ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಸೂಪರ್' ಪ್ರಚಂಡ ಜಯಭೇರಿ ಗ್ಯಾರಂಟಿ; ಮುಂದೇನು ಉಪ್ಪಿ? (Super | Upendra | Nayanthara | Indian politics)
ಸುದ್ದಿ/ಗಾಸಿಪ್
Bookmark and Share Feedback Print
 
ಲೇಟಾಗಿ ಬಂದ್ರೂ ಲೇಟೆಸ್ಟಾಗಿ 'ಸೂಪರ್' ಮೂಲಕ ಬೆಳ್ಳಿತೆರೆಗೆ ಅಬ್ಬರದಿಂದ ಅಪ್ಪಳಿಸಿ, ಆತ್ಮಾಭಿಮಾನವನ್ನು ಬಡಿದೆಬ್ಬಿಸಿರುವ ಉಪೇಂದ್ರ ನಿಜಕ್ಕೂ ರಾಜಕೀಯಕ್ಕೆ ಬರುತ್ತಾರಾ? ಬರುವುದೇ ಆದರೆ ಈಗಿರುವ ಗಬ್ಬೆದ್ದು ಹೋಗಿರುವ ಪಕ್ಷಗಳನ್ನೇ ಸೇರುತ್ತಾರಾ ಅಥವಾ ಹೊಸ ಪಕ್ಷವನ್ನೇನಾದರೂ ಹುಟ್ಟು ಹಾಕುತ್ತಾರಾ ಎಂಬಂತಹ ಪ್ರಶ್ನೆಗಳು ಉಪ್ಪಿಯನ್ನು ಸಿಕ್ಕಸಿಕ್ಕಲ್ಲೆಲ್ಲಾ ಮುತ್ತಿಕೊಳ್ಳುತ್ತಿವೆ.

ಇದನ್ನೂ ಓದಿ: ಸೂಪರ್ ಚಿತ್ರವಿಮರ್ಶೆ; ಉಪ್ಪಿಗಿಂತ ರುಚಿ ಬೇರೆ ಇಲ್ಲ

ಊಹುಂ, ಯಾವುದಕ್ಕೂ ಉಪೇಂದ್ರ ಉತ್ತರಿಸುತ್ತಿಲ್ಲ. ಭಾರೀ ಗ್ಯಾಪ್ ನಂತರ ತನ್ನ ನಿರ್ದೇಶನ ಕ್ಲಿಕ್ ಆಗುವುದೋ, ಇಲ್ಲವೋ ಎಂಬ ಸಂದಿಗ್ಧತೆಯನ್ನೇ ಎದುರಿಸುತ್ತಿದ್ದ ಉಪ್ಪಿ, ಅಭಿಮಾನಿಗಳ ಹರ್ಷೋದ್ಘಾರಗಳ ಹೊರತಾಗಿಯೂ ನಿರಾಳರಾಗಿಲ್ಲ. ನಿರಾಳರಾದರೂ ಅವರ ಬಾಯಿಯಿಂದ ಅದೇ ತತ್ವಜ್ಞಾನದ ಮಾತುಗಳ ಹೊರತು ಇನ್ನೇನೂ ಉದುರುತ್ತಿಲ್ಲ.
PR

ಜನಗಳ ಪ್ರತಿಕ್ರಿಯೆ ನೋಡಿದರೆ ನಾನು ಏನೂ ಮಾಡಬೇಕಾಗಿಲ್ಲ, ಎಲ್ಲವನ್ನೂ ಅವರೇ ಮಾಡುತ್ತಾರೆ ಎಂಬ ಭಾವನೆ ಬರುತ್ತಿದೆ. ಏನೋ ಮಾಡಬೇಕು ಎಂದುಕೊಂಡಿದ್ದೇನೆ. ಅದೇನು ಎಂದು ಈಗ ಹೇಳಲ್ಲ. ಕಾಲ ಬಂದಾಗ ನಿಮಗೇ ತಿಳಿಯುತ್ತದೆ. ಪ್ರತಿಯೊಬ್ಬರಲ್ಲಿರುವಂತೆ ನನ್ನಲ್ಲೂ ತುಡಿತಗಳಿವೆ. ನಿಮ್ಮಲ್ಲಿರುವ ಭಾವನೆಗಳೇ ನನ್ನಲ್ಲಿವೆ. ನಾನು ನನ್ನನ್ನು ಮೊದಲು ಜಾಗೃತಗೊಳಿಸುತ್ತಿದ್ದೇನೆ ಎನ್ನುತ್ತಾರೆ.

