ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೆಲೆಬ್ರೆಟಿಗಳ ಸಂಭ್ರಮದಲ್ಲಿ ಇಂದ್ರಜಿತ್ 'ಹುಡುಗ ಹುಡುಗಿ' (Huduga Hudugi | Indrajit Lankesh | Kannada Film | Lekha Washington)
ಸುದ್ದಿ/ಗಾಸಿಪ್
Bookmark and Share Feedback Print
 
PR
ಇಂದ್ರಜಿತ್ ಲಂಕೇಶ್ ಅವರ 'ಹುಡುಗ ಹುಡುಗಿ' ಚಿತ್ರ ಪ್ರೇಕ್ಷಕರ ಪಾಲಿಗೆ ಕೊಂಚ ಇಷ್ಟಂ, ಕೊಂಚ ಕಷ್ಟಂ ಆಗಿದೆ ಎನ್ನುವಷ್ಟರಲ್ಲೇ ಸ್ಟಾರ್ ನಿರ್ದೇಶಕ ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳಿಗೆ ಸಿನಿಮಾ ತೋರಿಸುವ ಹೊಸ ತಂತ್ರಕ್ಕೆ ಮುಂದಾಗಿದ್ದಾರೆ.

ಕೋರಮಂಗಲದ ಮಲ್ಟಿಪ್ಲೆಕ್ಸ್‌ನಲ್ಲಿ ಚಿತ್ರರಂಗದ ಗಣ್ಯಾತಿಗಣ್ಯರು ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂದ್ರಜಿತ್ ಕೆಂಪುಬಟ್ಟೆಯಲ್ಲಿ ಸಹಧರ್ಮಿಣಿ ಅರ್ಪಿತಾ ಜೊತೆ ಮಿರಮಿರ ಮಿಂಚುತ್ತಿದ್ದರು. ತಾರೆಗಳ ಆಗಮನದ ಸಂತಸದಲ್ಲಿ ಬೀಗುತ್ತಿದ್ದರು.

ಹಿರಿಯ ನಟ ಅಂಬರೀಷ್ ಹಾಗೂ ಪತ್ನಿ ಸುಮಲತಾ, ಹಿರಿಯ ನಟಿ ಜಯಂತಿ, ರಮೇಶ್ ಭಟ್, ನಿಖಿತಾ ಭಾಗವಹಿಸಿದ್ದರು. ದಿಗಂತ್ ಮತ್ತು ಐಂದ್ರಿತಾ ರೇ ಚಿತ್ರ ಶುರುವಾದ ನಂತರ ಎಂಟ್ರಿ ತೆಗೆದುಕೊಂಡರು.

ಚಿತ್ರದ ನಾಯಕಿ ಲೇಖಾ ವಾಷಿಂಗ್ಟನ್ ಉಪಸ್ಥಿತರಿದ್ದರು. ಆದರೆ ನಾಯಕ ಧ್ಯಾನ್ ನಾಪತ್ತೆಯಾಗಿದ್ದರು. ನಟಿ ಸಂಜನಾ ತನ್ನ ಸಹೋದರಿಯೊಂದಿಗೆ ಸಿನಿಮಾ ನೋಡಿ ಸಂಭ್ರಮಿಸಿದರು.

ನಿರ್ಮಾಪಕ ಸಂದೇಶ್ ನಾಗರಾಜ್ ಕುಟುಂಬ ಸಮೇತ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಾಕ್‌ಲೈನ್ ವೆಂಕಟೇಶ್, ಟಿ.ಎನ್. ಸೀತಾರಾಮ್, ವಿ. ಮನೋಹರ್ ಮುಂತಾದವರಿಂದ ಸಿನಿಮಾ ಮಂದಿರ ಕಲರ್‌ಫುಲ್ ಆಗಿತ್ತು. ಸಿನಿಮಾ ನೋಡಿದ ಸ್ಯಾಂಡಲ್‌ವುಡ್ ಮಂದಿ ಇಂದ್ರಜಿತ್ ಲಂಕೇಶ್ ಅವರನ್ನು ಎಲ್ಲ ರೀತಿಯಲ್ಲೂ ಪ್ರಶಂಸಿಸಿದರು.

ಈ ಪ್ರಶಂಸೆಯಿಂದ ಗಲ್ಲಾಪೆಟ್ಟಿಗೆ ತುಂಬಬಲ್ಲುದೇ ಎಂಬುದನ್ನು ಕಾದುನೋಡಬೇಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುಡುಗ ಹುಡುಗಿ, ಇಂದ್ರಜಿತ್ ಲಂಕೇಶ್, ಕನ್ನಡ ಸಿನಿಮಾ