ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಆಪರೇಷನ್ ಗೋಲ್ಡನ್ ಗ್ಯಾಂಗ್; ಇದು ಶಿವಣ್ಣನ ಬಾಂಡ್ ಫಿಲ್ಮ್! (Operation Golden Gang | Shivaraj Kumar | Jogayya | Lakshmi)
ಸುದ್ದಿ/ಗಾಸಿಪ್
Bookmark and Share Feedback Print
 
PTI
ಶಿವರಾಜ್ ಕುಮಾರ್ ಬಹುನಿರೀಕ್ಷಿತ 'ಮೈಲಾಪುರದ ಮೈಲಾರಿ' ಬಿಡುಗಡೆಗೆ ಸಿದ್ಧವಾಗಿರುವ ಹೊತ್ತಿನಲ್ಲೇ ತನ್ನ ಬಾಂಡ್ ಚಿತ್ರಕ್ಕೂ ಹ್ಯಾಟ್ರಿಕ್ ಹೀರೋ ಓಕೆ ಎಂದಿದ್ದಾರೆ. 102ನೇ ಚಿತ್ರವಾಗಲಿರುವ 'ಆಪರೇಷನ್ ಗೋಲ್ಡನ್ ಗ್ಯಾಂಗ್' ಏಪ್ರಿಲ್ 24ರಂದು ಅಧಿಕೃತವಾಗಿ ಚಾಲನೆ ಪಡೆದುಕೊಳ್ಳಲಿದೆ.

ಪ್ರಸಕ್ತ ಬಿಡುಗಡೆಯಾಗಲಿರುವ 'ಮೈಲಾರಿ' ಶಿವಣ್ಣನ 99ನೇ ಚಿತ್ರ. 100ನೇ ಚಿತ್ರ ಪ್ರೇಮ್ ನಿರ್ದೇಶನದ 'ಜೋಗಯ್ಯ'. 101ನೇ ಚಿತ್ರ ರಾಘವ್ ಲೋಕಿ ಅವರ 'ಲಕ್ಷ್ಮಿ'. ಈಗ 102ನೇ ಚಿತ್ರ 'ಆಪರೇಷನ್ ಗೋಲ್ಡನ್ ಗ್ಯಾಂಗ್'.

ಅಬ್ಬರದ ಪ್ರಚಾರದಲ್ಲಿರುವ 'ಜೋಗಯ್ಯ'ದ ಅಂತಿಮ ಹಂತದ ಚಿತ್ರೀಕರಣ ಈ ವಾರಾಂತ್ಯದಲ್ಲಿ ನಡೆಯಲಿದೆ. ಬಳಿಕ ಲೋಕಿ ಸಿನಿಮಾದ ಚಿತ್ರೀಕರಣ. ಬಹುಶಃ ಜನವರಿ ಹೊತ್ತಿಗೆ ಇದು ಆರಂಭವಾಗಬಹುದು.

ಲೋಕಿ ಚಿತ್ರಕ್ಕೆ ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಅದರ ಬಳಿಕ ಬಾಂಡ್ ಚಿತ್ರ. ಏಪ್ರಿಲ್ 24ರಂದು ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಇರುವುದರಿಂದ ಅಂದೇ 'ಆಪರೇಷನ್ ಗೋಲ್ಡನ್ ಗ್ಯಾಂಗ್'ಗೆ ಚಾಲನೆ ನೀಡಲಾಗುತ್ತದೆ. ಇದು ಭಾರತೀಯ ಚಿತ್ರರಂಗದ ಬಾಂಡ್ ಎಂದು ಖ್ಯಾತರಾಗಿರುವ ತಂದೆಗೆ ನಾನು ನೀಡುತ್ತಿರುವ ಕೊಡುಗೆ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ.

ಬಸವರೆಡ್ಡಿ ಮತ್ತು ಕೆ.ಎಂ. ವೀರೇಶ್ ಜೊತೆಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ತಾರಾಗಣ ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಜೋಗಯ್ಯ ಏ.24ರಂದು ಬಿಡುಗಡೆಯಾಗಲಿದೆ ಎನ್ನುವ ಸುದ್ದಿಯೂ ಇದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಿವರಾಜ್ ಕುಮಾರ್, ಆಪರೇಷನ್ ಗೋಲ್ಡನ್ ಗ್ಯಾಂಗ್, ಜೋಗಯ್ಯ, ಮೈಲಾರಿ, ಕನ್ನಡ ಚಿತ್ರ