ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕನ್ನಡ ಚಿತ್ರರಂಗಕ್ಕೆ ಅಪ್ಪಳಿಸಲಿದೆ ತೂಫಾನ್ (Toofan | Yashas | Shishira | Mruthyu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕನ್ನಡ ಚಿತ್ರರಂಗಕ್ಕೆ ಸದ್ಯವೇ ತೂಫಾನ್ ಬಡಿಯಲಿದೆ, ಅಲ್ಲಲ್ಲ ಬರಲಿದೆ. ಹೌದು. ಹೊಸ ನೀರು ಗಾಂಧಿನಗರಕ್ಕೆ ತುಂಬಾ ಹರಿದು ಬರುತ್ತಿದ್ದು ಹೊಸ ನಟರು, ನಟಿಯರಲ್ಲದೇ, ನಿರ್ಮಾಪಕರು ನಿರ್ದೇಶಕರು, ಕ್ಯಾಮರಾಮನ್‌ಗಳು, ಸಂಗೀತ ನಿರ್ದೇಶಕರು ಕೂಡಾ ಬರುತ್ತಿದ್ದಾರೆ. ಇದೀಗ ಬರುತ್ತಿರುವ ತೂಫಾನ್‌ನಲ್ಲಿ ಮತ್ತೆ ಒಂದಿಷ್ಟು ಹೊಸ ಮುಖ ಕಾಣಸಿಗಲಿದೆಯಂತೆ.

ಹೌದು. ಸ್ಮೈಲ್ ಸೀನು ಎಂಬ ನಿರ್ದೇಶಕ ಹಾಗೂ ಜಡೇಗೌಡ ಎಂಬ ನಿರ್ಮಾಪಕರು ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ಡಿಗೆ ಅಧಿಕೃತವಾಗಿ ಕಾಲಿರಿಸುತ್ತಿದ್ದಾರೆ. ನಿರ್ದೇಶಕರು ಮುಸ್ಸಂಜೆ ಮಹೇಶ್ ಜತೆ ಸಹಾಯಕರಾಗಿ ದುಡಿದ ಅನುಭವ ಹೊಂದಿದ್ದಾರೆ. ಸ್ವತಂತ್ರ ನಿರ್ದೇಶನದ ಮೊದಲ ಚಿತ್ರ ಇದಾಗಿದೆ.

ಅ.9ಕ್ಕೆ ಸೆಟ್ಟೇರಿರುವ ತೂಫಾನ್‌ಗೆ ಯಶಸ್ ನಾಯಕ. ಶಿಶಿರ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದರೂ, ದಕ್ಕದ ಯಶಸ್ಸಿನಿಂದ ಕಂಗೆಟ್ಟಿರುವ ಸುಂದರಾಂಗ ಯಶಸ್ ಒಂದು ಹಿಟ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರ ಮನುಷ್ಯ ಜೀವನದಲ್ಲಿ ಬರುವ ಘಟನೆಯನ್ನು ಆಧರಿಸಿ ಇದೆಯಂತೆ. ನೋವು- ನಲಿವಿನ ಮಿಶ್ರಣ ಇದಾಗಿದೆ. ಗಂಭೀರ ಚಿತ್ರವಲ್ಲ. ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶ ಇದೆ ಎನ್ನುತ್ತಾರೆ ನಿರ್ದೇಶಕರು.

ಚೆನ್ನೈನ ನಕ್ಷತ್ರ ಈ ಚಿತ್ರದ ನಾಯಕಿ. ಈಗಾಗಲೇ ತಮಿಳು ಚಿತ್ರವೊಂದರಲ್ಲಿ ನಟಿಸಿರುವ ಇವರಿಗೆ ಕನ್ನಡ ಹೊಸದು. ಚಿತ್ರದಲ್ಲಿ ರಮೇಶ್ ಭಟ್, ಸಾಧು ಕೋಕಿಲ, ಪ್ರಮಿಳಾ ಜೋಷಾಯ್, ಸುಧಾ ಬೆಳವಾಡಿ ಮತ್ತಿತರರು ಇದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೂಫಾನ್, ಯಶಸ್, ಶಿಶಿರ, ಮೃತ್ಯು