ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಬೆಂಗಳೂರಿನಲ್ಲಿ 'ಶಿಕಾರಿ' ಮಾಡುತ್ತಿರುವ ಮಲಯಾಳಿ ಮಮ್ಮುಟ್ಟಿ (Mammootty | Shikari | Abhayasimha | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
PR
ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮಮ್ಮುಟ್ಟಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ 'ಶಿಕಾರಿ' ಮಾಡಿದ್ದಾರೆ. ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಿಸುತ್ತಿರುವ ದ್ವಿಭಾಷಾ ಚಿತ್ರ 'ಶಿಕಾರಿ' ಚಿತ್ರೀಕರಣ ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ನಡೆದಿದೆ.

ಬೆಂಗಳೂರು ಅರಮನೆಯ ಸಪೋಟಾ ಗಾರ್ಡನ್‌ನಲ್ಲಿ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರು, ತಮ್ಮ ಸರಳತೆಯ ಮೂಲಕ ಗಮನ ಸೆಳೆದರು. ಮಮ್ಮುಟ್ಟಿ ಸಾಹಸ ಸನ್ನಿವೇಶಗಳು ಎಲ್ಲರನ್ನೂ ಆಕರ್ಷಿಸಿದವು.

'ಶಿಕಾರಿ' ಚಿತ್ರದಲ್ಲಿ ಮಮ್ಮುಟ್ಟಿ ಅವರದು ಸಾಫ್ಟ್‌ವೇರ್ ಟೆಕ್ಕಿ ಪಾತ್ರವಂತೆ. ಕಾದಂಬರಿ ಓದುವುದೆಂದರೆ ಈ ಟೆಕ್ಕಿಗೆ ಎಲ್ಲಿಲ್ಲದ ಹುಚ್ಚು. ಬಳಿಕ ಕಾದಂಬರಿಯಲ್ಲಿನ ಒಂದು ಪಾತ್ರವನ್ನು ಕಲ್ಪಿಸಿಕೊಂಡು ತಾನೇ ಆ ಪಾತ್ರವಾಗುವುದು ಈ ಟೆಕ್ಕಿಯ ವಿಚಿತ್ರ ಹವ್ಯಾಸ. ಇಂತಹ ಕಥೆಯನ್ನು ಚಿತ್ರ ಹೊಂದಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ 'ಶಿಕಾರಿ' 47 ದಿನಗಳ ಚಿತ್ರೀಕರಣ ಪೂರೈಸಿದೆ. ಕ್ಲೈಮ್ಯಾಕ್ಸ್ ಡಿಸೆಂಬರ್ 10ರಂದು ನಡೆಯಲಿದೆ. 2011ರ ವೇಳೆಗೆ ಚಿತ್ರ ತೆರೆ ಕಾಣಲಿದೆ ಎನ್ನುವುದು ನಿರ್ದೇಶಕ ಅಭಯಸಿಂಹ ಮಾತು.

ಚಿತ್ರ ನಿರ್ಮಿಸುತ್ತಿದ್ದಾರೆ ಕೆ. ಮಂಜು. ಮಮ್ಮುಟ್ಟಿ, ಪೂನಂ ಬಾಜ್ವ, ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿಕಾರಿ, ಮಮ್ಮುಟ್ಟಿ, ಅಭಯಸಿಂಹ, ಕನ್ನಡ ಸಿನಿಮಾ, ಕೆ ಮಂಜು