ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸ್ವಂತ ಮೃಗಾಲಯ ಹೊಂದಿರುವ ಏಕೈಕ ನಟ ದರ್ಶನ್ (Kannada cinema | Darshan | Sandalwood)
ಸುದ್ದಿ/ಗಾಸಿಪ್
Bookmark and Share Feedback Print
 
NRB
ದಿವಂಗತ ತೂಗುದೀಪ ಶ್ರೀನಿವಾಸ್ ಅವರ ಪುತ್ರ ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್.ಆರು ಅಡಿ ಮೀರಿರುವ ದಷ್ಟಪುಷ್ಟ ವ್ಯಕ್ತಿತ್ವ. ಇತರ ನಟರಿಗಿಂತ ಕೊಂಚ ಏನು ಎಲ್ಲದರಲ್ಲೂ ವಿಭಿನ್ನ ಎನ್ನಬಹುದು.

ತನಗಿಷ್ಟವಾದದನ್ನು ಮಾಡೇ ತೀರುವ ಹಂಬಲ ಹೊಂದಿರುವ ವಿಶಿಷ್ಟ ನಟ. ಈತನಿಗೆ ಪ್ರಾಣಿ, ಪಕ್ಷಿಗಳೆಂದರೆ ಎಲ್ಲಿಲ್ಲದ ಪ್ರೀತಿ. ಇದರಿಂದಾಗಿಯೇ ತನ್ನದೇ ಆದ ಸ್ವಂತ ಮೃಗಾಲಯವನ್ನು ಹೊಂದಿರುವ ವಿಶ್ವದ ಏಕೈಕ ನಟ ಎಂಬ ಕೀರ್ತಿಯೂ ಈತನಿಗೆ ಸಲ್ಲಬೇಕು.

ಮೈಸೂರು ಸಮೀಪದಲ್ಲಿ ಉತ್ತಮ ಮೃಗಾಲಯವನ್ನು ಹೊಂದಿರುವುದಲ್ಲದೆ, ಮನೆ ತುಂಬಾ ಸಾಕು ಪ್ರಾಣಿ ಹಾಗೂ ನಾನಾ ರೀತಿಯ ಪಕ್ಷಿಗಳನ್ನು ಸಾಕಿದ್ದಾರೆ.

ಇಷ್ಟೇ ಅಲ್ಲದೆ ಹೊಸ ಕಾರುಗಳೆಂದರೆ ಎಲ್ಲಿಲ್ಲದ ಹುಚ್ಚು. ಇತ್ತೀಚೆಗೆ ದುಬೈನಿಂದ ಆಮದು ಮಾಡಿಕೊಂಡ ಬ್ರಾಂಡ್ ನ್ಯೂ ಎಚ್3 ಹ್ಯಾಮ್ ಕಾರ್ ಹಾಗೂ ಆಡಿ ಎ6 ಕಾರು ಇವರ ಮನೆ ಮನ ತುಂಬಿದೆ.

ಬಾಕ್ಸ್ ಆಫೀಸ್ ದಾಖಲೆ `ಕರಿಯ': ದರ್ಶನ್ ನಟಿಸಿರುವ `ಕರಿಯ' ಚಿತ್ರ ಎರಡನೇ ಬಾರಿ ಬಿಡುಗಡೆಯಾದಾಗಲೂ 700 ದಿನಗಳ ಓಡಿ ಬಾಕ್ಸ್ ಆಫೀಸ್ ದಾಖಲೆ ನಿರ್ಮಿಸಿದೆ.

2000ರಲ್ಲಿ ಪಿ.ಎನ್, ಸತ್ಯ ನಿರ್ದೇಶನದ `ಮೆಜೆಸ್ಟಿಕ್' ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದರ್ಶನ್ ಕೈಲಿ ಈಗ ಹಲವಾರು ಚಿತ್ರಗಳಿವೆ. ಮೈಸೂರು ಹುಡುಗ, ಭೀಮ, ಅಪ್ಪಿ, ಬಾಸ್, ಸಿಹಿ ಮುತ್ತು, ಚಿಂಗಾರಿ, ಪ್ರಿನ್ಸ್, ಸಾರಥಿ, ಸರ್ವಾಂತರ್ಯಾಮಿ, ಶೌರ್ಯ ಹಾಗೂ ಇಂದ್ರ ಸಾಲು ಸಾಲಾಗಿ ನಿಂತಿವೆ. ಇನ್ನೂ ಅವರ 45ನೇ ಚಿತ್ರವಾಗಲಿದೆ `ಸಂಗೊಳ್ಳಿ ರಾಯಣ್ಣ' ಆಗಲಿದೆ. ಈ ಯುವ ನಟನಿಗೆ ಮೈಸೂರು, ಮಂಡ್ಯ ಭಾಗದಲ್ಲಿ ಇವರ ಅಭಿಮಾನಿಗಳ ಬಳಗ ಜಾಸ್ತಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತೂಗುದೀಪ ಶ್ರೀನಿವಾಸ್, ದರ್ಶನ್, ಕನ್ನಡ ಸಿನೆಮಾ