ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಸಾಫ್ಟ್‌ವೇರ್ ಹುಡುಗ-ಹುಡುಗೀರ ವಿನೂತನ 'ಯತ್ನ' (Girish Bhat | Yatna | Samarth Naik | Kannada film)
ಸುದ್ದಿ/ಗಾಸಿಪ್
Bookmark and Share Feedback Print
 
ಸಾಫ್ಟ್‌ವೇರ್ ಮಂದಿಗೂ ಚಿತ್ರರಂಗಕ್ಕೂ ಇತ್ತೀಚೆಗೆ ಎಲ್ಲಿಲ್ಲದ ನಂಟು ಬೆಳೆಯುತ್ತಿದೆ. ಸಾಫ್ಟ್‌ವೇರಿನಂತೆ ಇಲ್ಲೂ ಏನಾದರೂ ಶೋಧಿಸಿ ನೋಡೋಣವೇ ಎಂದು ಗಾಂಧಿನಗರದತ್ತ ಪಾದ ಬೆಳೆಸಿದಂತೆ ಕಂಡುಬರುತ್ತಿದೆ. ಅದೇಕೋ ಸಿಕ್ಕಾಪಟ್ಟೇ ಕಲರ್ ದುನಿಯಾ ಮೇಲೆ ಇನ್ನಿಲ್ಲದ ವ್ಯಾಮೋಹ ಬೆಳೆಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಒಂದಿಷ್ಟು ಸಾಫ್ಟ್‌ವೇರ್ ಮಂದಿ ಗಾಂಧಿನಗರ ಪ್ರವೇಶ ಪಡೆದು ತಮ್ಮದೊಂದು ಛಾಪು ಮೂಡಿಸಲು ಸಜ್ಜಾಗಿರುವ ಬೆನ್ನಲ್ಲೇ, ಮತ್ತೊಂದು ಸಾಫ್ಟ್‌ವೇರ್ ಹುಡುಗರ ಗುಂಪು ಸದ್ದಿಲ್ಲದೆಯೇ ಹೀಗೋಂದು ಹೊಸ 'ಯತ್ನ' ಶುರು ಮಾಡಿದೆ. ಅಂದರೆ, 'ಯತ್ನ' ಎಂಬ ಚಿತ್ರ ಮುಗಿಸಿ, ತೆರೆಗೆ ತರುವ ಹುನ್ನಾರದಲ್ಲಿದೆ.

ಹುನ್ನಾರವಲ್ಲ, ಇದೊಂದು ಉತ್ಸಾಹ ಎನ್ನುತ್ತದೆ 'ಯತ್ನ' ಸಾಫ್ಟ್‌ವೇರ್ ಟೀಮ್. ಇದು ಸಂಪೂರ್ಣ ಹೊಸಬರ ಚಿತ್ರ. ಅದರಲ್ಲೂ ಸಾಫ್ಟ್‌ವೇರ್ಹುಡುಗನೊಬ್ಬನ ಹಲವು ವರ್ಷಗಳ ಕನಸಂತೆ. ಎಂಜಿನಿಯರ್ ಸಮರ್ಥ್ ನಾಯ್ಕ್ ಈ ಚಿತ್ರದ ಮೂಲಕ ತಮ್ಮ ಬಹುವರ್ಷಗಳ ಕನಸು ನನಸು ಮಾಡಿಕೊಂಡಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದ ಜವಾಬ್ದಾರಿ ಜತೆಗೆ ಛಾಯಾಗ್ರಾಹಕರಾಗಿಯೂ ಕೆಲಸ ಮಾಡುವ ಮೂಲಕ ನೂತನ 'ಯತ್ನ' ಮಾಡಿದ್ದಾರೆ. ಇಷ್ಟೇ ಅಲ್ಲ ಚಿತ್ರದ ನಿರ್ಮಾಣದ ಸಂಪೂರ್ಣ ಹೊಣೆಗಾರಿಕೆಯೂ ಇವರದ್ದೇ.

'ಯತ್ನ' ಸಾಫ್ಟ್‌ವೇರ್ ಜನರ ಜೀವನ ಎಂದ ಮೇಲೆ ಸಹಜವಾಗಿಯೇ ಆ ಮಂದಿಯ ತುಡಿತ, ಅವರ ಬದುಕಿನ ಏರಿಳಿತಗಳು ಹಾಗೂ ನೋವು-ನಲಿವುಗಳ ಸುತ್ತ ಹೆಣೆದಿರುವ ಚಿತ್ರ. ಇತ್ತೀಚೆಗೆ ಉಂಟಾದ ವಿಶ್ವ ಆರ್ಥಿಕ ಹಿಂಜರಿತ, ಕೆಲಸ ಒತ್ತಡ ಎಲ್ಲವೂ ಇದರಲ್ಲಿದೆ ಎನ್ನುತ್ತಾರೆ ಆಲ್ ಇನ್ ಒನ್ ಸಮರ್ಥ್.

ಚಿತ್ರದ ನಾಯಕ ಗಿರೀಶ್ ಭಟ್, ಇವರು 'ರಂಗಪ್ಪ ಹೋಗ್ಬಿಟ್ನಾ' ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಮಾಡೆಲಿಂಗ್ ಲೋಕದಿಂದ ಬಂದವರು - ಲಷ್ಮಾ. ಉಳಿದಂತೆ ಹಲವಾರು ರಂಗಭೂಮಿ ಕಲಾವಿದರು 'ಯತ್ನ'ದಲ್ಲಿದ್ದಾರೆ.

ಬೆಂಗಳೂರು, ಗೋಕರ್ಣ, ಅಂಕೋಲ ಸುತ್ತಮುತ್ತ 20 ದಿನಗಳ ಚಿತ್ರೀಕರಣ ಈಗಾಗಲೇ ಮುಗಿದಿದೆ. ಕೇವಲ 15 ಲಕ್ಷ ರೂ.ಗಳಲ್ಲಿ ಎರಡು ಗಂಟೆ ಅವಧಿಯ ಚಿತ್ರ ಮಾಡಿದ್ದಾರೆ.

ವಿನಿತ್‌ರಾಜ್ ಮೆನನ್ ಸಂಗೀತದಲ್ಲಿ ಮೂರು ಹಾಡುಗಳಿವೆ. ಇಡೀ ಚಿತ್ರವನ್ನು ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು ಈ ಚಿತ್ರದ ವಿಶೇಷ. ಸಮರ್ಥ್ ಎಲ್ಲ ನಿರ್ಮಾಪಕರಂತೆ ಆದಷ್ಟು ಜಾಸ್ತಿ ಸಿನಿಮಾ ಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಎನ್ನುವ ಹಂಬಲ ಇಲ್ಲ. ಕೇವಲ ಎರಡು ಥಿಯೇಟರ್ ಸಾಕು ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಾಫ್ಟ್ವೇರ್ ಹುಡುಗರು, ಯತ್ನ, ಗಿರೀಶ್ ಭಟ್, ಸಮರ್ಥ್ ನಾಯ್ಕ್, ಕನ್ನಡ ಸಿನಿಮಾ