ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಗನ್' ಎತ್ತಂಗಡಿ: ಹರೀಶ್ ರಾಜ್ ಆತ್ಮಹತ್ಯೆ ಯತ್ನ (Gun | Harish Raj | Santhosh theater | Kempe Gouda)
PR
ಬೆಂಗಳೂರಿನ 'ಸಂತೋಷ್' ಚಿತ್ರಮಂದಿರದಿಂದ 'ಗನ್' ಕನ್ನಡ ಚಿತ್ರವನ್ನು ಎತ್ತಂಗಡಿ ಮಾಡಿ 'ಕೆಂಪೇಗೌಡ' ಚಿತ್ರದ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಹೊರಟಿದ್ದ ಥಿಯೇಟರ್ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಲು 'ಗನ್' ನಾಯಕ ಹಾಗೂ ನಿರ್ದೇಶಕ ಹರೀಶ್ ರಾಜ್ ಅವರು ಥಿಯೇಟರ್ ಮೇಲೇರಿ ಆತ್ಮಹತ್ಯೆ ಬೆದರಿಕೆ ಹಾಕಿದ ವಿಲಕ್ಷಣ ಪ್ರಸಂಗ ಇಂದು ಮುಂಜಾನೆ ನಡೆಯಿತು.

ಆದರೆ ಈ ಆಕ್ರೋಶ, ಪ್ರತಿಭಟನೆ ಕೆಲವೇ ಕ್ಷಣಗಳಲ್ಲಿ ಮುಗಿದು ಹೋಯಿತು. ಬಿಡುಗಡೆಯಾದ ಎರಡೇ ವಾರದಲ್ಲಿ 'ಗನ್' ಚಿತ್ರದ ಎತ್ತಂಗಡಿ ಸರಿಯಲ್ಲ ಎಂದು ವಾದಿಸಿದ ಹರೀಶ್ ರಾಜ್, ಥಿಯೇಟರ್ ಮೇಲೆ ಚಾಕು ಹಿಡಿದು ನಿಂತು ಪ್ರತಿಭಟಿಸಿದರು. 'ನಮ್ಮ ಸಮಸ್ಯೆ ಬಗ್ಗೆ ಯಾರೂ ಸ್ಪಂದಿಸುತ್ತಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯೂ ನೆರವಿಗೆ ಬಂದಿಲ್ಲ' ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಆದರೆ ಸಂತೋಷ್ ಚಿತ್ರಮಂದಿರದ ಮಾಲೀಕ ಅರುಣ್ ಕುಮಾರ್ ಅವರು 'ಗನ್' ಎತ್ತಂಗಡಿಗೆ ಆ ಚಿತ್ರದ ಗುಣಮಟ್ಟವೇ ಕಾರಣ ಎಂದಿದ್ದಾರೆ. ಮೊದಲನೆಯದಾಗಿ 'ಗನ್' ಕುಟುಂಬ ಸಮೇತ ಕುಳಿತು ನೋಡುವ ಚಿತ್ರವಲ್ಲ ಹಾಗೂ ನಟ ಹರೀಶ್ ದಿನಂಪ್ರತಿ ಉಚಿತ ಪಾಸ್ ನೀಡಿ ಚಿತ್ರಮಂದಿರಕ್ಕೆ ಜನ ಕಳುಹಿಸುತ್ತಿರುವುದರಿಂದ ನಮಗೆ ಕಲೆಕ್ಷನ್ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಇಷ್ಟೆಲ್ಲಾ ಗಲಾಟೆ, ಅತಿರೇಕದ ವರ್ತನೆಗಳು ನಡೆದ ಬಳಿಕ 'ಗನ್' ಚಿತ್ರವನ್ನು ಸಂತೋಷ್ ಚಿತ್ರಮಂದಿರದಲ್ಲಿ ಹಾಕುವುದಿಲ್ಲ. ಏನುಬೇಕಾದರೂ ಆಗಲಿ ಎಂದು ಮಾಲಿಕ ಅರುಣ್ ಕುಮಾರ್ ತಿಳಿಸಿದ್ದಾರೆ.

