ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಪಪ್ರಚಾರ: ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ರಮ್ಯಾ...! (Sanju Weds Geetha | Dandam Dashagunam | Ganesh | Ramya | Divya Spandana)
PR
ಬೆಂಗಳೂರು: ಇಲ್ಲಿನ ಗ್ರೀನ್ ಹೋಮ್‌ನಲ್ಲಿ ಶುಕ್ರವಾರ ನಡೆದ 'ಸಂಜು ವೆಡ್ಸ್ ಗೀತಾ' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತನ್ನ ಆಕ್ರೋಶ, ವೇದನೆಗಳನ್ನು ಕಣ್ಣೀರಿನಲ್ಲೇ ತೋರ್ಪಡಿಸಿದರು ರಮ್ಯಾ. ಕೇವಲ ಪ್ರಚಾರಕ್ಕಾಗಿ ಒಂದು ಹೆಣ್ಣಿನ ಮಾನಹಾನಿ ಮಾಡುವುದು ಸರಿಯಲ್ಲ. ಅವರಿಗೆ ಅಷ್ಟೊಂದು ಸ್ಪಷ್ಟ ಮಾಹಿತಿ ಇಲ್ಲದೆ ಖಾಸಗಿ ವಿಚಾರಗಳ ಬಗ್ಗೆ ಅಪಪ್ರಚಾರ ಮಾಡಬಾರದು ಎಂದು 'ದಂಡಂ ದಶಗುಣಂ' ಚಿತ್ರದ ವಿವಾದ ಕುರಿತು ಕಣ್ಣೀರಿಟ್ಟರು.

ರಮ್ಯಾ ಚಿತ್ರರಂಗಕ್ಕೆ ವಿದಾಯ ಘೋಷಿಸಲು ಅವರು ಮದುವೆಯಾಗಲು ಹೊರಟಿರುವುದು ಕಾರಣ, ಯಾರೋ ಮದ್ಯದ ಉದ್ಯಮಿ ಜೊತೆ ಮದುವೆಯಾಗಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು, ವಿಶ್ವ ಕನ್ನಡ ಸಮ್ಮೇಳನಕ್ಕೆ ಗೈರು ಹಾಜರಾಗಿದ್ದಕ್ಕೆ 'ಕನ್ನಡ ವಿರೋಧಿ' ಎಂದು ಬಿಂಬಿಸುತ್ತಿರುವುದು, ನಿರ್ಮಾಪಕರಿಗೆ ಚಿತ್ರ ಬಿಡುಗಡೆಗಾಗಿ ಹಣಕಾಸು ಸಹಾಯ ಮಾಡಲು ಹೋದರೂ ತನ್ನ ಮೇಲೆಯೇ ಅಪವಾದ ಬಂದಿರುವುದು... ಇವೆಲ್ಲವುಗಳು ರಮ್ಯಾ ಅವರ ಮನಸ್ಸು ನೋಯಿಸಲು ಪ್ರಮುಖ ಕಾರಣಗಳು.

ಯಾವುದೇ ಕಾರಣವಿಲ್ಲದೆ ನನ್ನನ್ನು ಕನ್ನಡ ವಿರೊಧಿ ಎಂಬ ಪಟ್ಟ ಕಟ್ಟುತ್ತಿದ್ದಾರೆ. ಕಿರಿಕ್ ಹೀರೋಯಿನ್ ಎಂದು ನಿರರ್ಥಕ ವಾದಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಮ್ಮೇಳನಕ್ಕೆ ಗೈರು ಹಾಜರಾಗಿದ್ದೆ ನಿಜ. ಆದರೆ ಆ ಸಂದರ್ಭದಲ್ಲಿ ನಾನು ಯುರೋಪ್ ಪ್ರವಾಸದಲ್ಲಿದ್ದೆ. ಇನ್ನು ಹೇಗೆ ಬರಕ್ಕಾಗುತ್ತೆ. ಅದನ್ನೇ ಕನ್ನಡ ವಿರೋಧಿ ಎಂದಂತೆ ಬಿಂಬಿಸುವುದು ಎಷ್ಪು ಸರಿ ಎಂದು ಟ್ವಿಟ್ಟರಿನಲ್ಲಿ ಪ್ರಶ್ನಿಸಿದ್ದಾರೆ.

