ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಮ್ಮ 'ಕಾಮಿಡಿ' ಕೋಮಲ್ ಈಗ ಮರ್ಯಾದೆ ರಾಮಣ್ಣ! (Comedy | Komal | Maryade Ramanna)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಕೋಮಲ್ ಈಗ ಸಿಕ್ಕಾಪಟ್ಟೆ ಮರ್ಯಾದೆವಂತರಾಗಲಿದ್ದಾರೆ. ಇದೇನಪ್ಪಾ, ಕೋಮಲ್‌ಗೆ ಈವರೆಗೆ ಮರ್ಯಾದೆ ಇರಲಿಲ್ಲವಾ ಅಂತೆಲ್ಲಾ ತಲೆಕೆಡಿಸಬೇಡಿ. ವಿಷಯ ಸಿಂಪಲ್. ಕೋಮಲ್ ಇದೀಗ ಮರ್ಯಾದೆ ರಾಮಣ್ಣ ಚಿತ್ರದಲ್ಲಿ ನಟಿಸಲು ಸಹಿ ಹಾಕುವ ಮೂಲಕ ಮರ್ಯಾದೆ ರಾಮಣ್ಣ ಆಗಲಿದ್ದಾರೆ.

ತೆಲುಗಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಜನರನ್ನು ಅಪಾರವಾಗಿ ನಗಿಸಿದ್ದ ಚಿತ್ರ 'ಮರ್ಯಾದ ರಾಮನ್ನ' ಚಿತ್ರದ ರಿಮೇಕ್ ಇದು. ತೆಲುಗಿನ ಹಾಸ್ಯ ನಟರಾದ ಸುನಿಲ್ ಹಾಗೂ ಸಲೋನಿ ನಾಯಕ, ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಇದೀಗ ಕನ್ನಡಕ್ಕೆ ರಿಮೇಕ್ ಆಗಿ ಬರುತ್ತಿದೆ. ಸುನೀಲ್ ಜಾಗಕ್ಕೆ ಕೋಮಲ್ ಆಯ್ಕೆಯಾಗಿದ್ದಾರೆ. ಅದೇ ರೀತಿ ಸಲೋನಿ ಜಾಗಕ್ಕೆ ಯಾರು ಎನ್ನುವುದು ಗೊತ್ತಾಗಿಲ್ಲ. ಉಳಿದ ಪಾತ್ರ ಹಾಗೂ ತಾಂತ್ರಿಕವರ್ಗದವರನ್ನು ಹುಡುಕುವ ಕಾರ್ಯ ಭರದಿಂದ ಸಾಗಿದೆ.

ರಾಜ್ ಮೌಲ್ವಿ ಅವರು ನಿರ್ದೇಶಿಸಿದ್ದ ಮರ್ಯಾದ ರಾಮನ್ನನನ್ನು ಇಲ್ಲಿ ಗುರುಪ್ರಸಾದ್ ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ ಇವರು ಮಠ ಹಾಗೂ ಎದ್ದೇಳು ಮಂಜುನಾಥ ಚಿತ್ರದ ಖ್ಯಾತಿಯ ಗುರುಪ್ರಸಾದ್ ಅಲ್ಲ. ಇವರು ಬೇರೆಯೇ ಗುರುಪ್ರಸಾದ್. ಇವರು ಕುಸುಮ ಖ್ಯಾತಿಯ ಗುರುಪ್ರಸಾದ್.

ಚಿತ್ರದ ಕಥೆ ಕನ್ನಡದ ಹಾಸ್ಯ ನಟ ಕೋಮಲ್‌ಗೆ ಹೇಳಿ ಮಾಡಿಸಿದಂತೆ ಇತ್ತು. ಅದಕ್ಕಾಗಿಯೇ ತೆಲುಗಿನ ಹಕ್ಕನ್ನು ಪಡೆದುಕೊಂಡೆವು. ಪಕ್ಕಾ ಕಾಮಿಡಿ ಚಿತ್ರ ಅನ್ನುವಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ ನಿರ್ದೇಶಕರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಾಮಿಡಿ, ಮರ್ಯಾದೆ ರಾಮಣ್ಣ, ಕೋಮಲ್