ಏನು ಬೇಕಾದರೂ ಮಾಡಿ, ಆದರೆ ನಿರ್ದೇಶನ ಮಾತ್ರ ಬಿಡಬೇಡಿ ಎಂದು ಅಭಿಮಾನಿಗಳು ಒತ್ತಾಯಿಸಿದಾಗ, ಖಂಡಿತಾ ಇಲ್ಲ; ಚಿತ್ರರಂಗವನ್ನು ಬಿಡುವ ಪ್ರಶ್ನೆಯೇ ಇಲ್ಲ. ಆದರೆ ಈ ಸಮಾಜಕ್ಕೆ ನನ್ನಿಂದ ಏನಾದರೂ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆಯೇ ಎಂಬುದನ್ನು ನೋಡುತ್ತೇನೆ. ಅದು ಯಶಸ್ವಿಯಾಗುತ್ತದೆ ಎಂದಲ್ಲ, ನನ್ನದು ಪ್ರಯತ್ನ ಮಾತ್ರ. ಪ್ರತಿಯೊಬ್ಬರೂ ಪಕ್ಕದ ಮನೆಯನ್ನು ನೋಡಿದರೆ, ನಮ್ಮನ್ನು ನಾವು ನೋಡಿಕೊಳ್ಳುವುದು ಯಾವಾಗ ಎಂದು ಅರ್ಥವಾಗದ ರೀತಿಯಲ್ಲಿ ಉತ್ತರಿಸಿ ತಬ್ಬಿಬ್ಬು ಮಾಡುತ್ತಾರೆ ಉಪ್ಪಿ.

'ಸೂಪರ್' ಚಿತ್ರಕ್ಕಂತೂ ಭರ್ಜರಿ ಓಪನಿಂಗ್ ಸಿಕ್ಕಿದೆ. ಅಭಿಮಾನಿಗಳು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಂತಸದಲ್ಲಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ 130 ಚಿತ್ರಮಂದಿರಗಳಲ್ಲಿ ತುಂಬಿದ ಗೃಹದಿಂದ ಪ್ರದರ್ಶನಗೊಳ್ಳುತ್ತಿದೆ. ಸಾವಿರಾರು ಅಭಿಮಾನಿಗಳು ಟಿಕೆಟ್ ಸಿಗದೆ ಹತಾಶರಾಗಿದ್ದಾರೆ. ಒಮ್ಮೆ ನೋಡಿದವರು ಮತ್ತೊಮ್ಮೆ ನೋಡಬೇಕು ಎಂದು ಮುಗಿ ಬೀಳುತ್ತಿದ್ದಾರೆ.

ಈ ನಡುವೆ ಉಪೇಂದ್ರ ಹತ್ತು ವರ್ಷಗಳ ಕಾಲ ಚಿತ್ರ ಮಾಡದೇ ಇರುವುದು ಮತ್ತು ಈಗ ರಾಜಕೀಯದ ಎಳೆಯುಳ್ಳ ಚಿತ್ರವೊಂದನ್ನು ಮಾಡಿರುವುದು ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲೋ ಎಂಬ ಶಂಕೆಗಳೂ ಹುಟ್ಟಿಕೊಂಡಿವೆ.

