ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಹಣ ಹಾಕಿದವರೇ ಕುಣಿದರು; ನಿರ್ಮಾಪಕರಂದ್ರೆ ಹಿಂಗಿರ್ಬೇಕಪ್ಪ! (Gun | Harish Raj | Murali | Mallika Kapoor)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಅರೆ...! ಇದೇನಿದು ನಿರ್ಮಾಪಕರೆಂದ್ರೆ ಹಿಂಗಿರ್ಬೇಕಪ್ಪ! ಎನ್ನುವ ಸಿನಿಮಾ ಏನಾದರೂ ಬರುತ್ತಿದೆಯೇ ಎಂದುಕೊಂಡರೆ ತಪ್ಪಾಗುತ್ತದೆ. ಇದು ಸಿನಿಮಾ ಅಲ್ಲ. 'ಗನ್' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದ ಗ್ರಾಂಡ್ ಫಂಕ್ಷನ್‌ನಲ್ಲಿ ಈ ಚಿತ್ರ ನಿರ್ಮಾಪಕ ಮುರಳಿ ಅವರು ಚಿತ್ರದ ಹಾಡಿಗೆ ತಮ್ಮ ಪತ್ನಿಯೊಡನೆ ಡ್ಯಾನ್ಸ್ ಸ್ಟೆಪ್ ಹಾಕಿದಾಗ ನೆರೆದಿದ್ದ ಚಿತ್ರತಂಡ ಬಾಯಿಂದ ಹೊರಟ ಮಾತು.

ನಿರ್ಮಾಪಕ ವೃತ್ತಿಯಲ್ಲಿ ಬಿಲ್ಡರ್. ಸಿನಿಮಾರಂಗ ಹೊಸದು. ಆದ್ದರಿಂದ ಯಾವುದಕ್ಕೂ ಹೆದರದೆ ಭರ್ಜರಿಯಾಗಿ ಪಾರ್ಟಿಯನ್ನೇ ಆಯೋಜಿಸಿದ್ದರು. 'ಗನ್' ಚಿತ್ರವನ್ನು ಹರೀಶ್ ರಾಜ್ ನಿರ್ದೇಶಿಸಿ, ನಟಿಸುತ್ತಿದ್ದಾರೆ. ಹರೀಶ್ ರಾಜ್‌ಗೆ ನಾಯಕನಾಗಿ ಇದು ಎರಡನೇ ಚಿತ್ರ. ಈಗಾಗಲೇ 'ಕಲಾಕಾರ್' ಚಿತ್ರದ ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿದವರು.

ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಯೋಗರಾಜ್ ಭಟ್ ಅವರು ಬರೆದಿರುವ ಹಾಡು 'ಎಣ್ಣೆ ಯಾರು ಕಂಡು ಹಿಡಿದೋರೂ, ಗೊತ್ತಿದ್ದೋರು ಹೇಳ್ರಪ್ಪಾ...' ಎಂಬ ಹಾಡು ಶುರುವಾದ ತಕ್ಷಣ ಎಲ್ಲೋ ಕುಳಿತಿದ್ದ ನಿರ್ಮಾಪಕರು ಫುಲ್ ಜೋಶ್‌ನಿಂದ ಓಡಿಬಂದು ಸ್ಟೇಜ್ ಮುಂದೆ ಸ್ಟೆಪ್ ಹಾಕೆಬಿಟ್ಟರು.

ಚಿತ್ರಕ್ಕೆ ಐಟಂ ಗರ್ಲ್ ರಚನಾ ಮೌರ್ಯ ಅವರನ್ನು ಕರೆತಂದು ಮಸ್ತ್ ಡ್ಯಾನ್ಸ್ ಸ್ಟೆಪ್ ಕೂಡ ಹಾಕಿಸಿದ್ದಾರಂತೆ. ಚಿತ್ರದಲ್ಲಿ ಚೇಸಿಂಗ್, ಆಕ್ಷನ್, ಕಾಮೆಡಿ ಹಾಗೂ ಲವ್ ಎಲ್ಲವೂ ಇದೆ. ಇದೊಂದು ಸಂಪೂರ್ಣ ಕಮರ್ಷಿಯಲ್ ಚಿತ್ರ ಎಂದಿದ್ದಾರೆ ನಿರ್ದೇಶಕ ಹರೀಶ್ ರಾಜ್.

ಚಿತ್ರದ ನಾಯಕಿ ಮಲ್ಲಿಕಾ ಕಪೂರ್. ಸಂಗೀತ ರಾಣಿ ರಾಫೆಲ್ ಅವರದ್ದು. ಉಳಿದ ಕಲಾವಿದರು ರಂಗಾಯಣ ರಘು, ಬುಲೆಟ್ ಪ್ರಕಾಶ್ ಮುಂತಾದವರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗನ್, ಹರೀಶ್ ರಾಜ್, ಮುರಳಿ, ಮಲ್ಲಿಕಾ ಕಪೂರ್