ಮಾದ್ಯಮಗಳಿಗೆ ಬುದ್ಧಿಮಾತು....

ನೀವು ಟೀವಿ ಮಾದ್ಯಮದವರು ಏನೇ ವಿಷಯ ಇದ್ರೂ ಸ್ಪಷ್ಟವಾಗಿ ಖಚಿತಪಡಿಸಿಕೊಂಡು ನಂತರ ಪ್ರಸಾರ ಮಾಡಿ. ಸುಖಾಸುಮ್ಮನೆ ಏನೇನೋ ಪ್ರಸಾರ ಮಾಡಬೇಡಿ. ಅದು ಇನ್ನೊಬ್ಬರ ವಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದು ಕಣ್ಣೊರೆಸುತ್ತಾ ಹೇಳಿದರು.

ನಾನು ಕನ್ನಡ ಚಿತ್ರರಂಗವನ್ನು ತ್ಯಜಿಸಿ ನೆರೆಯ ರಾಜ್ಯದ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಪತ್ರಿಕೆಯೊಂದು ಬರೆದಿದೆ. ಅವರಿಗೇನಾದರೂ ಬರೆಯಬೇಕೆಂದಿದ್ದರೆ ಸತ್ಯವನ್ನು ಬರೆಯಲಿ. ನಾನು ಏನೂ ಹೇಳದೆ, ಪರಭಾಷಾ ಚಿತ್ರರಂಗದಲ್ಲಿ ನಟಿಸುತ್ತಾರೆ ಎಂದು ಹೇಗೆ ಬರೆಯುತ್ತಾರೆ..? ಅವರಿಗನಿಸಿದ್ದನ್ನೆಲ್ಲ ಬರಯುವುದಕ್ಕೇನಾ ಮಾದ್ಯಮಗಳು ಇರುವುದು ಎಂದೆಲ್ಲಾ ಮಾದ್ಯಮಗಳ ಮೇಲೆ ಟ್ವಿಟ್ಟರ್‌ನಲ್ಲಿ ತನ್ನ ಅಸಮಾಧಾನ ತೋಡಿಕೊಂಡಿದ್ದಾರೆ.

ವಿಶ್ವ ಕನ್ನಡ ಸಮ್ಮೇಳನಕ್ಕೆ ನಾನು ಬಂದಿಲ್ಲ. ಆದ್ದರಿಂದ ನನ್ನನ್ನು ಕನ್ನಡ ವಿರೋಧಿ ಎಂದು ಪತ್ರಿಕೆಯಲ್ಲಿ ಬರೆಯುವ ಮೊದಲು, ಆ ವೇಳೆ ನಾನು ಯುರೋಪ್ ಪ್ರವಾಸದಲ್ಲಿದ್ದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಿತ್ತು ಎಂದು ಮಾದ್ಯಮವೊಂದನ್ನು ಕುಟುಕಿದ್ದಾರೆ.

ಭಾಷೆಯ ಮೂಲಕ ನಮ್ಮನ್ನು ಒಡೆಯಲು ಯತ್ನಿಸಲಾಗುತ್ತಿದೆ. ಸಿನಿಮಾ ಎಂಬುದು ವಿಶ್ವವ್ಯಾಪಿಯಾದುದು. ತಮಿಳು, ಕನ್ನಡ ಭಾರತೀಯ ಭಾಷೆಯಗಳು ಅಲ್ಲವೇನು...? ನಾನು ಕಲಾವಿದೆ ಬಂಗಾಳಿ ಭಾಷೆಯಲ್ಲಿ ಬೇಕಾದ್ರೂ ನಟಿಸುತ್ತೇನೆ. ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಾ...? ಎಲ್ಲಿದೆ ನಿಮ್ಮ ಜವಾಬ್ದಾರಿ..? ಎಂದು ಮಾದ್ಯಮವೊಂದನ್ನು ಪ್ರಶ್ನಿಸಿದ್ದಾರೆ ರಮ್ಯಾ...

ಅದನ್ನು ನೀವೇ ಪತ್ತೆಹಚ್ಚಿ....

