ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತೆಲುಗು, ತಮಿಳು, ಹಿಂದಿ, ಒರಿಯಾ, ಬೆಂಗಾಲಿಗೆ 'ಸೂಪರ್' (Super | Kannada | Upendra | Rockline Venkatesh)
ಸುದ್ದಿ/ಗಾಸಿಪ್
Bookmark and Share Feedback Print
 
PR
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಸೂಪರ್' ಜಯಭೇರಿ ಬಾರಿಸಿರುವುದು ಗೊತ್ತೇ ಇದೆ. ಆದರೆ ಅದಕ್ಕಿಂತಲೂ ಹೆಮ್ಮೆಯ ವಿಚಾರವೆಂದರೆ ಈ ಚಿತ್ರ ಹಲವು ರಾಜ್ಯಗಳ ಪ್ರೇಕ್ಷಕರನ್ನು ಅವರದ್ದೇ ಭಾಷೆಯಲ್ಲಿ ತಲುಪಲಿರುವುದು.

ನಯನತಾರಾ ಮತ್ತು ತುಲಿಪ್ ಜೋಷಿ ನಾಯಕಿಯರಾಗಿದ್ದ, ಸ್ವತಃ ಉಪ್ಪಿ ನಾಯಕನಾಗಿದ್ದ ಈ ಚಿತ್ರದ ಕನ್ನಡ ಆವೃತ್ತಿ 2010ರ ಡಿಸೆಂಬರ್ 3ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಿತ್ತು.

ಈಗ ತೆಲುಗು ಸರದಿ. ಅದರ ಪ್ರಚಾರ ಕಾರ್ಯದಲ್ಲಿ ಉಪೇಂದ್ರ ಸಿಕ್ಕಾಪಟ್ಟೆ ಬ್ಯುಸಿ. ಜನವರಿ 20ರಂದು ಹೈದರಾಬಾದಿನಲ್ಲಿ ಕ್ಯಾಸೆಟ್ ಬಿಡುಗಡೆ ಸಮಾರಂಭವೂ ನಡೆಯಲಿದೆ. ಈಗಾಗಲೇ ಡಬ್ಬಿಂಗ್ ಮುಗಿಸಿರುವ ಚಿತ್ರ, ಫೆಬ್ರವರಿ ಮೊದಲ ವಾರ ಅಥವಾ ಎರಡನೇ ವಾರ ಆಂಧ್ರಪ್ರದೇಶದಲ್ಲಿ ಬಿಡುಗಡೆ.

ಸ್ವತಃ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರೇ ತೆಲುಗಿನಲ್ಲೂ ಬಿಡುಗಡೆ ಮಾಡುತ್ತಿರುವುದು ವಿಶೇಷ. ತೆಲುಗು ಬಿಡುಗಡೆಯಾದ ನಂತರ ತಮಿಳು ಡಬ್ಬಿಂಗ್ ಆರಂಭ. ಕೆಲ ತಿಂಗಳ ಬಳಿಕ ತಮಿಳು ಆವೃತ್ತಿ ತಮಿಳುನಾಡಿನಲ್ಲಿ ಬಿಡುಗಡೆ. ಇದು ಕೂಡ ರಾಕ್‌ಲೈನ್ ಪ್ರೊಡಕ್ಷನ್‌ನಲ್ಲೇ ನಡೆಯಲಿದೆ. ಭಾರೀ ರೇಟು ಬಂದರೂ ಮಾರಲು ಅವರು ಸಿದ್ಧರಿಲ್ಲ.

ಸೂಪರ್ ಭರಾಟೆ ಇಷ್ಟಕ್ಕೇ ಮುಗಿಯಲ್ಲ. ಹಿಂದಿ, ಒರಿಯಾ (ಒರಿಸ್ಸಾ) ಮತ್ತು ಬೆಂಗಾಲಿ (ಪಶ್ಚಿಮ ಬಂಗಾಲ) ಪ್ರೇಕ್ಷಕರಿಗೂ ಉಪ್ಪಿ ಕಮಾಲ್ ವಿಸ್ತರಣೆಯಾಗಲಿದೆ. ಈಗಾಗಲೇ ಡಬ್ಬಿಂಗ್ ಹಕ್ಕುಗಳಿಗಾಗಿ ಕೋಟಿ-ಕೋಟಿ ಕಂತೆಗಳನ್ನು ಹಲವು ಮಂದಿ ಮುಂದಿಟ್ಟಿದ್ದಾರೆ.

ಆದರೆ ಇದುವರೆಗೂ ರಾಕ್‌ಲೈನ್ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಡಬ್ಬಿಂಗ್ ಹಕ್ಕುಗಳನ್ನು ಮಾರಾಟ ಮಾಡುವುದೋ ಅಥವಾ ತಾನೇ ಸ್ವತಃ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವುದೋ ಎಂಬ ಗೊಂದಲದಲ್ಲಿರುವ ಅವರು, ಶೀಘ್ರದಲ್ಲೇ ಒಂದು ನಿಲುವಿಗೆ ಬರಲಿದ್ದಾರಂತೆ.

ಕನ್ನಡದ ಚಿತ್ರವೊಂದು ಈ ರೀತಿಯಾಗಿ ಹಲವು ರಾಜ್ಯಗಳಲ್ಲಿ ಸುದ್ದಿಯಾಗುತ್ತಿರುವುದು ಹೆಮ್ಮೆ ತಾನೇ?
ಸಂಬಂಧಿತ ಮಾಹಿತಿ ಹುಡುಕಿ