ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಹುಡುಗರು' ಚಿತ್ರ ಬಿಡುಗಡೆಗೆ ಪುನಿತ್ ಗೈರು? (Hudugaru | Punith Rajkumar | Shreenagara Kitty | Radhika Pandith)
PR
ತನ್ನದೇ ಚಿತ್ರದ ಬಿಡುಗಡೆಯ ದಿನ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಗೈರು ಹಾಜರಾಗುತ್ತಿರುವುದು ಇದೇ ಮೊದಲು. ತಮ್ಮದೇ ಗೃಹ ಸಂಸ್ಥೆಯಡಿಯಲ್ಲಿ ಚಿತ್ರ ತಯಾರಾಗಿದ್ದರೂ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡದೆ ಪುನಿತ್ ಹೆಚ್ಚಿನ ವಿಶ್ವಾಸದಿಂದ ತಮ್ಮ ಕುಟುಂಬಸ್ತರೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾರೆ.

ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ, ಯೋಗೇಶ್ ನಟಿಸಿರುವ ಬಹುನಿರೀಕ್ಷೆಯ 'ಹುಡುಗರು' ಚಿತ್ರ ರಾಜ್ಯದಾದ್ಯಂತ ಸುಮಾರು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

ಬಿಡುಗಡೆಗೆ ಮುಂಚೆಯೇ ಚಿತ್ರದ ಯಶಸ್ಸಿನ ಬಗ್ಗೆ ಬಹುನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಪುನಿತ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ 'ಹುಡುಗರು' ಚಿತ್ರದ ಪ್ರಚಾರ ಏನೇನು ಇಲ್ಲ. ಒಂದು ಒಳ್ಳೆಯ ಚಿತ್ರಕ್ಕೆ ಹೆಚ್ಚಿನ ಪ್ರಚಾರದ ಅವಶ್ಯಕತೆ ಇರುವುದಿಲ್ಲ ಎಂಬುದಕ್ಕೆ 'ಹುಡುಗರು' ಸಾಕ್ಷಿ.
ಇವನ್ನೂ ಓದಿ