'ದಂಡಂ ದಶಗುಣಂ' ಚಿತ್ರಕ್ಕಾಗಿ ನಿರ್ಮಾಪಕ ಎ.ಗಣೇಶ್‌ಗೆ ನಾನು ಹಣ ಸಹಾಯ ಮಾಡಿದ್ದೆ. ಆದರೆ ನನ್ನಿಂದ ಸಹಾಯ ಪಡೆದು ಸುಕಾಸುಮ್ಮನೆ ನನ್ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ನಿರ್ಮಾಪಕ ಎ.ಗಣೇಶ್ ವಿರುದ್ಧ ಆಕ್ರೋಶಗೊಂಡರು.

ಏನು ಸಹಾಯ ಮಾಡಿದ್ರಿ, ಎಷ್ಟು ಹಣ ಸಹಾಯ ಮಾಡಿದ್ರಿ ಎಂಬ ಪತ್ರಕರ್ತರ ಪ್ರಶ್ನೆಗೆ ಪತ್ರಕರ್ತರ ಮೇಲೆ ತುಸು ಮುನಿಸಿಕೊಂಡ ರಮ್ಯಾ 'ಯಾವೆಲ್ಲಾ ಭೂಗತ ವ್ಯವಹಾರಗಳನ್ನು ನೀವು ಪತ್ತೆಹಚ್ಚುತ್ತೀರ. ಇದನ್ನೂ ನೀವೇ ಪತ್ತೆಹಚ್ಚಿ' ಎಂದು ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.

ಈ ನಡುವೆ ರಮ್ಯಾ ಅವರು 'ಸಂಜು ವೆಡ್ಸ್ ಗೀತಾ' ಚಿತ್ರದ ಪತ್ರಿಕಾಗೋಷ್ಠಿಗೆ ಸ್ಪಲ್ಪ ತಡವಾಗಿ ಬಂದದ್ದನ್ನೂ " 'ಸಂಜು ವೆಡ್ಸ್ ಗೀತಾ' ಚಿತ್ರದ ಪ್ರತ್ರಿಕಾಗೋಷ್ಠಿಗೂ ರಮ್ಯಾ ಗೈರು" ಎಂಬ ಸುದ್ದಿ ಕೇಳಿಬಂದಿತ್ತು.

ಬೇರೆಯವರು ನಮ್ಮ ಇಂಡಸ್ಟ್ರಿ ಬಗ್ಗೆ ಏನಂದುಕೊಳ್ಳುತ್ತಾರೆ....

ನಾನು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಆದರೂ ಕನ್ನಡ ವಿರೋಧಿ ಎಂದು ಹೀಗಳೆಯುತ್ತಿದ್ದಾರೆ. ಕೇವಲ ಒಂದು ಚಿತ್ರದ ಪ್ರಚಾರಕ್ಕಾಗಿ ಮಾಡಿದ ಉಪಕಾರವನ್ನು ಮರೆತು ಹೀಗೆಲ್ಲಾ ಹುರುಳಿಲ್ಲದೆ ಪ್ರಚಾರ ಮಾಡುವುದಾ.... ನಮ್ಮ ಕನ್ನಡ ಚಿತ್ರರಂಗವನ್ನು ಬೇರೆಯವರು ಏನಂದುಕೊಳ್ಳುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಕಲಾವಿದರ ಸಂಘಕ್ಕೆ ಪತ್ರ ಬರೆಯುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ.

ಗಡುವು ಹಿನ್ನಲೆ.......

ಒಂದೆಡೆ ನಿರ್ಮಾಪಕ ಗಣೇಶ್ ಅವರು ರಮ್ಯಾ ಅವರಿಗೆ 48ಗಂಟೆಗಳ ಗಡುವು ನೀಡುತ್ತಿದ್ದರೆ, ಮತ್ತೊಂದೆಡೆ ರಮ್ಯಾ ಅವರೂ ಗಣೇಶ್‌ಗೆ 48ಗಂಟೆಗಳ ಗಡುವು ನೀಡಿದ್ದಾರೆ.

