ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತಮ್ಮನಿಗಾಗಿ ಅಣ್ಣನಿಂದ ತಾಯಿ-ಮಗನ ಸೆಂಟಿಮೆಂಟ್ ಚಿತ್ರ! (Yashraj | Hai | Sania | GN Rudresh)
ಸುದ್ದಿ/ಗಾಸಿಪ್
Bookmark and Share Feedback Print
 
ತಮ್ಮನಿಗಾಗಿ ಅಣ್ಣ ಚಿತ್ರ ಮಾಡುವುದು ಕನ್ನಡ ಚಿತ್ರರಂಗಕ್ಕೆ ಹೊಸದಲ್ಲ. ಈ ಹಿಂದೆ ಸಾಕಷ್ಟು ಆಗಿದೆ. ಈಗೊಬ್ಬ ಅಣ್ಣ ಅದೇ ಮಾರ್ಗದಲ್ಲಿ ಸಾಗಲು ಮುಂದಾಗಿದ್ದಾನೆ.

ಉಯ್ಯಾಲೆ, ಕಣ್ಣಂಚಲಿ ಚಿತ್ರಗಳ ಬಳಿಕ ಅದೇ ತೆರನಾದ ಮತ್ತೊಂದು ಸಿನಿಮಾ 'ಹಾಯ್' ಬರುತ್ತಿದೆ. ಎಸ್. ರಾಘವೇಂದ್ರ ಕಟಾರೆ ತನ್ನ ಕಿರಿಯ ಸಹೋದರ ಯಶ್‌ರಾಜ್‌ಗಾಗಿ 'ಹಾಯ್' ನಿರ್ಮಿಸುತ್ತಿದ್ದಾರೆ.

ಯಶ್ ಮೂಲ ಹೆಸರು ದೇವರಾಜ್. ಅದೇ ಹೆಸರಿನ ಇನ್ನೊಬ್ಬ ಹೀರೋ ಈಗಾಗಲೇ ಗಾಂಧಿನಗರದಲ್ಲಿ ಇರುವುದರಿಂದ ಯಶ್‌ರಾಜ್ ಎಂದು ಹೆಸರು ಬದಲಾಗಿದೆಯಂತೆ. ನಟನೆಯ ಔಪಚಾರಿಕ ಪಾಠಗಳನ್ನು ಕಲಿಯದಿದ್ದರೂ ಬಲ್ಲವರಿಂದ ಅಭಿನಯ, ನೃತ್ಯ, ಸ್ಟಂಟ್ಸ್ ತರಬೇತಿ ಪಡೆದಿದ್ದಾರೆ.

ಕಳೆದ ವಾರ 'ಹಾಯ್' ಸೆಟ್ಟೇರಿದೆ. ಬೆಂಗಳೂರು ಜಯನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮುಹೂರ್ತ. ಸಿ.ರಾಜೇಶ್ ಮತ್ತು ಪವಿತ್ರಾ ಶ್ರೀನಿವಾಸ್ ಸಹ ನಿರ್ಮಾಪಕರು. ಎಸ್.ನಾರಾಯಣ್, ದಿನೇಶ್ ಬಾಬು ಮೊದಲಾದವರ ಜತೆ ಪಳಗಿರುವ ಜಿ.ಎನ್. ರುದ್ರೇಶ್ ನಿರ್ದೇಶಕರು. ಇದು ಅವರ ಮೊದಲ ಸಿನಿಮಾ. ಬೆಂಗಳೂರು, ದಾವಣಗೆರೆ, ಲಂಡನ್‌ಗಳಲ್ಲಿ ಚಿತ್ರೀಕರಣ ನಡೆಯಲಿದೆ.

ಪ್ರೇಮಕಥೆ ಹೊಂದಿರುವ ಚಿತ್ರದಲ್ಲಿ ತಾಯಿ, ಮಗನ ಬಾಂಧವ್ಯದ ಸೆಂಟಿಮೆಂಟ್ ಇದೆ. ಅಪ್ರಬುದ್ಧತೆಯ ಹಂತದಲ್ಲಿ ಅರಳುವ ಪ್ರೇಮ ನಾಯಕನನ್ನು ಎನ್‌ಸಿಸಿ ಸೇರಲು ಪ್ರೇರೇಪಿಸುತ್ತದೆಯಂತೆ!

ಚಿತ್ರದಲ್ಲಿನ ಬಹುತೇಕ ಘಟನೆಗಳು ಯಶ್‌ರಾಜ್ ಬದುಕಿನಲ್ಲಿ ನಡೆದಿವೆ. ತಾವು ಎನ್‌ಸಿಸಿಯಲ್ಲಿದ್ದಾಗಿನ ಹಲವು ಪ್ರಸಂಗಗಳನ್ನು ಯಶ್ ಹೇಳಿಕೊಂಡರು. ಅದನ್ನು ಆಧರಿಸಿ ಚಿತ್ರಕಥೆ ಸಿದ್ಧವಾಗಿದೆ ಎನ್ನುವುದು ಸಂಭಾಷಣೆಕಾರ ಮಳವಳ್ಳಿ ಸಾಯಿಕೃಷ್ಣ ವಿವರಣೆ.

ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಲಿದ್ದಾರೆ. ಎಂ.ಸತೀಶ್ ಛಾಯಾಗ್ರಹಣ ಇರಲಿದೆ. ಎರಡು ತಮಿಳು ಚಿತ್ರಗಳಲ್ಲಿ ನಟಿಸಿರುವ ನಾಯಕಿ ಸಾನಿಯಾಗೆ ಇದು ಮೊದಲ ಕನ್ನಡ ಚಿತ್ರ. ಜೈಜಗದೀಶ್, ಪವಿತ್ರಾ ಲೋಕೇಶ್, ವಿಜಯಕಾಶಿ, ಸಂಗೀತಾ, ಸಾಧು ಕೋಕಿಲಾ, ಗಿರಿ, ವಿಶ್ವಾಸ್ ಮತ್ತಿತರರು ತಾರಾಗಣದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಯಶ್ರಾಜ್, ಹಾಯ್, ಸಾನಿಯಾ, ಜಿಎನ್ ರುದ್ರೇಶ್, ಕನ್ನಡ ಸಿನಿಮಾ