ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಶಿವಣ್ಣನ ಹೊಸ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿ! (Shivaraj kumar | Radhika pandith | Pannaga Nagabharana | Punith rajkumar)
PR

ಯಶಸ್ಸಿನ ಹಾದಿಯಲ್ಲಿರುವ ಮೊಗ್ಗಿನ ಮನಸಿನ ರಾಧಿಕಾ ಪಂಡಿತ್ ಕನ್ನಡದ ಟಾಪ್ ಸ್ಟಾರ್ ಪುನಿತ್ ರಾಜ್ ಕುಮಾರ್ ಜತೆಯಾಗಿ 'ಹುಡುಗರು' ಚಿತ್ರದಲ್ಲಿ ನಟಿಸುತ್ತಿರುವಾಗಲೇ ಮತ್ತೊಬ್ಬ ಯಶಸ್ವಿ ನಟನೊಂದಿಗೆ ನಾಯಕಿಯಾಗುವ ಅವಕಾಶ ಒದಗಿಬಂದಿದೆ. ಬಿಡುವಿಲ್ಲದೆ ಒಂದರ ಹಿಂದೆ ಒಂದರಂತೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 102ನೇ ಚಿತ್ರಕ್ಕೆ ರಾಧಿಕಾ ಪಂಡಿತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಅದ್ಧೂರಿ ಮತ್ತು ಹುಡುಗರು ಚಿತ್ರದಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್‌‌ಗೆ ಈ ಚಿತ್ರ ಇನ್ನಷ್ಟು ಯಶಸ್ಸು ತಂದುಕೊಡಲಿದೆ. ಚಿತ್ರದ ನಿರ್ದೇಶಕರು ಪನ್ನಗ ನಾಗಾಭರಣ. ಇವರು ಕನ್ನಡದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಟಿ.ಎಸ್. ನಾಗಾಭರಣ ಅವರ ಪುತ್ರ.

ಪನ್ನಗ ನಾಗಾಭರಣ ಅವರು ಅಮೇರಿಕಾದಲ್ಲಿ ಚಲನ ಚಿತ್ರೀಕರಣ ಪದವಿ ಪಡೆದಿದ್ದು, ಅಲ್ಲೇ ಚಲನ ಚಿತ್ರ ತಯಾರಿಕೆಯ ಪ್ರಾಯೋಗಿಕ ತರಬೇತಿಯನ್ನೂ ಪಡೆದಿದ್ದಾರೆ. ಇವರು ಬರೆದ ಚಿತ್ರಕಥೆಯೊಂದು ಶಿವಣ್ಣನಿಗೆ ತುಂಬಾ ಹಿಡಿಸಿದ್ದರಿಂದ ಚಿತ್ರಕ್ಕೆ ನಟಿಸಲು ಒಪ್ಪಿಕೊಂಡಿದ್ದಾರೆ.

ಅಲ್ಲದೆ, ತನ್ನ ಬಳಿ ಈ ಹಿಂದೆ ಕಾಲ್‌ಶೀಟ್ ಕೇಳಿದ್ದ ನಿರ್ಮಾಪಕರೊಬ್ಬರ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಲಿ ಎಂದು ಯುವ ನಿರ್ದೇಶಕ ಪನ್ನಗ ನಾಗಾಭರಣ ಅವರಿಗೆ ಶಿವಣ್ಣ ಸಲಹೆ ನೀಡಿದ್ದಾರೆ ಎಂದು ಚಿತ್ರರಂಗದ ಆಪ್ತವಲಯಗಳು ತಿಳಿಸಿವೆ.
ಇವನ್ನೂ ಓದಿ