ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಿಚ್ಚ ಸುದೀಪ್ ಇನ್ನು ಸಿನಿಮಾಗಳಲ್ಲಿ ನಟಿಸಲ್ವಂತೆ, ನಿಜಾನಾ? (Sudeep | Kannada actor | Kempegowda | Sparsha)
ಸುದ್ದಿ/ಗಾಸಿಪ್
Bookmark and Share Feedback Print
 
ಹೀಗೊಂದು ಸುದ್ದಿ ಟ್ವಿಟ್ಟರಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ಬೆನ್ನಿಗೆ ಅದು ಕೇವಲ ರೂಮರ್ ಅಲ್ಲ, ನಿಜ. ನಾನು ಶೀಘ್ರದಲ್ಲೇ ನಟನೆಗೆ ಗುಡ್ ಬೈ ಹೇಳುತ್ತಿದ್ದೇನೆ ಎಂದು ಸ್ವತಃ ಸುದೀಪ್ ಸ್ಪಷ್ಟನೆ ಬೇರೆ ನೀಡಿದ್ದಾರೆ.

ಯಾವ ಕಾರಣಕ್ಕೆ ಈ ಹೇಳಿಕೆಯನ್ನು ನೀಡಿದ್ದಾರೆ? ನಿಜಕ್ಕೂ ಸುದೀಪ್ ಗಂಭೀರವಾಗಿ ಈ ಹೇಳಿಕೆಯನ್ನು ನೀಡಿದ್ದಾರಾ? ಕೇವಲ ನಟನೆಗೆ ಮಾತ್ರ ಬೆನ್ನು ತಿರುಗಿಸಿದ್ದಿರಬಹುದೇ? ನಿರ್ದೇಶಕನಾಗಿ ಚಿತ್ರರಂಗದಲ್ಲಿ ಮುಂದುವರಿಯುತ್ತಾರಾ? ಅವರ ಮುಂದಿನ ಯೋಜನೆಗಳೇನು?-- ಇಂತಹ ಯಾವುದೇ ಪ್ರಶ್ನೆಗಳಿಗೆ ಸುದೀಪ್ ಸಂದೇಶದಲ್ಲಿ ಉತ್ತರವಿಲ್ಲ.
MOKSHA

ಹಾಗಾಗಿ ಸುದೀಪ್ ನೀಡಿರುವ ಹೇಳಿಕೆ ಯಾವುದೇ ಗಂಭೀರ ಸ್ವರೂಪವನ್ನು ಪಡೆದುಕೊಂಡಿಲ್ಲ.

'ಹೌದು, ನೀವು ಕೇಳಿರುವುದು ಸರಿ. ಅದು ವದಂತಿ ಅಲ್ಲ. ನಾನು ಶೀಘ್ರದಲ್ಲೇ ನಟನೆಯನ್ನು ಬಿಡುತ್ತಿದ್ದೇನೆ. ಅದೇ ಕಾರಣದಿಂದ ನಾನು ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ' ಎಂದು ಟ್ವಿಟ್ಟರಿನ ತನ್ನ ಪುಟದಲ್ಲಿ ಕಿಚ್ಚ ಹೇಳಿಕೊಂಡಿದ್ದಾರೆ.

ಅವರು ಪೋಸ್ಟ್ ಮಾಡಿರುವ ಇಂಗ್ಲೀಷ್ ಮೆಸೇಜ್ ಹೀಗಿದೆ, ಓದಿ -- Yes,, u'v heard it rite n it aint a rumor,, I am quittin acting soon.. tats th reason I'v reduced on signin films.

ರೈಲು ಹತ್ತಿಸ್ತಿದ್ದಾರಾ?
ಸುದೀಪ್ ಸುಮ್ಮನೆ ಬಿಲ್ಡಪ್ ತೆಗೆದುಕೊಳ್ಳೋದಿಕ್ಕೆ ಹೀಗೆಲ್ಲ ಹೇಳಿಕೆ ನೀಡ್ತಿದ್ದಾರಾ? ಹೌದಿರಬಹುದು ಎಂದು ಹೇಳಲು ಹಲವು ಕಾರಣಗಳಿವೆ. ಯಾಕೆಂದರೆ ಚಿತ್ರರಂಗದಲ್ಲಿ ಬೇಡಿಕೆ ಇರುವಾಗ ಬೆನ್ನು ಹಾಕಿದ ವ್ಯಕ್ತಿ ಯಾರಿದ್ದಾರೆ ಹೇಳಿ?

