ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಧನ್ ದನಾ' ಮೇಲೆ ಪಾರ್ವತಿ ಸಿಟ್ಟು | ವಿಕ್ಟರಿ ವಾಸು ಔಟ್ (Dhan Dhana Dhan | Parvarthi Menon | Prem | Victory Vasu)
ಸುದ್ದಿ/ಗಾಸಿಪ್
Bookmark and Share Feedback Print
 
PR
ನಾನು ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ ಹೊರತಾಗಿಯೂ ನನ್ನ ಹೆಸರು ಮತ್ತು ಚಿತ್ರಗಳನ್ನು ಬಳಸಿರುವ 'ಧನ್ ದನಾ ಧನ್' ಕನ್ನಡ ಚಿತ್ರತಂಡದ ವಿರುದ್ಧ ಮಲಯಾಳಂ ನಟಿ ಪಾರ್ವತಿ ಮೆನನ್ ಆಕ್ರೋಶ ವ್ಯಕ್ತಪಡಿಸಿದ ಬೆನ್ನಿಗೆ ಚಿತ್ರದ ನಿರ್ದೇಶಕ ವಿಕ್ಟರಿ ವಾಸು ಅವರಿಗೆ ನಿರ್ಮಾಪಕರು ಕೊಕ್ ಕೊಟ್ಟಿರುವ ಸುದ್ದಿಯಿದು.

ಈ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದರೂ, ಚಿತ್ರತಂಡವು ಪ್ರಚಾರಕ್ಕಾಗಿ ನನ್ನ ಹೆಸರು ಮತ್ತು ಫೋಟೋವನ್ನು ಬಳಸಿಕೊಂಡಿದೆ. ಆ ನಿರ್ಮಾಪಕರ ವರ್ತನೆ ನನಗೆ ಅಸಹ್ಯ ತಂದಿದೆ ಎಂದು ತಿರುವನಂತಪುರದಿಂದ ಮೆನನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರೇಮ್ ನಾಯಕರಾಗಿರುವ 'ಧನ್ ದನಾ ಧನ್' ಚಿತ್ರಕ್ಕೆ ನವೆಂಬರ್ 18ರಂದು ಬೆಂಗಳೂರಿನ ಆರ್.ಟಿ. ನಗರದಲ್ಲಿ ಮುಹೂರ್ತ ಏರ್ಪಡಿಸಲಾಗಿತ್ತು. ವಿಕ್ಟರಿ ವಾಸು ಇದರ ನಿರ್ದೇಶಕರು. ನಿರ್ಮಾಪಕ ನರ್ಗೀಸ್ ಬಾಬು. ಮಿಲನ, ಮಳೆ ಬರಲಿ ಮಂಜೂ ಇರಲಿ ಮತ್ತು ಪೃಥ್ವಿ ಚಿತ್ರಗಳಲ್ಲಿ ನಟಿಸಿರುವ ಪಾರ್ವತಿ ಮೆನನ್ ಇದರಲ್ಲಿ ನಾಯಕಿ ಎಂದು ನಿರ್ಮಾಪಕರು ಘೋಷಿಸಿದ್ದರು.

ನನ್ನನ್ನು ಸಂಪರ್ಕಿಸಿದ ಮೊದಲ ದಿನದಿಂದಲೇ 'ನಾನು ಈ ಚಿತ್ರದಲ್ಲಿ ನಟಿಸುವ ಆಸಕ್ತಿ ಹೊಂದಿಲ್ಲ' ಎಂದು ಹೇಳಿದ್ದೆ. ಆದರೂ ನಿರ್ಮಾಪಕರು, 'ನೀವು ಓದಿರುವುದು ಕಥೆಯ ಒಂದು ಸಾಲು ಮಾತ್ರ. ತಮ್ಮ ನಿರ್ಧಾರವನ್ನು ಮರು ಪರಿಶೀಲನೆ ಮಾಡಿ' ಎಂದಿದ್ದರು. ನನಗೆ ಕಥೆ ತಿಳಿಯುವ ಮೊದಲೇ ಚಿತ್ರದ ಪ್ರಚಾರವನ್ನು ಆರಂಭಿಸಲಾಗಿತ್ತು. ಅದರಲ್ಲಿ ನನ್ನ ಹೆಸರು ಮತ್ತು ಚಿತ್ರಗಳನ್ನು ಬಳಸಲಾಗಿತ್ತು. ಇದು ನ್ಯಾಯಯುತವಾದುದಲ್ಲ. ನನ್ನ ಹೆಸರು ಮತ್ತು ಗೌರವಕ್ಕೆ ಮಸಿ ಬಳಿಯುವ ಯತ್ನ. ಖಂಡಿತಾ ಈ ಚಿತ್ರದಲ್ಲಿ ನಾನು ನಟಿಸುವುದಿಲ್ಲ ಎಂದು ಮೆನನ್ ಸ್ಪಷ್ಟಪಡಿಸಿದ್ದಾರೆ.

