ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಗ್ರೀನ್ ಸಿಗ್ನಲ್: 'ಸತ್ಯಾನಂದ' ಚಿತ್ರೀಕರಣಕ್ಕೆ ಆರಂಭ (Satyananda | Swamy Nityananda | Madan Patel | Kannada Cinema)
WD
ನಿರ್ಮಾಪಕ, ನಿರ್ದೇಶಕ, ನಟ ಮದನ್ ಪಟೇಲ್ ಅವರ ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ಚಿತ್ರ 'ಸತ್ಯಾನಂದ'. ಅದಕ್ಕಾಗಿ ಅವರೇ ಖುದ್ದಾಗಿ ಚಿತ್ರದ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತು ಚಿತ್ರೀಕರಣಕ್ಕೆ ತೊಡಗಿದ್ದರು. ಆದರೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಚಿತ್ರೀಕರಣಕ್ಕೆ ತಡೆ ಒಡ್ಡಿತ್ತು. ಈದೀಗ ಅದೆಲ್ಲವೂ ತೆರವುಗೊಂಡು 'ಸತ್ಯಾನಂದ' ಚಿತ್ರೀಕರಣಕ್ಕೆ ಹಸಿರು ನಿಶಾನೆ ದೊರಕಿದೆ. ಕಳೆದ ಸೋಮವಾರದಿಂದಲೇ ಚಿತ್ರೀಕರಣ ಪುನರಾರಂಭಗೊಂಡಿದೆ ಎಂದು ನಿರ್ಮಾಪಕ ಮಯೂರ್ ಪಟೇಲ್ ತಿಳಿಸಿದ್ದಾರೆ.

ಬಿಡದಿಯ ಕಾಮಕಾಂಡದ ಅಪಖ್ಯಾತಿ ಹೊತ್ತ ಸ್ವಾಮಿ ನಿತ್ಯಾನಂದನ ಜೀವನವನ್ನು ಆಧಾರವಾಗಿಟ್ಟುಕೊಂಡು ಚಿತ್ರ ನಿರ್ಮಿಸುವುದಾಗಿ ಮದನ್ ಪಟೇಲ್ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿಯೂ ಇದ್ದರು. ಇದನ್ನರಿತ ನಿತ್ಯಾನಂದ ಸ್ವಾಮಿ ಚಿತ್ರ ನಿರ್ಮಾಣಕ್ಕೆ ತಡೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ನ್ಯಾಯಾಲಯ ಹೊರಡಿಸಿರುವ ಆದೇಶದ ಪ್ರಕಾರ ಮದನ್ ಪಟೇಲ್ ಚಿತ್ರೀಕರಣವನ್ನು ಮುಂದುವರಿಸಬಹುದಾಗಿದೆ.

ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿ ಮದನ್ ಪಟೇಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಮದನ್ ಪಟೇಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಸತ್ಯಾನಂದ' ಚಿತ್ರಕ್ಕೆ ಅಶ್ವಿನಿ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ವಿ. ಆನಂದಪ್ರಿಯ ಮತ್ತು ಲಕ್ಷ್ಮಣ್ ಶಿವಶಂಕರ್ ಬರೆದಿದ್ದಾರೆ. ಮಯೂರ್ ಪಟೇಲ್ ಚಿತ್ರದ ಒಂದು ಗೀತೆಯನ್ನು ಹಾಡಿದ್ದಾರೆ. ಕಳೆದ ಸೋಮವಾರದಿಂದಲೇ ಚಿತ್ರೀಕರಣ ಪುನರಾರಂಭಗೊಂಡಿದೆ ಎಂದು ನಿರ್ಮಾಪಕ ಮಯೂರ್ ಪಟೇಲ್ ತಿಳಿಸಿದ್ದಾರೆ. ದಿನಕರ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ರಘು ಮಾಮಿಳಪಲ್ಲಿ ಛಾಯಾಗ್ರಹಣ, ಮದನ್ ಪಟೇಲ್ ಸಂಗೀತ ನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾ ಬಳಗದಲ್ಲಿ ಮದನ್ ಪಟೇಲ್, ರವಿ ಚೇತನ್, ನಮಿತಾ, ಚಾರ್ಮಿ, ದೊಡ್ಡಣ್ಣ, ನಯನಕೃಷ್ಣ, ಮೋಹನ್ ಜುನೇಜಾ, ಮುತ್ತುರಾಜ್, ಮಂಡ್ಯ ರಮೇಶ್, ಮಂಜು, ಚಿತ್ರಾ, ರಮೇರ್ಶ ಪಂಡಿತ್ ಮುಂತಾದವರಿದ್ದಾರೆ.
ಇವನ್ನೂ ಓದಿ