ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸೂರಿ ತುಂಬಾ ಚೆನ್ನಾಗಿದ್ದ ಲೈಫಿನಲಿ- ಇಲ್ಲಿದೆ ಭಟ್ಟರ ಸಾಂಗು (Soori | Yogaraj Bhat | Pallavi | Punit Rajkumar)
ಸುದ್ದಿ/ಗಾಸಿಪ್
Bookmark and Share Feedback Print
 
PR
ಮನದನ್ನೆ ಪಲ್ಲವಿಯನ್ನು ಮೊನ್ನೆ ಬುಧವಾರವಷ್ಟೇ (ನವೆಂಬರ್ 8) ಕೊಲ್ಲೂರಿನಲ್ಲಿ ಸೂರಿ ವರಿಸಿರುವುದು ಗೊತ್ತೇ ಇದೆ. ಈ ಸಂದರ್ಭದಲ್ಲಿ ತನ್ನ ಆಪ್ತಮಿತ್ರನಿಗೆ ಯೋಗರಾಜ್ ಭಟ್ ಭಾರೀ ಕೀಟಲೆ ಮಾಡಿದ್ದಾರಂತೆ. ಯಾವ ರೀತಿಯಲ್ಲೆಲ್ಲ ಗೋಳು ಹೊಯ್ದುಕೊಂಡಿದ್ದಾರೋ ಗೊತ್ತಿಲ್ಲ, ಆದ್ರೆ ಒಂದು ಹಾಡಿನ ಮೂಲಕ ಎದ್ದು ಬಿದ್ದು ನಗುವಂತೆ ಮಾಡಿದ್ದಾರೆ.

ಅದು ಸೂರಿ ನಿರ್ದೇಶನದ 'ಜಾಕಿ' ಚಿತ್ರದ ಹಾಡು. 'ಶಿವ ಅಂತ ಹೋಗುತ್ತಿದ್ದೆ ರೋಡಿನಲಿ... ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ' ಎಂಬ ಭಟ್ರೇ ಬರೆದಿರುವ ಹಾಡನ್ನು ರೀಮಿಕ್ಸ್ ಮಾಡಿ, ಹಾಡಿಸಿ ಸೂರಿಗೆ ಗಿಫ್ಟ್ ಕೊಟ್ಟಿದ್ದಾರೆ.

ಜಾಕಿ ಚಿತ್ರದ ಮೂಲ ಹಾಡು ಭಾರೀ ಹಿಟ್ ಆಗಿತ್ತು. ಅದೇ ರಾಗಕ್ಕೆ ಇದೀಗ ರೇಗಿಸುವ ಕೀಟಲೆ ಸಾಹಿತ್ಯವನ್ನು ಭಟ್ರು ಬರೆದಿದ್ದಾರೆ. ಟಿವಿಗಳಲ್ಲಿ ಈಗಾಗಲೇ ಪ್ರಸಾರವೂ ಆಗಿದೆ.

ಸಾಮಾನ್ಯವಾಗಿ ಗಂಭೀರವಾಗಿರುವ, ಮನಸ್ಸು ಬಿಚ್ಚಿ ಮಾತನಾಡಲು ಚೌಕಾಶಿ ಮಾಡುವ ಸೂರಿ ಈ ಹಾಡನ್ನು ಕೇಳಿಯಾದರೂ ಬಾಯ್ತುಂಬ ನಕ್ಕಿರಬಹುದು. ಇರಲಿ ಬಿಡಿ, ಆ ಹಾಡಿನ ಸಾಹಿತ್ಯವನ್ನು (ಪೂರ್ಣ ಸಾಹಿತ್ಯ ಲಭ್ಯವಾಗಿಲ್ಲ) ನೀವೂ ಓದಿ, ಮಜಾ ಮಾಡಿ.

ಚಿತ್ರ: ಜಾಕಿ
ಮೂಲ ಹಾಡು: ಶಿವ ಅಂತ ಹೋಗುತ್ತಿದ್ದೆ ರೋಡಿನಲಿ

ಸೂರಿ ತುಂಬಾ ಚೆನ್ನಾಗಿದ್ದ ಲೈಫಿನಲಿ
ಆವಾಗಾವಾಗ್ ಸಿಗ್ತಾ ಇದ್ದಾ ಬಾರಿನಲಿ
ಇನ್ನು ಮುಂದೆ ಸಿಗೋದಿಲ್ಲಾ ನೈಟಿನಲಿ
ಆದಾ ಮದುವೆ ಗ್ಯಾಪಿನಲಿ..

