ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ನೆನಪಿನಂಗಳ'ದಲ್ಲಿ ತೇಲುತ್ತಿರುವ ಅಂಬಾರಿ ಸುಂದರಿ ಸುಪ್ರೀತಾ (Chandra Mavinakunte | Hemanth | Supreeta | CR Babji)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಸಾಲು ಸಾಲು ಕನ್ನಡ ಚಿತ್ರಗಳು ತೋಪಾಗುತ್ತಿದ್ದರೂ, ಸಿನಿಮಾದ ಎಬಿಸಿಡಿ ಗೊತ್ತಿಲ್ಲದೆ ನಿರ್ದೇಶನಕ್ಕೆ, ನಿರ್ಮಾಣಕ್ಕಿಳಿಯುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಎಲ್ಲೆಲ್ಲೋ ಗಳಿಸಿದ ಹಣವನ್ನು ಸ್ಯಾಂಡಲ್‌ವುಡ್‌ನಲ್ಲಿ ಸುರಿದು ನಂತರ ಗೋಳೋ ಎಂದು ಅಳುತ್ತಾರೆ.

ಅದೇನೇ ಇರಲಿ, ಈಗ ಹೇಳಲು ಹೊರಟಿರುವುದು 'ನೆನಪಿನ ಅಂಗಳ' ಎಂಬ ಹೊಸ ಚಿತ್ರದ ಬಗ್ಗೆ.

ಯಾರಿಗೆ ನೆನಪು ಇರಲಿ ಬಿಡಲಿ, ನನ್ನ ಕಾಯಕ ಮಾತ್ರ ನಾನು ಬಿಡೋಲ್ಲ. ಇನ್ನು ಇದನ್ನು ಹಚ್ಚಿಕೊಂಡ ಮೇಲೆ ಬಿಡೋಕ್ಕು ಆಗೋಲ್ಲ ಎನ್ನುತ್ತಾ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ ನಿರ್ದೇಶಕ ಚಂದ್ರ ಮಾವಿನಕುಂಟೆ.

ನಾಯಕನಾಗಿ ನಟ ಹೇಮಂತ್ ಹಾಗೂ ಇವರಿಗೆ ಜೋಡಿಯಾಗಿ 'ಅಂಬಾರಿ'ಯ ಮಂಗಳೂರು ಹುಡುಗಿ ಸುಪ್ರೀತಾ ನಟಿಸುತ್ತಿದ್ದಾರೆ.

ವಿ. ನಾಗೇಂದ್ರಪ್ರಸಾದ್ ಬರೆದಿರುವ ಲವ್ ಗೀತೆಗೆ ಈ ಜೊಡಿ ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ ಕುಣಿದು ಕುಪ್ಪಳಿಸಿದೆ. ಸಂಗೀತವನ್ನು ಸಿ.ಆರ್. ಬಾಬ್ಜಿ ನಿಭಾಯಿಸುತ್ತಿದ್ದು, ಜಿ. ರೇಣುಕುಮಾರ್ ಛಾಯಾಗ್ರಹಣ ಮಾಡಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಂದ್ರ ಮಾವಿನಕುಂಟೆ, ಹೇಮಂತ್, ಸುಪ್ರೀತಾ, ಸಿಆರ್ ಬಾಬ್ಜಿ