ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೋಮಲ್ ಕಚಗುಳಿಯ 'ವಾರೆವ್ಹಾ' ಹಾಡುಗಳು ಬಂದಿವೆ... (Vareva | Komal | Bhavana Rao | Vijayalakshmi singh)
ಸುದ್ದಿ/ಗಾಸಿಪ್
Bookmark and Share Feedback Print
 
ಕೆಎಸ್‌ಸಿಎ ಸಭಾಂಗಣದಲ್ಲಿ ನಿತ್ಯದ ಚಟುವಟಿಕೆ ಜತೆ ಅದೊಂದು ವಿಭಿನ್ನ ವಾತಾವರಣ ಸೃಷ್ಟಿಯಾಗಿತ್ತು. ಜನ ಮರುಳೋ ಜಾತ್ರೆ ಮರುಳೊ ಅನ್ನುವ ರೀತಿ ಜನ ಸೇರಿದ್ದರು. ಇದಕ್ಕೆ ಕಾರಣ 'ವಾರೆವ್ಹಾ'.

ಹೌದು ಈ ಚಿತ್ರದ ಧ್ವನಿ ಸುರುಳಿ ಅಲ್ಲಿ ಲೋಕಾರ್ಪಣೆಗೊಂಡಿತು. ಬಿಡುಗಡೆ ಭಾಗ್ಯವನ್ನು ನಿರೀಕ್ಷಿಸುತ್ತಿರುವ ಈ ಚಿತ್ರ ಈ ಸಂದರ್ಭದಲ್ಲೇ ಧ್ವನಿ ಸುರುಳಿಯನ್ನೂ ತರುವ ಮೂಲಕ ಇನ್ನೊಂದು ವಿಶೇಷ ಮೆರೆಯಿತು.

ಧ್ವನಿಸುರುಳಿ ಬಿಡುಗಡೆ ಮಾಡಿದವರು ಜಗ್ಗೇಶ್. ತಮ್ಮ ಕೋಮಲ್ ಬೆಳವಣಿಗೆ ಬಗ್ಗೆ ಇದ್ದ ಮೆಚ್ಚುಗೆಯನ್ನು ಹತ್ತಿಕ್ಕಿಕೊಳ್ಳುವುದು ಅವರಿಂದ ಸಾಧ್ಯವಾಗಲಿಲ್ಲ. ತುಂಬು ಹೃದಯದಿಂದ ಸಹೋದರನನ್ನು ಹರಸಿದರು. ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕೋಮಲ್, ಭಾವನಾ ರಾವ್ ಪ್ರಮುಖ ಪಾತ್ರದಲ್ಲಿರುವ ಚಿತ್ರವನ್ನು ಜೈಜಗದೀಶ್ ನಿರ್ಮಿಸಿದ್ದಾರೆ. ಕಥೆ-ಚಿತ್ರಕತೆ-ನಿರ್ದೇಶನ ವಿಜಯಲಕ್ಷ್ಮಿ ಸಿಂಗ್ ಅವರದು. ಆರು ಹಾಡುಗಳಿವೆ. ಸಂಗೀತ ನೀಡಿದ್ದಾರೆ ಅವಿನಾಶ್-ವಿಶ್ವಜಿತ್.

ಸುರ್ ಅತ್ತಾವರ, ವಿ. ಮನೋಹರ್, ಕವಿರಾಜ್, ಡಾ.ವಿ. ನಾಗೇಂದ್ರಪ್ರಸಾದ್ ಗೀತೆ ರಚಿಸಿದ್ದಾರೆ. ಆನಂದ್ ಆಡಿಯೋ ಧ್ವನಿಸುರುಳಿ ಹೊರತಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಾರೆವ್ಹಾ, ಕೋಮಲ್, ಭಾವನಾ ರಾವ್, ವಿಜಯಲಕ್ಷ್ಮಿ ಸಿಂಗ್