ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಟಿಮಣಿಯರ ಮನದಾಳದಲ್ಲಿ `ದೀಪಾವಳಿ' ಹಬ್ಬದ ಸಡಗರ (Kannada cinema | Sandalwood | Deepavali)
ಸುದ್ದಿ/ಗಾಸಿಪ್
Bookmark and Share Feedback Print
 
NRB
ದೀಪಾವಳಿ ಎಂದರೆ ಕಾರ್ತೀಕ ಮಾಸದ ಸ್ವಾಗತದ ಸಂಭ್ರಮ. ಎಲ್ಲೆಲ್ಲೂ ದೀಪಗಳ ಸಾಲು, ಸಾಲು. ದೀಪಗಳ ಹಬ್ಬ ಉಳ್ಳವರಿಗೆ ಕೇದಾರೇಶ್ವರ ವ್ರತ ಹಾಗೂ ಲಕ್ಷ್ಮೀ ಪೂಜೆ. ಇನ್ನೂ ಇಲ್ಲದವರಿಗೆ ಕೇವಲ ಪಟಾಕಿ ಹಬ್ಬ.

ಏನೇ ಆದರೂ ಮನೆಯಂಗಳದಲ್ಲಿ ದೀಪಗಳಂತೂ ಬೆಳಗುತ್ತವೆ. ಮಕ್ಕಳಲ್ಲಿ, ಹಿರಿಯರಲ್ಲಿ ಮೂರು ದಿನಗಳ ಕಾಲ ಸಂಭ್ರಮವಿದ್ದೇ ಇರುತ್ತದೆ. ಇನ್ನೂ ನಮ್ಮ ನಟಿ ಮಣಿಯರು ಹೇಗೆ ದೀಪಾವಳಿ ಆಚರಿಸುತ್ತಾರೆ ನೋಡೋಣ.

ರಮ್ಯಾ: ಕನ್ನಡದ ಹೆಚ್ಚು ಕಡಿಮೆ ನಂ1. ನಟಿ ಎಂದೆನಿಸಿದ್ದ ರಮ್ಯಾ ಊಟಿಯಲ್ಲಿ ಓದುತ್ತಿದ್ದಾಗ ಯಾವಾಗ ದೀಪಾವಳಿ ಬರುತ್ತೋ ಎಂದು ಕಾಯುತ್ತಿದ್ದರಂತೆ. ಶಾಲೆಗೆ ರಜಾ. ಊರಿಗೆ ಹೋಗಿ ಮನೆಯಲ್ಲಿ ಮಾಡಿದ ಸಿಹಿ ತಿಂಡಿಗಳನ್ನು ತಿಂದು, ಗೆಳೆಯರು, ಬಂಧುಗಳೊಡನೆ ಪಟಾಕಿ ಹಚ್ಚಬೇಕೆಂದು ಕಾತುರರಾಗಿರುತ್ತಿದ್ದರಂತೆ. ಆದರೆ, ಇಂದು ಇರುವ ಎಲ್ಲ ಕೆಲಸ ಒತ್ತಡಗಳನ್ನು ಮರೆತು ಮನೆ ಸೇರಿಕೊಂಡು ಸಂತೋಷದಿಂದ ಕಾಲ ಕಳೆಯಬೇಕು. ಪಟಾಕಿ ಹಚ್ಚುವುದರಿಂದ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಇದರಿಂದ ಸಾಕು ಪ್ರಾಣಿಗಳಿಗೆ ತೊಂದರೆಯುಂಟಾಗುತ್ತದೆ. ಆದ್ದರಿಂದ ಪಟಾಕಿ ಸುಡುವುದಿಲ್ಲ ಎನ್ನುತ್ತಾರೆ.

ನಿಧಿ ಸುಬ್ಬಯ್ಯ: ನಿಧಿ ಸುಬ್ಬಯ್ಯ ಚಿಕ್ಕವಳಿದ್ದಾಗ ಬಾಂಬ್ ಸಿಡಿಸುವುದೆಂದರೆ ಎಲ್ಲಿಲ್ಲದ ಸಂಭ್ರಮವಂತೆ. ಆದರೆ, ಈಗ ಇದೆಲ್ಲವನ್ನು ತಿರಸ್ಕರಿಸಿದ್ದಾಳೆ. ಕಾರಣ ಕೇಳಿದರೆ, ಈಗ ಬೆಂಗಳೂರಿನಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯವನ್ನೇ ತೊಡೆದುಹಾಕಲು ಸಾಧ್ಯವಾಗುತ್ತಿಲ್ಲ ಅಂತಹದರಲ್ಲಿ ಪಟಾಕಿ ಸಿಡಿಸಿ ಮತ್ತಿಷ್ಟು ಮಾಲಿನ್ಯ ಉಂಟು ಮಾಡುವುದು ಇಷ್ಟವಿಲ್ಲ. ಕೇವಲ ಸುಸ್ಸೂರ್ ಬತ್ತಿಗಳನ್ನು ಮಾತ್ರ ಹಚ್ಚುತ್ತೇನೆ. ಇನ್ನು ಮನೆ ಅಂಗಳದಲ್ಲಿ ದೀಪಗಳನ್ನು ಹಚ್ಚುವುದರ ಮೂಲಕ ದೀಪಾವಳಿ ಆಚರಿಸುತ್ತೇನೆ ಎಂದಿದ್ದಾರೆ.
NRB


ರಾಧಿಕಾ ಪಂಡಿತ್: ಕನ್ನಡ ಚಿತ್ರರಂಗದ ಇತ್ತೀಚಿನ ದಿನಗಳ ಮೋಸ್ಟ್ ಸಕ್ಸಸ್‌ಫುಲ್ ನಟಿ ರಾಧಿಕಾ ಪಂಡಿತ್‌ಗೆ ಪಟಾಕಿ ಸಿಡಿಸುವುದೆಂದರೆ ಮೊದಲಿನಿಂದಲೂ ಇಷ್ಟವಿಲ್ಲವಂತೆ. ಕೇವಲ ಮನೆಯ ಮುಂದೆ ದೀಪಗಳನ್ನು ಹಚ್ಚುವುದು. ಬಣ್ಣ ಬಣ್ಣದ ದೀಪಗಳನ್ನು ಮನೆಯ ಅಂಗಳದಲ್ಲಿ ಹಚ್ಚಿಡುವುದರಿಂದ ಪಟಾಕಿಗಳನ್ನು ಹೊಡೆದಷ್ಟೇ ಸಂತಸ ನೀಡುತ್ತದೆ. ದೀಪಾವಳಿಯ ಹಬ್ಬದ ಪ್ರಮುಖ ದಿನದಂದು ಮನೆಯ ಒಳಗಡೆ ಹೊರಗಡೆ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ ಕೇವಲ ಎಣ್ಣೆ ಅಥವಾ ದಿಯಾಗಳ ಬೆಳಕನ್ನು ನೋಡುವುದೆಂದರೆ ಪಂಚಪ್ರಾಣ ಎಂದಿದ್ದಾರೆ. ಇನ್ನು ಗೆಳೆಯ, ಗೆಳತಿಯರಿಗೆ ಕ್ಯಾಂಡಲ್ ದೀಪಗಳನ್ನು ಉಡುಗೊರೆಯಾಗಿ ಕೊಡುವುದು ಇಷ್ಟವಂತೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕನ್ನಡ ಸಿನೆಮಾ, ಸ್ಯಾಂಡಲ್ವುಡ್, ದೀಪಾವಳಿ