ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮತ್ತೆ ಕನ್ನಡಕ್ಕೆ ಬಂದ ಅರ್ಜುನ್ ಸರ್ಜಾ, ಮಲ್ಲಿಕಾ ಶೆರಾವತ್! (Arjun Sarja | Mallika Sherawat | Minisha Lamba | Contract)
ಸುದ್ದಿ/ಗಾಸಿಪ್
Bookmark and Share Feedback Print
 
IFM
ಅರ್ಜುನ್ ಸರ್ಜಾ ಜೊತೆ ಮಲ್ಲಿಕಾ ಶೆರಾವತ್! ಅರೆರೆ, ಇದೆಂಥಾ ಕಾಂಬಿನೇಷನ್ ಅನ್ನುತ್ತೀರಾ? ಹೌದು. ಇದೀಗ ಅರ್ಜುನ್ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಲು ಬಂದಿದ್ದಾರೆ. ಅಷ್ಟೇ ಅಲ್ಲ, ಇವರ ಜೊತೆಗೆ ಬಾಲಿವುಡ್ಡಿನ ಮದನಾರಿ ಮಲ್ಲಿಕಾ ಶೆರಾವತ್ ಹಾಗೂ ಮತ್ತೊಬ್ಬ ಬಿಂಕದ ಸಿಂಗಾರಿ ಮಿನಿಷಾ ಲಂಬಾ ಕೂಡಾ ಬರಲಿದ್ದಾರೆ.

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅರ್ಜುನ್ ಸರ್ಜಾ, ಮಲ್ಲಿಕಾ ಶೆರಾವತ್ ಹಾಗೂ ಮಿನಿಷಾ ಲಂಬಾ ತಾರಾಗಣದ ಕನ್ನಡ ಚಿತ್ರವೊಂದು ಶೀಘ್ರದಲ್ಲೇ ಸೆಟ್ಟೇರಲಿದೆ. ಶ್ರೀ ಮಂಜುನಾಥಾ ಚಿತ್ರದ ನಂತರ ತನ್ನ ಅಳಿಯಂದಿರನ್ನು ಕನ್ನಡಕ್ಕೆ ಪರಿಚಯಿಸಿದರೇ ಹೊರತು, ತಾನು ನಟಿಸಲಿಲ್ಲ. ಇದೀಗ ಮರಳಿ ಬಣ್ಣ ಹಚ್ಚಲು ಬಂದಿದ್ದಾರೆ.

ವಿಶೇಷವೆಂದರೆ, ಅರ್ಜುನ್ ಸರ್ಜಾ ಜೊತೆಗೆ, ಅಂದೊಮ್ಮೆ 'ಪ್ರೀತಿ ಏಕೆ ಭೂಮಿ ಮೇಲಿದೆ?' ಚಿತ್ರದಲ್ಲಿ ನಿರ್ದೇಶಕ ಹಾಗೂ ಆ ಚಿತ್ರದ ನಾಯಕ ನಟ ಪ್ರೇಮ್ ಜತೆ 'ಗೌರಿ ಪಾಳ್ಯದ ಗಲ್ಲಿಯೊಳಗೆ' ಹಾಡಿಗೆ ಮಾದಕ ಹೆಜ್ಜೆ ಹಾಕಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸೊಂಟ ಬಳುಕಿಸಿದ್ದ ಬಾಲಿವುಡ್ಡಿನ ಬಾಂಬ್, ಪಡ್ಡೆ ಹೈಕಳ 'ಮರ್ಡರ್' ಮಲ್ಲಿಕಾ ಶೆರಾವತ್ ಮತ್ತೆ ಆಗಮಿಸುತ್ತಿದ್ದಾರೆ. ಇವರ ಜತೆ ಹಾಟ್ ಗರ್ಲ್ ಮಿನಿಷಾ ಲಂಬಾ ಸಹ ಇರುವುದು ಇನ್ನೊಂದು ವಿಶೇಷ.
IFM


ಇವರೆಲ್ಲಾ ಕಾಂಟ್ರ್ಯಾಕ್ಟ್ ಮೂಲಕ ಒಂದಾಗುತ್ತಿದ್ದಾರೆ. ಈ ಚಿತ್ರದಲ್ಲಿ ಇವರ ಜತೆ ಎಂ.ಡಿ. ಚಕ್ರವರ್ತಿ ಕೂಡಾ ಅಭಿನಯಿಸುತ್ತಿರುವುದು ಇನ್ನೊಂದು ವಿಶೇಷ. ಮಿನಿಷಾ ಲಂಬಾ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆಯಂತೆ. ಆರ್. ರಾಮಚಂದ್ರರಾಜು ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರದ ನಿರ್ದೇಶನದ ಹೊಣೆಯನ್ನು ಎಸ್.ಎಸ್. ಸಮೀರ್ ವಹಿಸಿಕೊಂಡಿದ್ದಾರೆ. ಇವರು ಈಗಾಗಲೇ ಉಪೇಂದ್ರ ಅಭಿನಯದ ಶ್ರೀಮತಿ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಬಾಲಿವುಡ್‌ನ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾರ ಜತೆಗೂ ಕೆಲಸ ನಿರ್ವಹಿಸಿದ್ದರು. ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಇದು ಇವರ ಮೊದಲ ಚಿತ್ರ. ಜಾನಿಲಾಲ್ ಕ್ಯಾಮರಾ ಕೈಚಳಕ ತೋರಲಿದ್ದಾರೆ. ಸುಭಾಷ್ ವಿಶ್ವಾಸ್ ಸಂಗೀತ ಚಿತ್ರಕ್ಕಿದೆ.

ಇದೇ ಅಕ್ಟೋಬರ್ 13ಕ್ಕೆ ಸೆಟ್ಟೇರುವ ಈ ಚಿತ್ರ ಸತತ 100 ದಿನದ ಒಂದೇ ಶೆಡ್ಯೂಲಿನಲ್ಲಿ ಮುಗಿಯಲಿದೆಯಂತೆ. ಬೆಂಗಳೂರು ಚೀನಾ, ಮಲೇಷಿಯಾ, ಥಾಯ್‌ಲ್ಯಾಂಡ್ ಮತ್ತಿತರ ಕಡೆ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗಿದೆ.

ಮಲ್ಲಿಕಾ ಶೆರಾವತ್ ಹಾಗೂ ಮಿನಿಷಾ ಲಂಬಾರ ಹಾಟ್ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...

 
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅರ್ಜುನ್ ಸರ್ಜಾ, ಮಲ್ಲಿಕಾ ಶೆರಾವತ್, ಮಿನಿಷಾ ಲಂಬಾ, ಕಾಂಟ್ರ್ಯಾಕ್ಟ್