ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಚಿತ್ರಗಳಿಗೆ ಉತ್ತಮ ಪ್ರಚಾರ, ಮಾರುಕಟ್ಟೆ ಅಗತ್ಯ: ಪುನೀತ್ (Kannada cinema | Sandalwood, | Punit)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಜಾಕಿ' ಚಿತ್ರದ ಪ್ರಚಾರಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿನ್ನೆ ನಡೆದ ಘಟನೆಯಿಂದ ಕೊಂಚ ಬೇಸರಗೊಂಡು ನಿರ್ಮಾಪಕರು- ವಿತರಕರಿಗೆ ಕನ್ನಡ ಚಿತ್ರಗಳಿಗೆ ಉತ್ತಮ ಪ್ರಚಾರ ಹಾಗೂ ಮಾರುಕಟ್ಟೆ ಒದಗಿಸಲು ಸಲಹೆ ನೀಡಿದ್ದಾರೆ.

ಸಂಘದ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲರು ಡಿ.1 ರಿಂದ ಚಿತ್ರೋದ್ಯಮ ಬಂದ್ ಮಾಡಲಾಗುವುದು ಎಂಬ ಏಕಪಕ್ಷೀಯ ಹೇಳಿಕೆಗೆ ಈಗಾಗಲೇ ಹಿರಿಯ ನಟ ಅಂಬರೀಶ್ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವು ಸದಸ್ಯ ಖಂಡಿಸಿದ್ದಾರೆ.

ಕನ್ನಡವಲ್ಲದ ಚಿತ್ರಗಳು 24 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಅಥವಾ ಕೆಎಫ್‌ಸಿಸಿ ಜಾರಿಗೆ ತರಬೇಕು. ಆ ಸೂತ್ರವನ್ನು ಖಡ್ಡಾಯವಾಗಿ ಎಲ್ಲಾ ನಿರ್ಮಾಪಕರು, ವಿತರಕರು ಪಾಲಿಸಲು ಅಧ್ಯಕ್ಷರು ಸೂಚಿಸಿದ್ದಾರೆ. ಹಾಗಂತ ನಾನು ಇತರ ಭಾಷೆ ಚಿತ್ರಗಳನ್ನು ದ್ವೇಷಿಸುತ್ತಿದ್ದೇನೆ ಅಂತಾ ಅಲ್ಲ. ಆದರೆ, ನಮ್ಮ ನಿರ್ಮಾಪಕರು ಹಾಗೂ ವಿತರಕರು ಈ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬುದೇ ನನ್ನ ಮಾತು.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಅತ್ಯತ್ತಮವಾಗಿ ಮೂಡಿಬರುತ್ತಿವೆ. ಇತರೆ ಭಾಷೆಯ ಚಿತ್ರಗಳಿಗೆ ಸರಿಸಾಟಿಯಾಗಿ ನಿಲ್ಲುತ್ತಿವೆ. ಕನ್ನಡ ಚಿತ್ರಗಳು ಹಾಗೂ ಇತರ ಭಾಷೆ ಚಿತ್ರಗಳ ಬಿಡುಗಡೆ ವಿಷಯದಲ್ಲಿ ಮನಸ್ತಾಪ ಬಹಳ ಹಿಂದಿನಿಂದಲೂ ಇದ್ದದ್ದೇ. ಆದ್ದರಿಂದ ನಿರ್ಮಾಪಕರು ಸಹ ಕನ್ನಡ ಚಿತ್ರಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು ಎಂದು ನುಡಿದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಸ್ಯಾಂಡಲ್ವುಡ್, ಪುನೀತ್