ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾಹಸಸಿಂಹ ವಿಷ್ಣುವರ್ದನ್ 'ಆಪ್ತರಕ್ಷಕ' ವಿದೇಶಕ್ಕೂ ಲಗ್ಗೆ (Vishnuvardhan | Aptarakshaka | Ramesh Aravind | Avinash)
ಸುದ್ದಿ/ಗಾಸಿಪ್
Bookmark and Share Feedback Print
 
ವಿದೇಶಗಳಲ್ಲಿ ನೆಲೆಸಿರುವ ವಿಷ್ಣು ಅಭಿಮಾನಿಗಳ ಬಯಕೆ ಕೊನೆಗೂ ಈಡೇರಿದೆ. ಸಾಹಸಸಿಂಹ ದಿವಂಗತ ವಿಷ್ಣುವರ್ದನ್ ಅಭಿನಯದ 200ನೇ ಹಾಗೂ ಕೊನೆಯ ಚಿತ್ರ 'ಆಪ್ತ ರಕ್ಷಕ'ದ ಡಿವಿಡಿ ಹಾಗೂ ವಿಸಿಡಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಡಿವಿಡಿಯನ್ನು ಜನಪ್ರಿಯ ಮೋಸರ್ಬೇರ್ ಹೊರತಂದಿದೆ. ಬ್ಲೂ ರೇ ಡಿಸ್ಕ್ ವಿನ್ಯಾಸದಲ್ಲಿರುವ ಡಿವಿಡಿ ನೋಡುಗರಿಗೆ ಸಮೃದ್ಧ ಅನುಭವ ನೀಡಲಿದೆ. ಬ್ಲೂ ರೇ ಡಿಸ್ಕ್‌ನಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಚಿತ್ರ ಎಂಬ ಖ್ಯಾತಿಗೂ ‘ಆಪ್ತರಕ್ಷಕ’ ಪಾತ್ರವಾಗಿದೆ.
MOKSHA

ನಟ ರಮೇಶ್ ಅರವಿಂದ್ ಅವರು ‘ಆಪ್ತರಕ್ಷಕ’ ಡಿವಿಡಿಯನ್ನು ಇತ್ತೀಚೆಗೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಿಲಯನ್ಸ್ ಟೈಮ್ಔಟ್ ಮಳಿಗೆಯಲ್ಲಿ ಬಿಡುಗಡೆ ಮಾಡಿದರು.

ಸಾಹಸಸಿಂಹ ವಿಷ್ಣುವರ್ದನ್ ಅವರ ಕೊನೆಯ ಚಿತ್ರ ‘ಆಪ್ತರಕ್ಷಕ’ ಕನ್ನಡದ ಸೂಪರ್ ಹಿಟ್ ಚಿತ್ರ. ‘ಆಪ್ತರಕ್ಷಕ’ ಬಿಡುಗಡೆಯಾದ ದಿನದಿಂದಲೇ ಭರ್ಜರಿ ಆರಂಭ ಕಂಡಿತ್ತು. ಎಲ್ಲಾ ಕೇಂದ್ರಗಳಲ್ಲಿ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಇದರ ಡಿವಿಡಿ/ವಿಸಿಡಿ ಬಿಡುಗಡೆ ನಡೆದದ್ದು ವರ್ಣರಂಜಿತ ಸಮಾರಂಭದಲ್ಲಿ. ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

‘ಆಪ್ತರಕ್ಷಕ’ದಲ್ಲಿ ಡಾ. ವಿಷ್ಣುವರ್ದನ್ ಜತೆ ಸಂಧ್ಯಾ, ವಿಮಲಾ ರಾಮನ್, ಅವಿನಾಶ್, ಶ್ರೀನಿವಾಸ ಮೂರ್ತಿ, ಭಾವನಾ, ಲಕ್ಷ್ಮಿ ಗೋಪಾಲಸ್ವಾಮಿ, ಕೋಮಲ್ ಮುಂತಾದವರು ನಟಿಸಿದ್ದಾರೆ. ಗುರುಕಿರಣ್ ಸಂಗೀತವಿದೆ. ಪಿ. ವಾಸು ನಿರ್ದೇಶನದ ಚಿತ್ರವಿದು. 2004ರಲ್ಲಿ ವಾಸು ನಿರ್ದೇಶನದ, ವಿಷ್ಣುವರ್ದನ್ ಅಭಿನಯದ ‘ಆಪ್ತಮಿತ್ರ’ ಕೂಡ ಅಭೂತಪೂರ್ವ ಯಶಸ್ಸು ಗಳಿಸಿತ್ತು ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ಗುರುಕಿರಣ್ ಅವರ ಸಂಗೀತ ಯಶಸ್ವಿಯಾಗಿದೆ. ವಿಮಲಾ ರಾಮನ್ ನೃತ್ಯ ಹಾಗೂ ನಾಗವಲ್ಲಿಯಾಗಿ ಅಭಿನಯ ಮನ್ನಣೆ ಗಳಿಸಿದೆ. ಡಿವಿಡಿ ದರ ರೂ. 125 ಮತ್ತು ವಿಸಿಡಿ ದರ ರೂ.49. ವಿದೇಶಗಳಲ್ಲಿರುವವರು ಕೂಡ ಸಂಸ್ಥೆಯಿಂದ ಇಂಟರ್ನೆಟ್ ಮೂಲಕ ಡಿವಿಡಿಗಳನ್ನು ಖರೀದಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ದನ್, ಆಪ್ತರಕ್ಷಕ, ರಮೇಶ್ ಅರವಿಂದ್, ಅವಿನಾಶ್