ಹಾಸ್ಯಪ್ರಧಾನ ಚಿತ್ರವಾಗಿರುವ ಧನ್ ದನಾ ಧನ್‌ಗೆ ಸಂಭಾಷಣೆ ಮತ್ತು ಸಾಹಿತ್ಯ ಒದಗಿಸಿರುವುದು ರಾಮ್ ನಾರಾಯಣ್. ಕಥೆ ಬರೆದಿರುವುದು ಸ್ವತಃ ನರ್ಗೀಸ್ ಬಾಬು. ಆದರೆ ಮೂಲಗಳ ಪ್ರಕಾರ ಇದೊಂದು ರಿಮೇಕ್ ಚಿತ್ರ.

ಆರಂಭದಲ್ಲಿ ಈ ಚಿತ್ರಕ್ಕೆ 'ನಾವು ಯಾರಿಗೂ ಕಮ್ಮಿ ಇಲ್ಲ' ಎಂದು ಹೆಸರಿಡಲಾಗಿತ್ತು. ಆದರೆ ನಂತರ ಅದನ್ನು ಬದಲಾಯಿಸಲಾಯಿತು ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ಅನಂತ್‌ನಾಗ್, ರಂಗಾಯಣ ರಘು, ಕಿಶೋರ್, ಶರಣ್ ಮುಂತಾದವರು ನಟಿಸುತ್ತಿದ್ದಾರೆ. ಡಿಸೆಂಬರ್ ಮೊದಲ ವಾರದ ಹೊತ್ತಿಗೆ ಚಿತ್ರೀಕರಣ ಆರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿತ್ತು.

ನಿರ್ದೇಶಕ ವಾಸುಗೆ ಕೊಕ್...
ಪಾರ್ವತಿ ಮೆನನ್ ಚಿತ್ರತಂಡದ ವಿರುದ್ಧ ಕಿಡಿಕಾರಿದ ನಂತರ ನಡೆದಿರುವ ಬೆಳವಣಿಗೆಯಿದು. ಚಿತ್ರದ ನಿರ್ದೇಶಕ ವಿಕ್ಟರಿ ವಾಸು ಅವರನ್ನು ಕಿತ್ತು ಹಾಕಿ, ಅವರ ಸ್ಥಾನಕ್ಕೆ 'ಬುದ್ಧಿವಂತ' ನಿರ್ದೇಶಕ ರಾಮನಾಥ್ ಋಗ್ವೇದಿಯವರನ್ನು ತರಲಾಗಿದೆ.

ಆದರೆ ಮೂಲಗಳ ಪ್ರಕಾರ ಪಾರ್ವತಿ ಮೆನನ್ ಪ್ರಕರಣ ವಾಸು ನಿರ್ಗಮನಕ್ಕೆ ಕಾರಣವಲ್ಲ. ಸಂಭಾವಣೆ ಬೇಡಿಕೆಯೇ ಕಾರಣ. ಬೇರೆ ಯಾವುದೋ ಚಿತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು 'ಧನ್ ದನಾ ಧನ್' ಸಿನಿಮಾದ ಬಗ್ಗೆ ಆಸಕ್ತಿಯನ್ನೇ ತೋರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಧನ್ ಧನಾ ಧನ್, ಪಾರ್ವತಿ ಮೆನನ್, ಪ್ರೇಮ್, ವಿಕ್ಟರಿ ವಾಸು, ಅನಂತ್ನಾಗ್