ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಘು ಮುಖರ್ಜಿ ಒಲಿದ `ಪ್ರೇಮ ಚಂದ್ರಮ' (Kannada cinema | Sandalwood | Raghu mukharjee)
ಸುದ್ದಿ/ಗಾಸಿಪ್
Bookmark and Share Feedback Print
 
ಬಾಲಿವುಡ್‌ನಂತೆ ಸ್ಯಾಂಡಲ್‌ವುಡ್‌ಗೂ ಮಾಡೆಲ್ ಪ್ರಪಂಚಕ್ಕೂ ಎಲ್ಲಿಲ್ಲದ ನಂಟು. ರಘು ಮುಖರ್ಜಿ ಎಂಬ ಮುದ್ದುಮೊಗದ ಮಾಡೆಲ್ 2003ರಲ್ಲಿ `ಪ್ಯಾರಿಸ್ ಪ್ರಣಯ' ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದು, ಕೆಲಕಾಲ ಮರೆಯಾಗಿದ್ದರು. ಈಗ ಮತ್ತೆ `ಪ್ರೇಮ ಚಂದ್ರಮ'ದಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚಲಿದ್ದಾರೆ.

ಕಳೆದ ವರ್ಷ ತೆರೆಕಂಡ ಉಷಾಕಿರಣ್ ಮೂವೀಸ್ ಅವರ `ಸವಾರಿ' ಚಿತ್ರಕ್ಕೆ ನಾಯಕ ನಟನಾಗಿ ಸಹಜ ಅಭಿನಯ ನೀಡಿದ್ದರು. ಈ ಚಿತ್ರದಲ್ಲಿ ಮತ್ತೊಬ್ಬ ನಟ ಶ್ರೀನಗರ ಕಿಟ್ಟಿ ಸಹನಟನಾಗಿ ಅಭಿನಯಿಸಿದ್ದರು.

ಈಗ `ಪ್ರೇಮ ಚಂದ್ರಮ' ಚಿತ್ರದಲ್ಲಿ ನಟಿಸಲು ಕಾಲ್‌ಶೀಟ್ ಸಿಕ್ಕಿದೆ. ಈ ಚಿತ್ರದಲ್ಲಿ ನಟಿ ರೇಖಾ ಸಾಥ್ ನೀಡಲಿದ್ದು, ನಟ ಪ್ರೇಮ್ ಸಹ ಇದ್ದಾರೆ. ಈಗಾಗಲೇ ಬ್ಯಾಂಕಾಕ್, ಥೈಲ್ಯಾಂಡ್, ಪುಕೆಟ್ ಮತ್ತಿತರ ದ್ವೀಪಗಳಲ್ಲಿ ನಿದೇರ್ಶಕ ಸಾಹುರಾಜ್ ಶಿಂಧೆ ಶೂಟಿಂಗ್ ಮುಗಿಸಿದ್ದಾರೆ.

ಹೆಸರಾಂತ ಛಾಯಾಗ್ರಾಹಕ ಹೆಚ್.ಸಿ. ವೇಣು ಅವರ ಛಾಯಾಗ್ರಹಣವಿದೆ. ಅಂತೂ ದೀಪಾವಳಿ ರಘು ಚಿತ್ರರಂಗದ ಜೀವನದಲ್ಲಿ ಬೆಳಕನ್ನು ತಂದಿದೆ. ಇತ್ತೀಚೆಗೆ ಮತ್ತೊಂದು ಚಿತ್ರ `ನೀನು ಇಲ್ಲದೆ'ಯಲ್ಲಿ ರಘು ಮುಖರ್ಜಿ ನಟಿ ಪೂಜಾ ಗಾಂಧಿ ಜೊತೆಯಲ್ಲಿ ಅಭಿನಯಿಸುತ್ತಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿರಿಸುವ ಮುನ್ನಾ ದಿಗ್ಗಜ ಗ್ರಾಸಿಮ್ ಅವರು ನಡೆಸಿದ 26 ರಾಷ್ಟ್ರಗಳ ಮಾಡೆಲ್‌ಗಳು ಭಾಗವಹಿಸಿದ್ದ `ಮಿಸ್ಟರ್ ಇಂಟರ್‌ನ್ಯಾಷನಲ್' ಸ್ಪರ್ಧೆಯಲ್ಲಿ ವಿಜೇತರಾಗಿ ಸ್ವರ್ಣ ಗಂಢಬೇರುಂಡ ಪದಕವನ್ನು ಪಡೆದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಘು ಮುಖರ್ಜಿ ಕನ್ನಡ ಸಿನೆಮಾ, ಸ್ಯಾಂಡಲ್ವುಡ್