ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಗನ್' ಹರೀಶ್ ರಾಜ್ ವಿರುದ್ಧ 420 ಕೇಸು ದಾಖಲು! (Gun | Harish Raj | Murali | Kempe Gowda)
PR
ನಟನೆ ಮತ್ತು ನಿರ್ದೇಶನದಲ್ಲಿ ಹೆಸರು ಮಾಡದೆ ಹೋದರೂ ಒಂದಲ್ಲಾ ಒಂದು ವಿವಾದಗಳಲ್ಲೇ ಹೆಸರು ಮಾಡುತ್ತಿರುವ 'ಗನ್' ಚಿತ್ರದ ನಾಯಕ, ನಿರ್ದೇಶಕ ಹರೀಶ್ ರಾಜ್ ಈಗ ತಲೆಮರೆಸಿಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಹಲವಾರು ದಿನಗಳಿಂದ 'ಗನ್' ಚಿತ್ರದ ನಿರ್ಮಾಪಕ ಮುರಳಿ ಮತ್ತು ಹರೀಶ್ ರಾಜ್ ನಡುವೆ ಹಲವಾರು ದಿನಗಳಿಂದ ವಿವಾದಗಳು ಏರ್ಪಟ್ಟಿದ್ದವು. ಅದರ ಮುಂದುವರಿದ ಭಾಗವೆಂಬಂತೆ ದಿನಾಂಕ 12-05-2011ರಂದು ಹರೀಶ್ ರಾಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಢ ಸಂಹಿತೆ ಸೆಕ್ಷನ್ 420 ಮತ್ತು 406 ಅಡಿಯಲ್ಲಿ ಎಫ್‌ಐಆರ್ ಸಂಖ್ಯೆ 0075ರಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಹರೀಶ್ ರಾಜ್ ಅವರ ತಾಯಿಯ ಹೆಸರಿನಲ್ಲಿರುವ ನಿವಾಸ ಬೀಗ ಹಾಕಿದ್ದು, ಈಗ ಪೊಲೀಸರು ಹರೀಶ್ ರಾಜ್ ಪತ್ತೆಗೆ ಬಲೆಬೀಸಿದ್ದಾರೆ ಎಂದಿದ್ದಾರೆ 'ಗನ್' ಚಿತ್ರದ ನಿರ್ಮಾಪಕ ಮುರಳಿ. ಕೆಲದಿನಗಳಿಂದ ಹರೀಶ್ ರಾಜ್ ಅವರ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಈಗ ಅವರು ಎಲ್ಲಿದ್ದಾರೆ ಎಂಬ ಯಾವೊಂದು ಸುಳಿವೂ ದೊರಕುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಜುಲೈ 14, 2010ರಂದು ಹರೀಶ್ ರಾಜ್ ಅವರೊಂದಿಗೆ 'ಗನ್' ಚಿತ್ರ ನಿರ್ಮಾಣಕ್ಕೆ ರೂ. ಮೂವತ್ತು ಲಕ್ಷ ಸಹಾಯಯಾಚಿಸಿ ಒಪ್ಪಂದವೊಂದನ್ನು ಮಾಡಲಾಗಿತ್ತು. ಹಾಗೂ ಇದೇ ವೇಳೆ ತಾವೇ ಚಿತ್ರವನ್ನು ನಿರ್ಮಾಣ ಮಾಡಿ ಎಂದು ಬರವಸೆ ಕೊಟ್ಟ ಹರೀಶ್ ರಾಜ್, 'ಗನ್' ಚಿತ್ರಕ್ಕಾಗಿ ನನ್ನನ್ನು 1.62ಕೋಟಿ ವೆಚ್ಚ ಮಾಡುವಂತೆ ಮಾಡಿದ್ದಾರೆ ಎಂದು ನಿರ್ಮಾಪಕ ಮುರಳಿ ಹೇಳಿಕೆ ಕೊಟ್ಟಿದ್ದಾರೆ.

ಅಲ್ಲದೆ ಚಿತ್ರದ ಟಿವಿ ಹಕ್ಕನ್ನು ತನಗೆ ಯಾವೊಂದು ಮಾಹಿತಿಯನ್ನೂ ನೀಡದೆ ಉದಯಾ ಟಿವಿಗೆ ಮಾರಿ, ಬಂದ ಹಣವನ್ನೆಲ್ಲಾ ತನ್ನ ಹಿಂದಿನ 'ಕಲಾಕಾರ್' ಚಿತ್ರಕ್ಕಾಗಿ ಮಾಡಿದ್ದ ಸಾಲವನ್ನು ತೀರಿಸಲು ಬಳಸಿಕೊಂಡಿದ್ದಾರೆ ಎಂದು ಹರೀಶ್ ರಾಜ್ ವಿರುದ್ಧ ಸಲ್ಲಿಸಿದ್ದ ದೂರಿನಲ್ಲಿ ನಿರ್ಮಾಪಕ ಮುರಳಿ ಉಲ್ಲೇಖಿಸಿದ್ದಾರೆ.
ಇವನ್ನೂ ಓದಿ