ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಣ್ಣಾವ್ರ ಕೊನೆಯ ಆಸೆ ಈಡೇರುವ ಕಾಲ ಸನ್ನಿಹಿತ! (Rajkumar | Srinivasa Murthy | Udupi | Anu Prabhakar)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡಿಗರ ನೆಚ್ಚಿನ ಅಣ್ಣಾವ್ರು, ವರನಟ ಡಾ. ರಾಜ್‌ಕುಮಾರ್ ಅವರ ಬಣ್ಣದ ಬದುಕಿನ ಕೊನೆ ಆಸೆ ಈಡೇರುವ ಕಾಲ ಸನ್ನಿಹಿತವಾಗಿದೆ. 'ಭಕ್ತ ಅಂಬರೀಷ' ಚಿತ್ರ ಮಾಡಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದ ರಾಜ್, 2000ನೇ ಇಸವಿಯಲ್ಲಿ ಚಿತ್ರದ ಮುಹೂರ್ತವನ್ನು ನೆರವೇರಿಸಿದ್ದರು.

ಆದರೆ, ಅವರ ಗ್ರಹಚಾರ ಸರಿಯಿಲ್ಲದೆ, ಕಾಡುಗಳ್ಳ ವೀರಪ್ಪನ್ ಅವರನ್ನು ಅಪಹರಿಸಿ, ಭಕ್ತ ಅಂಬರೀಷನಾಗುವ ಇಚ್ಛೆಗೆ ತಣ್ಣೀರೆರಚಿದ್ದ. ವಿಜಯಾರೆಡ್ಡಿ ಅವರ ನಿರ್ದೇಶನದ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡುವ ಯೋಚನೆ ಇತ್ತು.

ಅಲ್ಲದೇ ಇದೇ ಹೆಸರಿನಲ್ಲಿ ಉಡುಪಿಯ ಶ್ರೀಕೃಷ್ಣ ಮಠಕ್ಕೆ ನಾಟಕ ಮಾಡುವುದಾಗಿ ರಾಜ್ ಒಮ್ಮೆ ಸ್ವಾಮೀಜಿಗಳಿಗೆ ಹೇಳಿದ್ದರಂತೆ. ಆದರೆ, ಆರೋಗ್ಯ ಕೈಕೊಟ್ಟಿದ್ದರಿಂದ 'ಭಕ್ತ ಅಂಬರೀಷ'ನಾಗಲು ಸಾಧ್ಯವಾಗಲಿಲ್ಲವಂತೆ.

ಈಗ ಅಣ್ಣಾವ್ರ ಆಸೆಯನ್ನು ಅದೇ ಉಡುಪಿ ಮಠದಲ್ಲಿ ನಟ ಶ್ರೀನಿವಾಸಮೂರ್ತಿ ಮುಂದಾಳತ್ವದಲ್ಲಿ 'ಭಕ್ತ ಅಂಬರೀಷ' ನಾಟಕ ಮಾಡುತ್ತಾರಂತೆ. ಇದಕ್ಕೆ ಶಿರೂರು ಪರ್ಯಾಯ ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿಗಳ ಆಹ್ವಾನವೂ ಇದೆಯಂತೆ. ರಾಜ್ ನಂತರ ಶ್ರೀನಿವಾಸಮೂರ್ತಿಯೇ ಸೂಕ್ತ ವ್ಯಕ್ತಿ ಎಂದು ಸೂಚಿಸಿದ್ದಾರಂತೆ. ಆದ್ದರಿಂದ ನಟ ಶ್ರೀನಿವಾಸಮೂರ್ತಿ ನಾಟಕದ ತಯಾರಿ ನಡೆಸಿದ್ದಾರೆ.

ರುದ್ರಮೂರ್ತಿ ಶಾಸ್ತ್ತ್ರಿಗಳಿಂದ ಕಥೆ ಬರೆಸಿದ್ದು, ಹಿರಿಯ ನಟ ಶಿವರಾಂ, ರಮೇಶ್ ಭಟ್, ಎಂ.ಎಸ್. ಉಮೇಶ್, ಡಿಂಗ್ರಿ ನಾಗರಾಜ್, ಕರಿಬಸವಯ್ಯ, ಅನುಪ್ರಭಾಕರ್ ಮುಂತಾದವರು ನಾಟಕದಲ್ಲಿ ಅಭಿನಯಿಸಲಿದ್ದಾರೆ. ಶ್ರೀನಿವಾಸಮೂರ್ತಿ ಅವರು ನಟನೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜ್ಕುಮಾರ್, ಶ್ರೀನಿವಾಸ ಮೂರ್ತಿ, ಉಡುಪಿ, ಅನು ಪ್ರಭಾಕರ್