ಅದಲ್ಲ ಎಂದು ಅವರು ಹೇಳುತ್ತಿದ್ದಾರೆ. ನಾನು ಈ ಹಿಂದೆಯೂ ಒಂದೇ ಸೂತ್ರಕ್ಕೆ ಅಂಟಿಕೊಂಡವನಲ್ಲ. ನಾನು ನಿರ್ದೇಶಿಸಿದ ಬಹುತೇಕ ಎಲ್ಲಾ ಚಿತ್ರಗಳು ಭಿನ್ನ ವಿಚಾರಗಳನ್ನು ಒಳಗೊಂಡಿವೆ. ಮುಂದೆಯೂ ಹಾಗೆಯೇ ಇರುತ್ತದೆ ಎಂಬ ನಿಮ್ಮ ನಂಬಿಕೆಗೆ ಮೋಸ ಮಾಡದೇ ಇರಲು ಯತ್ನಿಸುತ್ತೇನೆ. ಎಲ್ಲದಕ್ಕೂ ದೇವರ ಮತ್ತು ಅಭಿಮಾನಿಗಳ ಆಶೀರ್ವಾದ ಬೇಕು ಅಂತಾರೆ.

ಮುಂದಿನ ಚಿತ್ರದ ಕುರಿತು ಯೋಚನೆ ಸಿದ್ಧವಾಗುತ್ತಿದೆ. ಅದು ಯಾವುದು ಎಂಬುದು ಈಗಲೇ ಹೇಳುವಷ್ಟು ವಿಚಾರ ಬಲಿತಿಲ್ಲ. ಎಲ್ಲವೂ ಒಂದು ಹಂತಕ್ಕೆ ಬಂದ ನಂತರ ಹೇಳುತ್ತೇನೆ. ಈಗಂತೂ ನಾನು 'ಸೂಪರ್' ಗುಂಗಿನಲ್ಲೇ ಇದ್ದೇನೆ ಎಂದು ಉಪ್ಪಿ ತಿಳಿಸಿದ್ದಾರೆ.

ಸಂಬಂಧಪಟ್ಟ ಸುದ್ದಿಗಳು:
** ಬಿಡುಗಡೆಗೆ ಮೊದಲೇ 'ಸೂಪರ್' ಹಿಟ್; ಉಪ್ಪಿ ರಾಜಕೀಯಕ್ಕೆ?
** 'ಸೂಪರ್' ಬಗ್ಗೆ ಅಂಬಿ, ಸುದೀಪ್, ದರ್ಶನ್, ಗಣೇಶ್ ಏನಂತಾರೆ?
** ಉಪ್ಪಿ ನಮ್ಮ ಗುರು, ನಾನು ಅವರ ಫ್ಯಾನ್: ಯೋಗರಾಜ್ ಭಟ್
** ಉಪ್ಪಿ 'ಸೂಪರ್' ಡಿ.3ಕ್ಕೆ ತೆರೆಗೆ; ಇಲ್ಲಿದೆ ಫೋಟೋ ಗ್ಯಾಲರಿ
** ನಕಲಿ ಆಡಿಯೋ ವಿರುದ್ಧ ಉಪೇಂದ್ರ 'ಸೂಪರ್' ಹೋರಾಟ
** ಉಪ್ಪಿ ನಿರ್ದೇಶನದಲ್ಲಿ ಪುನೀತ್; ಪಾರ್ವತಮ್ಮ ಏನಂತಾರೆ?
** ನಾನು ಮಾಡುವುದು ಪ್ರಯೋಗ, ಗಿಮಿಕ್ ಅಲ್ಲ: ಉಪೇಂದ್ರ
** ಉಪೇಂದ್ರ ಆಡಿಯೋ ಬಿಡುಗಡೆಯಲ್ಲಿ 'ಸೂಪರ್' ಡ್ರಾಮಾ
** ಟೇಕ್‌ಗೆ ಮಿಸ್ ಸೇರಿ ಮಿಸ್ಟೇಕ್ - ಇದು ಉಪ್ಪಿ ಸ್ಯಾಂಪಲ್
** ಮಿಸ್, ಮಿಸ್‌ಯೂಸ್, ಮಿಸ್ಟೇಕ್..? ಇದು ಉಪ್ಪಿ 'ಸೂಪರ್' ಬಿಟ್ಸ್
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂಪರ್, ಉಪೇಂದ್ರ, ನಯನತಾರಾ, ರಾಜಕೀಯ, ಭಾರತೀಯ ರಾಜಕಾರಣ