾಖಲೆ! (Jackie | Duniya Soori | Puneeth | Bhavana)
ಸುದ್ದಿ/ಗಾಸಿಪ್
Bookmark and Share Feedback Print
 
PR
ದುನಿಯಾ ಖ್ಯಾತಿಯ ಸೂರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಇದೇ ಅ.14ರಂದು ಬಿಡುಗಡೆ ಕಾಣುತ್ತಿದೆ. ಈ ಚಿತ್ರ ಈಗಾಗಲೇ ಸೆನ್ಸಾರ್‌ನಿಂದ ಯು/ಎ ಸರ್ಟಿಫಿಕೇಟ್ ಪಡೆದಿದ್ದು, ಥಿಯೇಟರುಗಳಿಗೆ ಲಗ್ಗೆಯಿಡಲು ಡಬ್ಬದಲ್ಲಿ ಕಾದು ಕುಳಿತಿದೆ.

ಪುನೀತ್ ಹಾಗೂ ಭಾವನಾ ಮೆನನ್ ಜೋಡಿಯ ಈ ಚಿತ್ರ ಈಗಾಗಲೇ ಭರ್ಜರಿ ಹವಾ ಸೃಷ್ಟಿಸಿದೆ. ಎಲ್ಲೆಲ್ಲೂ ಜಾಕಿಯ ಹಾಡು ಅನುರಣಿಸುತ್ತಿದೆ. ಯೋಗರಾಜ್ ಭಟ್ ಅವರ ಸಾಹಿತ್ಯವಿರುವ ಈ ಚಿತ್ರದ ಹಾಡುಗಢು ಸಾಹಿತ್ಯದಲ್ಲೂ ಸಂಗೀತದಲ್ಲೂ ಡಿಫರೆಂಟ್ ಆಗಿವೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಚಿತ್ರದ ಅಡಿಯೋ ಸಿಡಿಗಳೂ ಭರ್ಜರಿಯಾಗಿ ಮಾರಾಟ ಕಂಡಿವೆ.

ಇವೆಲ್ಲವುಗಳ ಜೊತೆಜೊತೆಗೇ ಚಿತ್ರ ಬಿಡುಗಡೆಗೂ ಮೊದಲೇ ದಾಖಲೆ ಸೃಷ್ಟಿಸಿದೆ. ಚಿತ್ರದ ವಿತರಣಾ ಹಕ್ಕು ಈವರೆಗೆ ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗಿದೆ ಎನ್ನಲಾಗಿದೆ. ಹೀಗಾಗಿ ಪವರ್ ಸ್ಟಾರ್ ಪುನೀತ್ ಹಾಗೂ ನಿರ್ದೇಶಕ ಸೂರಿ ಜೋಡಿಯ ಖದರ್‌ಗಾಗಿ ಪ್ರೇಕ್ಷಕ ಪ್ರಭು ಸಹಜವಾಗಿಯೇ ನಿರೀಕ್ಷೆಯ ಗರಿಗಳೊಂದಿಗೆ ಕಾದು ಕುಳಿತಿದ್ದಾನೆ. ವಾರದೊಳಗೆ ಜಾಕಿಯ ಮಹಾತ್ಮೆ ತಿಳಿಯಲಿದೆ. ಕಾದು ನೋಡೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾಕಿ, ದುನಿಯಾ, ಸೂರಿ, ಪುನೀತ್, ಭಾವನಾ ಮೆನನ್