ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಮ್ಯಾ, ಲೂಸ್ ಮಾದನ ಜೋಡಿಯ ಸಿದ್ಲಿಂಗು (Sidhlingu | Ramya | Loos Mada | Yogeesh)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಈತನ ಹೆಸರು ಸಿದ್ಲಿಂಗು. ಈತನ ಜೋಡಿ ರಮ್ಯಾ. ಅರೆರೆ, ಹೆಸರು, ಜೋಡಿ ಎರಡೂ ಒಂಥರಾ ವಿಚಿತ್ರ ಅನ್ನಿಸಿದರೂ ಕನ್ನಡದಲ್ಲಿ ಇದೊಂದು ಚಿತ್ರ ಬರಲಿದೆ. ಹೆಸರು ಸಿದ್ಲಿಂಗು. ಇದೇನು ವಿಚಿತ್ರ ಹೆಸರಿನ ಚಿತ್ರಗಳ ಪಟ್ಟಿಗೆ ಇದೊಂದು ಹೊಸ ಸೇರ್ಪಡೆಯಾ ಅಂತ ಕೇಳಿದಿರಾ? ಹೌದು, ಗೆಲುವಿನ ಮುಖವನ್ನು ನಾನಾ ರೂಪದಲ್ಲಿ ಕಾಣಲು ಬಯಸುತ್ತಿರುವ ಚಿತ್ರೋದ್ಯಮದ ಮಂದಿ ಈ ರೀತಿ ಹೊಸ ಹಾಗೂ ವಿಭಿನ್ನ ಬಗೆಯ ಹೆಸರಿಟ್ಟು ಚಿತ್ರ ಮಾಡಲು ಮುಂದಾಗಿದ್ದಾರೆ. ಇದೇ ನಿಟ್ಟಿನಲ್ಲಿ ಬರುತ್ತಿರುವುದೇ ಸಿದ್ಲಿಂಗು.

ಈ ಚಿತ್ರದಲ್ಲಿ ರಮ್ಯಾ ಹಾಗೂ ಲೂಸ್ ಮಾದ ಯೋಗೀಶ್ ಜೋಡಿಯಾಗುವ ಮೂಲಕ ಯೋಗಿಯ ಹಲವು ವರ್ಷಗಳ ತಪಸ್ಸು ಫಲ ನೀಡಿದೆ. ನಾನು ರಮ್ಯಾರ ಫ್ಯಾನ್ ಎಂದು ಗಾಂಧಿನಗರದಲ್ಲಿ ಓಡಾಡಿಕೊಂಡಿದ್ದ ಲೂಸ್ ತನ್ನ ಕೋಣೆಯಲ್ಲೆಲ್ಲಾ ರಮ್ಯಾರ ಫೋಟೋಗಳನ್ನೇ ಅಂಟಿಸಿ ಪೂಜೆ ಮಾಡಿದ್ದರ ಫಲವಾಗಿ ಕೊನೆಗೂ ಅವರಿಗೆ ಈ ಯೋಗಾಯೋಗ ದಕ್ಕಿದೆ.

ಸ್ವಾಮಿ ಅಸೋಸಿಯೇಟ್ಸ್ ಲಾಂಛನದಲ್ಲಿ ಬರುತ್ತಿರುವ ಈ ಚಿತ್ರ ಇತ್ತೀಚೆಗೆ ತಾನೆ ಮುಹೂರ್ತ ಭಾಗ್ಯ ಕಂಡಿದೆ. ಧರ್ಮಗಿರಿಯ ಮಂಜುನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿಸಲಾಯಿತು. ಚಿತ್ರವನ್ನು ದೇವರ ಮೇಲೆ ತೆಗೆದಿರುವುದರಿಂದ ಇದೇ ಸ್ಥಳವನ್ನು ಸೂಕ್ತವೆಂದು ಪರಿಗಣಿಸಿ ಇಲ್ಲೇ ಚಾಲನೆ ನೀಡಲಾಯಿತು.
MOKSHA


ಚಿತ್ರಕ್ಕೆ ಆರಂಭಿಕ ಫಲಕವನ್ನು ನಿರ್ಮಾಪಕ ಕೆ. ಮಂಜು ತೋರಿಸಿದರು. ಚಿತ್ರರಂಗದ ಕೆಲ ಗಣ್ಯರ ಸಮ್ಮುಖದಲ್ಲಿ ಮುಹೂರ್ತ ಕಾರ್ಯ ನೆರವೇರಿತು. ನಟ ಯೋಗೀಶ್ ಈ ಚಿತ್ರದ ನಾಯಕರಾಗಿದ್ದು, ಇವರಿಗೆ ನಾಯಕಿಯಾಗಿ ರಮ್ಯಾ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಗಣ್ಯರು ಚಿತ್ರದಲ್ಲಿದ್ದಾರೆ. ಅಂದಹಾಗೆ, ವಿಚಿತ್ರ ಹೆಸರಿರುವ ಈ ಚಿತ್ರಕ್ಕೆ ಇನ್ನೂ ವಿಚಿತ್ರವಾದ ಟ್ಯಾಗ್‌ಲೈನ್ ಕೂಡಾ ಇದೆ. 'ರೋಹಿಣಿ ನಕ್ಷತ್ರ, ವೃಷಭ ರಾಶಿ' ಎಂಬುದೇ ಈ ಅಡಿ ಬರಹ.

ಚಿತ್ರವನ್ನು ವಿಜಯ್ ಪ್ರಕಾಶ್ ನಿರ್ದೇಶಿಸುತ್ತಿದ್ದಾರೆ. ಸಿಲ್ಲಿಲಲ್ಲಿ, ಪಾಪಾ ಪಾಂಡು ಸೇರಿದಂತೆ ಹಲವು ನಗೆ ಧಾರವಾಹಿ ನಿರ್ದೇಶಿಸಿರುವ ಇವರಿಗೆ ಚಿತ್ರರಂಗದಲ್ಲಿ ಇದು ಪ್ರಥಮ ಪ್ರಯೋಗ. ಐದು ಹಾ ಡಿರುವ ಚಿತ್ರಕ್ಕೆ ಅನುಪ್ ಸೀಳೀನ್ ಅವರ ಸಂಗೀತ ಇದೆ. ಈ ಚಿತ್ರ ಲೂಸ್ ಮಾದನ ಹೋಂ ಬ್ಯಾನರ್ ಅಡಿ ಅಂದರೆ ತಂದೆ ಟಿ.ಪಿ.ಸಿದ್ಧರಾಜು ಅವರೇ ನಿರ್ಮಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿದ್ಲಿಂಗು, ರಮ್ಯಾ, ಲೂಸ್ ಮಾದ, ಯೋಗೀಶ್