ಚಿತ್ರವನ್ನು ನೋಡದೆ ಈ ರೀತಿ ಆರೋಪಿಸುವುದು ಸಮಂಜಸವಲ್ಲ ಎಂದಿರುವ ನಾಯಕ ನಿರ್ದೇಶಕ ಹರೀಶ್ ರಾಜ್, ನನ್ನ ಆಪ್ತರಿಗೆ ಮಾತ್ರ ಉಚಿತ ಪಾಸ್ ನೀಡಿದ್ದಾಗಿ ತಿಳಿಸಿದ್ದಾರೆ. ಹಾಗೂ ನನ್ನ ನಂಬಿ ನಿರ್ಮಾಪಕರು ಹಣ ಸುರಿದಿದ್ದಾರೆ. ಥಿಯೇಟರ್ ಮಾಲೀಕರು ಈ ರೀತಿ ಏಕಾಏಕಿ ನಿರ್ಧಾರ ಕೈಗೊಂಡರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದ್ದಾರೆ.

ಥಿಯೇಟರ್ ಮಾಲೀಕ ಅರುಣ್ ಕುಮಾರ್ ಅವರೊಂದಿಗೆ ನೇರವಾಗಿ ದೂರವಾಣಿಯಲ್ಲಿ ಮಾತನಾಡಿದ ಹರೀಶ್, ನಾನು ಸತ್ತಿದ್ರೆ ಅದಕ್ಕೆ ನೀವೇ ಕಾರಣ ಎಂದು ಕ್ರೋಧಗೊಂಡರು.

ತೀವ್ರ ಹತಾಶರಾಗಿದ್ದ ಹರೀಶ್‌ಗೆ 'ಕೆಂಪೇಗೌಡ' ನಾಯಕ ಸುದಿಪ್ ಸ್ವಾಂತನ ಹೇಳಿ, ಇಡೀ ಕರ್ನಾಟಕದಾದ್ಯಂತ ಚಿತ್ರಮಂದಿರಗಳು ನನ್ನ ಹತೋಟಿಯಲ್ಲಿದೆ ಎಂದು ತಪ್ಪು ಭಾವಿಸಬೇಡಿ. ಚಿತ್ರಮಂದಿರಗಳ ಮಾಲೀಕರಿಗೆ ಆರ್ಥಿಕ ವಿಷಯ ಬಹು ಮುಖ್ಯವಾಗಿರುತ್ತದೆ. ಆದ್ದರಿಂದ ಹೆಚ್ಚು ಕಲೆಕ್ಷನ್ ಆಗದ ಚಿತ್ರಗಳನ್ನು ಒಮ್ಮೆಲೆ ತೆಗೆದು ಹಾಕುವ ಸಾಧ್ಯತೆ ಇರುತ್ತದೆ. ಇಂತಹ ಅನುಭವ ನನಗೆ ಈ ಮೊದಲು ಎಷ್ಟೋ ಬಾರಿ ಆಗಿದೆ ಎಂದರು.

ಹರೀಶ್ ಅವರ ಆತ್ಮಹತ್ಯಾ ಯತ್ನದ ವೇಳೆ ಅವರನ್ನು ಬಿಡಿಸಲು ಹೋದ ಪೊಲೀಸ್ ಪೇದೆಯೊಬ್ಬರಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ. ಈ ಬೆಳವಣಿಗೆಯಿಂದ ಬೇಸತ್ತ ಪೊಲೀಸರು ಹರೀಶ್ ಅವರ ಈ ವರ್ತನೆ ಕಾನೂನು ಬಾಹಿರ ಎಂದು ಆಕ್ರೋಶಗೊಂಡಿದ್ದಾರೆ.
ಇವನ್ನೂ ಓದಿ