ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹೊಸ 'ಗಾನ ಬಜಾನಾ'ದಲ್ಲಿ ತರುಣ್ ಚಂದ್ರ ಬ್ಯುಸಿಯಂತೆ (Gana Bajana | Tarun Chandra | Inayat Khan | Rangayana Raghu)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ದೀಪಾವಳಿ ಮುಗಿದೋಯ್ತು, ಪಟಾಕಿಗಳು ಸಿಡಿದವು, ಬಾಂಬುಗಳು ಢಂ ಢಂ ಎಂದರೆ, ರಾಕೆಟ್‌ಗಳು ಹಾರಿದವು. ಸಿನಿಮಾಗಳಿಗೂ ಪಟಾಕಿಗಳಿಗೂ ಏನು ಸಂಬಂಧ ಅಂದುಕೊಂಡಿದ್ದೀರಾ? ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ದೀಪಾವಳಿ ಹೊತ್ತಿನಲ್ಲಿ ಬಿಡುಗಡೆಯಾದ ಹಲವು ಚಿತ್ರಗಳ ಕಥೆಯೂ ಇದೇ ಆಗಿರುವುದರಿಂದ ಇದು ಸಾಂದರ್ಭಿಕ ತಾನೇ?

ಹೌದು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅತ್ಯುತ್ತಮ ಭಿನ್ನ ಚಿತ್ರ ಎಂದು ಹೆಸರು ಪಡೆದುಕೊಂಡರೂ 'ಗಾನ ಬಜಾನಾ' ಆರಕ್ಕೇರದೆ ಮೂರಕ್ಕಿಳಿಯದೆ ನಿರ್ಮಾಪಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ನೇರವಾಗಿ ಹೇಳುವುದಿದ್ದರೆ ಚಿತ್ರ ಫ್ಲಾಪ್ ಆಗಿದೆ. ಹಲವು ಚಿತ್ರಗಳ ಪಟ್ಟಿಗೆ ಪ್ರಶಾಂತ್ ರಾಜ್ ಅವರ ನಿರೀಕ್ಷೆಯ ಚಿತ್ರ ಸೇರಿ ಹೋಗಿದೆ.

ಆದರೂ ಈ ಚಿತ್ರದ ನಾಯಕ ತರುಣ್ ಚಂದ್ರ ಸೋತಿಲ್ಲ. ಅವರ ಅಮೋಘ ನಟನೆ ಹಲವು ಹೊಸ ಆಫರುಗಳನ್ನು ತಂದು ಕೊಟ್ಟಿದೆ. ಅದರಲ್ಲೊಂದು ಫೈನಲ್ ಕೂಡ ಆಗಿದೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ.

ಇದರ ನಿರ್ದೇಶನ ಹೊಣೆಯನ್ನು ನಿಭಾಯಿಸುತ್ತಿರುವುದು ಇನಾಯತ್ ಖಾನ್. ಬಾಂಬೆಯಲ್ಲಿದ್ದ ಖಾನ್ ಅಲ್ಲೊಂದಿಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಹೆಸರು ಮಾಡಿರುವ ಹಣೆಪಟ್ಟಿ ಹೊಂದಿದ್ದಾರೆ. ಕಲಾತ್ಮಕ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವೂ ಬೆನ್ನಿಗೆದೆ.

ಇನ್ನು ಈ ಚಿತ್ರದ ನಿರ್ಮಾಪಕರು ಲೋಕೇಶ್. ಹಿಂದೆ ತುಳು ಚಿತ್ರವೊಂದನ್ನು ನಿರ್ಮಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದವರು.

ಇದೊಂದು ಫ್ಯಾಮಿಲಿ ಎಂಟರ್ಟೈನರ್ ಚಿತ್ರ. ಅದಕ್ಕೆ ಸೂಕ್ತ ತಾರಾಗಣದ ಹುಡುಕಾಟ ನಡೆದಿದೆ. ಈಗಾಗಲೇ ರಂಗಾಯಣ ರಘು ಅವರ ಆಯ್ಕೆ ಮುಗಿದಿದೆ. ಉಳಿದ ತಾರೆಗಳು ಯಾರು ಎಂಬುದು ಕಾಲ ನಿರ್ಣಯಿಸುತ್ತದೆ. ಆದರೆ, ಎಂ.ಎಂ. ನೀಲ್ ಸಂಗೀತದಲ್ಲಿ ಐದು ಹಾಡುಗಳು ಚಿತ್ರಕ್ಕೆ ರೆಡಿಯಾಗಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗಾನ ಬಜಾನಾ, ತರುಣ್ ಚಂದ್ರ, ಇನಾಯತ್ ಖಾನ್, ಲೋಕೇಶ್