ಪ್ರಸಕ್ತ ಕನ್ನಡ, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ಅಷ್ಟಿಷ್ಟು ಅವಕಾಶಗಳನ್ನು ಗಿಟ್ಟಿಸಿಕೊಂಡಿರುವ ಬ್ಯುಸಿ ನಟ, ನಟನೆಗೆ ಗುಡ್ ಬೈ ಹೇಳುವುದೆಂದರೆ? ಓಹೋ, ಬಹುಶಃ ಅವರು ನಿರ್ದೇಶನವನ್ನೇ ಗಟ್ಟಿ ಮಾಡಿಕೊಳ್ಳಬಹುದು ಎಂದು ಯಾರಾದರೂ ಯೋಚಿಸಿದ್ದರೆ ಅದು ಮೂರ್ಖತನದ ವಿಚಾರವಾಗುತ್ತದೆ. ಯಾಕೆಂದರೆ ಅವರು ನಿರ್ದೇಶನದಲ್ಲಿ ಹೇಳಿಕೊಳ್ಳುವಂತಹ ಯಶಸ್ಸನ್ನು ಇದುವರೆಗೆ ಕಂಡಿಲ್ಲ.

ಕನಿಷ್ಠ ಒಂದು ಚಿತ್ರದ ನಟನೆಗಾಗಿ ಅವರು ಪಡೆಯುವ ಸಂಭಾವನೆ 50 ಲಕ್ಷ ರೂಪಾಯಿಗಳಿಗೂ ಹೆಚ್ಚು. ಆದರೆ ಕೇವಲ ನಿರ್ದೇಶಕನಾಗಿ ಸುದೀಪ್ ಮುಂದೆ ಬಂದರೆ ಅವರಿಗೆ ಅಷ್ಟು ಸಂಭಾವನೆ ಯಾರೂ ಕೊಡಲಾರರು. ಜನಪ್ರಿಯತೆ ವಿಚಾರದಲ್ಲೂ ಇದೇ ಮಾನದಂಡ ಪ್ರಮುಖವಾಗುತ್ತದೆ. ಚಿತ್ರರಂಗ ಬಿಟ್ಟು ಇತರ ಬದುಕಿನ ಬಗ್ಗೆ ಸುದೀಪ್ ಯೋಚನೆ ಮಾಡಿರುವ ಸಾಧ್ಯತೆ ಕಡಿಮೆ.

ಏನೇ ಇರಲಿ, ಅಭಿಮಾನಿಗಳು ಆತಂಕಕ್ಕೆ ಒಳಗಾಗಿರುವುದಂತೂ ನಿಜ. ತಮ್ಮ ಆರಾಧ್ಯದೈವ ಇಂತಹ ಹೇಳಿಕೆ ನೀಡಿರುವುದನ್ನು ಕಂಡು ದಂಗಾಗಿರುವ ಅಭಿಮಾನಿಗಳು ಮನವಿಗಳ ಮೇಲೆ ಮನವಿಗಳನ್ನು ಮಾಡುತ್ತಿದ್ದಾರೆ. ನಿಮ್ಮ ನಟನೆ, ನಿರ್ದೇಶನ ಕನ್ನಡ ಚಿತ್ರರಂಗಕ್ಕೆ ಅಗತ್ಯವಿದೆ, ದಯವಿಟ್ಟು ಹಾಗೆಲ್ಲ ಮಾತನಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಈ ನಡುವೆ ಹೊಡೆದಾಟದ ಶೂಟಿಂಗ್‌ನಲ್ಲಿ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ ಸುದೀಪ್. ಪ್ರಸಕ್ತ ವಿಶ್ರಾಂತಿಯಲ್ಲಿದ್ದಾರೆ. ಅದೆಲ್ಲ ಏನೇ ಆಗಿರಲಿ, ಟ್ವಿಟ್ಟರಿನಲ್ಲಿ ನೀಡಿರುವ ಹೇಳಿಕೆ ಬಗ್ಗೆ ಸುದೀಪ್ ಸ್ಪಷ್ಟನೆ ನೀಡಬೇಕಾದ ಅಗತ್ಯವಿದೆ. ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ ಎನ್ನುವುದನ್ನು ಅವರು ಅರಿತುಕೊಂಡರೆ ಉತ್ತಮ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುದೀಪ್, ಕನ್ನಡ ನಟ, ಕೆಂಪೇಗೌಡ, ಸ್ಪರ್ಶ