ಎಂತೆಂಥ ಹಿರಿಯ ನಟರೂ ತಾವು ನಟಿಸಿದ ಚಿತ್ರದ ಪ್ರಚಾರಕ್ಕೆ ಮರು ಮಾತಿಲ್ಲದೆ ಒಪ್ಪಿ ಬರುತ್ತಾರೆ. ಆದರೆ ಚಿತ್ರದ ಸರ್ವತೋಮುಖ ಬೆಳವಣಿಗೆಗೆ ರಮ್ಯಾ ಸೂಕ್ತ ಸಹಕಾರ ನೀಡುತ್ತಿಲ್ಲ. ಇದರಿಂದ 'ದಂಡಂ ದಶಗುಣಂ' ಚಿತ್ರರಂಗದ ಪ್ರಚಾರಕ್ಕೆ ರಮ್ಯಾ ಬರಲೇ ಬೇಕೆಂದು ನಿರ್ಮಾಪಕ ಗಣೇಶ್ ಒತ್ತಾಯ. ಈ ಸಂಬಂಧ 48ಗಂಟೆಗಳಲ್ಲಿ ಸ್ಪಷ್ಟನೆ ನೀಡಬೇಕೆಂದು ನಿರ್ಮಾಪಕರ ಗಡುವು.

ಆದರೆ, ಚಿತ್ರೀಕರಣದ ವೇಳೆ ನಿರ್ಮಾಪಕರಿಗೆ ಸ್ವತಃ ನಾನೇ ಹಣ ನೀಡಿದ್ದೇನೆ. ಜತೆಗೆ ಸಂಭಾವನೆ ಕೇಳದೆ ನಲವತ್ತು ದಿನ ಚಿತ್ರಕ್ಕಾಗಿ ದುಡಿದಿದ್ದೇನೆ. ಈ ಸಂದರ್ಭದಲ್ಲಿ ಆರು ತಿಂಗಳು ನಿರ್ಮಾಪಕರು ನನ್ನ ಕರೆಯನ್ನು ಸ್ವೀಕರಿಸದೆ ಸತಾಯಿಸಿದ್ದಾರೆ. ಈ ಸಂದರ್ಭದಲ್ಲಿ ನಾನೆಂದಾದರೂ ಮಾದ್ಯಮಗಳ ಮುಂದೆ ಹೋಗಿ ಅವರ ಮಾನ ಹರಾಜು ಹಾಕಿದ್ದೀನಾ...?

ಚಿತ್ರರಂಗದ ಕಾನೂನಿನಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕಳೆದ ಜನವರಿಯಿಂದ ದೂರು ಸಲ್ಲಿಸುತ್ತಾ ಬಂದಿದ್ದೇನೆ. ಇನ್ನೂ ನನಗೆ ಬರಬೇಕಿರುವ ಹಣ ವಾಪಾಸು ಬಂದಿಲ್ಲ. ಈ ಸ್ಥಿತಿಯಲ್ಲಿ ನಾನು ಏಕೆ ಅವರು ಹೇಳಿದಂತೆಲ್ಲ ಕೇಳಬೇಕು. ಮೊದಲು ಅವರು ನನಗೆ ಕೊಡಬೇಕಿರುವ ಸಾಲದ ಹಣವನ್ನು 48ಗಂಟೆಗಳಲ್ಲಿ ಕೊಡಲಿ ಎಂಬುದು ರಮ್ಯಾ ಶರತ್ತು.

ಎಲ್ಲಾ ಕ್ಲಿಯರ್ ಆಗಿದೆ..! ಗಣೇಶ್ ಹೇಳಿಕೆ.

ನಟಿ ರಮ್ಯಾ ಅವರಿಗೆ ಯಾವುದೇ ಹಣವನ್ನು ಬಾಕಿ ಉಳಿಸಿಲ್ಲ. ಕೊಡಬೇಕಾದ ಹಣವನ್ನೆಲ್ಲ ಅಂದೇ ಕೊಟ್ಟಾಗಿದೆ. ಒಂದು ವೇಳೆ ಹಣ ಬಾಕಿ ಉಳಿಸಿಕೊಂಡಿದ್ದಿದ್ದರೆ ರಮ್ಯಾ ಅವರು ಚಿತ್ರದ ಡಬಿಂಗ್‌ಗೆ ಬರುತ್ತಿರಲಿಲ್ಲ ಎಂದು ನಿರ್ಮಾಪಕ ಗಣೇಶ್ ಅವರು ಪ್ರತಿಕ್ರಿಯಿಸಿದ್ದಾರೆ.