ಕಂಡೂ ಕಂಡು ಸೂರಿ ಬಿದ್ದಾ ಹಳ್ಳದಲಿ
ಸಿಕ್ಕಾಪಟ್ಟೆ ನಗುತಾ ಅವ್ನೆ ಮೀಸೆಯಲಿ
ತೇಲಾಡೋದಕ್ ದಮ್ಮಿದ್ದೋರು ಬಂದುಬಿಡಿ
ಎಣ್ಣೇ ಪಾರ್ಟೀ ಬೀಚಿನಲಿ..

ಒಳ್ಳೆ ಕಡೆ ಹೆಣ್ಣು ತಂದ್ವಿ, ಕೊಲ್ಲೂರಿಗೆ ಎಲ್ರು ಬಂದ್ವಿ
ಒಳ್ಳೆ ಕಡೆ ಹೆಣ್ಣು ತಂದ್ವಿ, ಕೊಲ್ಲೂರಿಗೆ ಎಲ್ರು ಬಂದ್ವಿ
ಅಯ್ಯೋ ಪಾಪಾ ಸೂರಿ ತಾಳಿ ಕಟ್ತಾವ್ನೇ, ಪೂ-
-ಜಾರಿಗೆ ಅರ್ಜಂಟ್ ಮಾಡ್ತಾವ್ನೆ..

ನೆನ್ನೆವರ್ಗೂ ಹಂಗೋ ಇದ್ದ
ನೆನ್ನೆವರ್ಗೂ ಹೆಂಗೋ ಇದ್ದ, ಹೆಂಗಿದ್ದೋನು ಹೆಂಗಾಗೋದ
ಹೊಸ ಪ್ಯಾಂಟು ಶರ್ಟನು ಹಾಕವ್ನೆ ಸೂರಿ
ಏಕ್ ದಂ ಡೀಸೆಂಟಾಗವ್ನೇ..

ಇನ್ನು ಬೇಗ ದಿನಾ ಸ್ನಾನ ಮಾಡುವನು
ಮಧ್ಯಾಹ್ನಾನೇ ಮನೆ ಕಡೆ ಹೋಗುವನು
ಡೈರೆಕ್ಸನ್ನೇ ಚೇಂಜು ಗುರೂ
ಚೇಂಜು ಗುರೂ ಚೇಂಜು ಗುರೂ..

ಸೂರಿ ತುಂಬಾ ಚೆನ್ನಾಗಿದ್ದಾ ಲೈಫಿನಲಿ
ಆವಾಗಾವಾಗ್ ಸಿಗ್ತಾ ಇದ್ದಾ ಬಾರಿನಲಿ
ಇನ್ನು ಮುಂದೆ ಸಿಗೋದಿಲ್ಲಾ ನೈಟಿನಲಿ
ಆದಾ ಮದುವೆ ಗ್ಯಾಪಿನಲಿ..

ಸೂರಿಗಿನ್ನು ಪಲ್ಲವಿಯೇ ಹೀರೊಯಿನು
ದೇವರೇ ಕಾಪಾಡಪ್ಪಾ ಸೂರಿಯನು
ಸೂರಿ ಪ್ರೊಡಕ್ಷನ್ ಸ್ಟಾರ್ಟು ಗುರೂ..

ಸ್ಟಾರ್ಟು ಗುರೂ.. ಸ್ಟಾರ್ಟು ಗುರೂ..ಸ್ಟಾರ್ಟು ಗುರೂ..ಸ್ಟಾರ್ಟು ಗುರೂ..
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂರಿ, ಯೋಗರಾಜ್ ಭಟ್, ಪಲ್ಲವಿ, ದುನಿಯಾ, ಪುನೀತ್ ರಾಜ್ಕುಮಾರ್, ಸೂರಿ ತುಂಬಾ ಚೆನ್ನಾಗಿದ್ದ ಲೈಫಿನಲಿ