ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಮೇಲುಕೋಟೆಯಲ್ಲಿ ಪುನೀತ್ 'ಹುಡುಗ್ರು' ಬಿಗ್ ಫೈಟ್ (Hudugru | Puneet Raj Kumar | Yogish | Sreenagara Kitty)
ಸುದ್ದಿ/ಗಾಸಿಪ್
Bookmark and Share Feedback Print
 
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಹುಡುಗ್ರು' ಚಿತ್ರದ ಆಕ್ಷನ್ ದೃಶ್ಯಗಳನ್ನು ಮೇಲುಕೋಟೆಯಲ್ಲಿ ಚಿತ್ರೀಕರಿಸಲಾಗುತ್ತಿದೆ. ಪುನೀತ್ ಅವರೊಂದಿಗೆ ಲೂಸ್‌ಮಾದ ಯೋಗೀಶ್, ಶ್ರೀನಗರ ಕಿಟ್ಟಿ ಕೂಡ ಪಾಲ್ಗೊಂಡಿದ್ದರು.

ನಿರ್ದೇಶಕ ಮಾದೇಶ್ ಸಾರಥ್ಯದಲ್ಲಿ ಕಳೆದೊಂದು ವಾರದಿಂದ ಚಿತ್ರೀಕರಣ ಮೇಲುಕೋಟೆ, ಮೈಸೂರು ಮತ್ತು ಮಂಡ್ಯ ಸಮೀಪದ ಗ್ರಾಮಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ.

ಶ್ರೀ ಚಕ್ರೇಶ್ವರಿ ಕಂಬೈನ್ಸ್ ಲಾಂಛನದಡಿಯಲ್ಲಿ ಡಾ. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಈ ಚಿತ್ರ ತಮಿಳಿನ 'ನಾಡೋಡಿಗಳ್' ರಿಮೇಕ್.

ಅದ್ದೂರಿ ತಾರಾಗಣವಿರುವ ಈ ಚಿತ್ರಕ್ಕೆ 'ಎದ್ದೇಳು ಮಂಜುನಾಥ' ಚಿತ್ರದ ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಛಾಯಾಗ್ರಹಣ ಸತ್ಯ ಹೆಗ್ಡೆ, ಹರಿಕೃಷ್ಣ ಅವರ ಸಂಗೀತವಿದೆ.

ಕಥೆ, ಚಿತ್ರಕತೆ ಮತ್ತು ನಿರ್ದೇಶನ ಮಾದೇಶ್ ಅವರದ್ದು. ಪುನೀತ್‌ಗೆ ಮೊದಲ ಬಾರಿಗೆ ರಾಧಿಕಾ ಪಂಡಿತ್ ಜೋಡಿಯಾಗಿದ್ದಾರೆ. ಉಳಿದಂತೆ ವಿಶಾಲ ಹೆಗ್ಡೆ, ನಾಡೋಡಿಗಳ್ ಖ್ಯಾತಿ ಅಭಿನಯ, ಶ್ರೀನಿವಾಸ ಪ್ರಭು, ರಮ್ಯಾ ಬಾರ್ನೆ, ಶಾಂತಮ್ಮ, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರೀಕಾಂತ್ ಹೊನ್ನಾವಳ್ಳಿ, ಶ್ರೀನಿವಾಸಪ್ರಭು, ವನಿತಾವಾಸು, ಆಶಾರಾಣಿ, ಕೃಷ್ಣ ಅಡಿಗಾ ಮುಂತಾದವರಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹುಡುಗ್ರು, ಪುನೀತ್ ರಾಜ್ಕುಮಾರ್, ಯೋಗೀಶ್, ಶ್ರೀನಗರ ಕಿಟ್ಟಿ