ನಮ್ಮ ಜತೆ ರಮ್ಯಾ ಕಿರಿಕ್ ಇಲ್ಲ....

ಒಂದೆಡೆ 'ದಂಡಂ ದಶಗುಣಂ' ಚಿತ್ರದ ನಿರ್ಮಾಪಕರು ಸೇರಿದಂತೆ ಕೆಲವು ಹಿರಿಯ ನಿರ್ದೇಶಕರು ರಮ್ಯಾ ವರ್ತನೆ ವಿರುದ್ಧ ಅಸಮಾಧಾನಗೊಂಡಿದ್ದರೆ, ಇತ್ತ 'ಸಂಜು ವೆಡ್ಸ್ ಗೀತಾ' ಚಿತ್ರತಂಡ ರಮ್ಯಾ ಅವರು ಚಿತ್ರಕ್ಕೆ ಉತ್ತಮ ಸಹಕಾರ ನೀಡಿದ್ದಾರೆ ಎಂದಿದ್ದಾರೆ.

'ಸಂಜು ವೆಡ್ಸ್ ಗೀತಾ' ಚಿತ್ರದ ನಿರ್ದೇಶಕ, ನಿರ್ಮಾಪಕರು ಸೇರಿದಂತೆ ನಾಯಕ ನಟ ಶ್ರೀನಗರ ಕಿಟ್ಟಿ ಕೂಡ ರಮ್ಯಾ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ದಂಡಂ ದಶಗುಣಂ' ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಕಿಟ್ಟಿ, ರಮ್ಯಾ ಅವರ ಪರಿಸ್ಥಿತಿ ನೋಡಿ ನನಗೂ ಬೇಜಾರಾಗ್ತಿದೆ. ಅವರು ಅಷ್ಟು ಬೇಗ ಯಾವುದಕ್ಕೂ ಬೇಜಾರು ಮಾಡ್ಕೊಳಲ್ಲ. ತುಂಬಾ ಒಳ್ಳೆಯ ಬುದ್ಧಿ. ನಮ್ಮ ಸಿನಿಮಾದಲ್ಲಿ ಯಾವುದೇ ಕಿರಿಕ್ ಇರಲಿಲ್ಲ. ಅವರಿಗೆ ಯಾವ ರೀತಿ ನೋವಾಗಿದೆ ಎಂದು ಅವರನ್ನೇ ಕೇಳಬೇಕು. ವಿಷಯ ಇಲ್ಲದೆ ಯಾರೂ ಈ ರೀತಿ ರಿಯಾಕ್ಟ್ ಮಾಡಲ್ಲ ಎಂದಿದ್ದಾರೆ.

ರಮ್ಯಾ ವಿವಾದಕ್ಕೆ ಅಂಬರೀಷ್ ಮದ್ಯಸ್ಥಿಕೆ....

ಈ ಎಲ್ಲಾ ವಿವಾದಗಳಿಗೆ ತೆರೆ ಎಳೆಯಲು ಇಂದು (ಶುಕ್ರವಾರ) ಸಂಜೆ ನಿರ್ಮಾಪಕರ ಸಂಘದೊಂದಿಗೆ ಮಾತುಕತೆ ನಡೆಯಲಿದೆ. ರಮ್ಯಾ, ಎ.ಗಣೇಶ್ ಸೇರಿದಂತೆ 'ದಂಡಂ ದಶಗುಣಂ' ಚಿತ್ರ ತಂಡದ ಪ್ರಮುಖರು ಈ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ನಿರ್ಮಾಪಕರ ಸಂಘದ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್ ಅವರೂ ಈ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ.

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಉಲ್ಬಣಗೊಂಡಿದ್ದ ಹಲವಾರು ವಿವಾದಗಳನ್ನು ಇತ್ಯರ್ಥಗೊಳಿಸಿರುವ ರೆಬಲ್ ಸ್ಟಾರ್ ಅಂಬರೀಷ್ ಅವರು 'ದಂಡಂ ದಶಗುಣಂ' ವಿವಾದವನ್ನೂ ಬಗೆಹರಿಸಲಿದ್ದಾರೆ.
ಇವನ್ನೂ ಓದಿ